ಕಿರುತೆರೆ ಹಾಸ್ಯ ಕಾರ್ಯಕ್ರಮದಲ್ಲಿ ಜಗ್ಗೇಶ್
ಬೆಂಗಳೂರು: ಬೆಳ್ಳಿತೆರೆಯಾಗಲಿ ಕಿರುತೆರೆಯಾಗಲಿ ತಮ್ಮ ಹಾಸ್ಯಮಯ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸುವ ಒಬ್ಬ ಜನಪ್ರಿಯ ನಟ ಜಗ್ಗೇಶ್, ಕಿರುತೆರೆಯಲ್ಲಿ ತಮ್ಮ ಹಾಸ್ಯವನ್ನು ಮುಂದುವರೆಸಿದ್ದಾರೆ.
ನಟ ಕಾಮಿಡಿ ಕಿಲಾಡಿಗಳು ಎಂಬ ಕಿರುತೆರೆ ಹಾಸ್ಯ ರಿಯಾಲಿಟಿ ಕಾರ್ಯಕ್ರಮಕ್ಕೆ ತೀರ್ಪುಗಾರನಾಗಿ, ಟಿವಿಗೆ ಪಾದಾರ್ಪಣೆ ಮಾಡಿದ್ದರು. ಈಗ ಜೂನ್ ೧೨ ರಿಂದ ಜೀ ವಾಹಿನಿ ಪ್ರಸಾರ ಮಾಡಲಿರುವ 'ಕಿಲಾಡಿ ಕುಟುಂಬ' ರಿಯಾಲಿಟಿ ಕಾರ್ಯಕ್ರಮದ ಭಾಗವಾಗಿಯೂ ಜಗ್ಗೇಶ್ ಕಾಣಿಸಿಕೊಳ್ಳಲಿದ್ದಾರೆ.
ಈ ಕಾರ್ಯಕ್ರಮವನ್ನು ಜಗ್ಗೇಶ್ ನಡೆಸಿಕೊಡಲಿದ್ದು, ಇದಕ್ಕೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಅಂತಿಮ ಹಂತಕ್ಕೆ ತೆರಳಿದ್ದ ೧೦ ಅಭ್ಯರ್ಥಿಗಳನ್ನು ಮತ್ತೆ ಹಿಂದಕ್ಕೆ ಕರೆತರಲಿದ್ದಾರೆ. ಇದರಲ್ಲಿ ಶಿವರಾಜ್, ನಯನ, ಪ್ರವೀಣ್, ಲೋಕೇಶ್ ಮತ್ತು ದಿವ್ಯಶ್ರೀ ಕೂಡ ಸೇರಿದ್ದಾರೆ.
ಈ ಕಾರ್ಯಕ್ರಮ ಕೌಟುಂಬಿಕ ಹಾಸ್ಯದ ಸುತ್ತ ಸುತ್ತಲಿದ್ದು, ಇದರ ಪ್ರಮೊ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics