ಸತ್ಯ ಹೆಗಡೆ 
ಸಿನಿಮಾ ಸುದ್ದಿ

ಕ್ವೀನ್ ತಮಿಳು ರಿಮೇಕ್ ಚಿತ್ರಕ್ಕೆ ಸತ್ಯಹೆಗಡೆ ಛಾಯಾಗ್ರಹಣ

ಹಲವು ಕನ್ನಡ ಚಲನ ಚಿತ್ರಗಳಲ್ಲಿ ಅತ್ಯದ್ಭುತ ಛಾಯಾಗ್ರಹಣ ಮಾಡಿರುವ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ತಮಿಳು ಚಿತ್ರರಂಗಕ್ಕೆ ಪಾದರ್ಪಣೆ ...

ಬೆಂಗಳೂರು: ಹಲವು ಕನ್ನಡ ಚಲನ ಚಿತ್ರಗಳಲ್ಲಿ ಅತ್ಯದ್ಭುತ ಛಾಯಾಗ್ರಹಣ ಮಾಡಿರುವ  ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ತಮಿಳು ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ.
ನಟ ನಿರ್ದೇಶಕ ರಮೇಶ್ ಅರವಿಂದ್ ಅವರ ತಮಿಳಿನ ಕ್ವೀನ್ ಸಿನಿಮಾಗೆ ಸತ್ಯ ಹೆಗಡೆ ಛಾಯಾಗ್ರಹಣ ಮಾಡಲಿದ್ದಾರೆ. 
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸತ್ಯ ಹೆಗಡೆ ಇದುವರೆಗೂ 28 ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ನಾನು ಮತ್ತು ರಮೇಶ್ ಬಹಳ ದಿನಗಳಿಂದ ಒಟ್ಟಿಗೆ ಕೆಲಸ ಮಾಡಬೇಕೆಂದು ನಿರ್ಧರಿಸಿದ್ದೆವು, ಅದು ಈಗ ಸಾಧ್ಯವಾಗಿದೆ. ನನಗೆ ಒಳ್ಳೆಯ ಅವಕಾಶ ಸಿಕ್ಕಿದೆ ಎಂದು ಸತ್ಯ ಹೆಗಡೆ ಹೇಳಿದ್ದಾರೆ.
ಕ್ವೀನ್ ಚಿತ್ರವನ್ನು ರಿಮೇಕ್ ಮಾಡಲು ನಿರ್ಧರಿಸಿದ ರಮೇಶ್, ಛಾಯಾಗ್ರಹಣಕ್ಕೆ ನನ್ನನ್ನು ಆರಿಸಿದರು. ಕ್ವೀನ್ ರಿಮೇಕ್ ಚಿತ್ರಕ್ಕೆ ಬಟರ್ ಫ್ಲೈ ಎಂದು ಹೆಸರು ಇಟ್ಟಿದ್ದು, ಇದರ ಕನ್ನಡ ಅವತರಣಿಕೆಯೂ ಕೂಡ ಬರಲಿದೆ ಎಂದು ಸತ್ಯ ಹೆಗಡೆ ತಿಳಿಸಿದ್ದಾರೆ.
ಅಗತ್ಯವಿರುವ ಸನ್ನಿವೇಶಗಳನ್ನು ಭಾರತದಲ್ಲಿ ಚಿತ್ರೀಕರಿಸಲಾಗುವುದು. ಆಗಸ್ಟ್ ಅಥವಾ ಸೆಪ್ಟಂಬರ್ ನಲ್ಲಿ  ವಿದೇಶದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ಸತ್ಯ ಹೆಗಡೆ ತಿಳಿಸಿದ್ದಾರೆ. ತಮಿಳು ರಿಮೇಕ್ ನಲ್ಲಿ  ಕಾಜಲ್ ಅಗರ್ ವಾಲ್ ಅಭಿನಯಿಸುತ್ತಿದ್ದು, ಕನ್ನಡದಲ್ಲಿ ಪಾರುಲ್ ಯಾದವ್ ಕ್ವೀನ್ ಪಾತ್ರ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT