'ಮೊಜೊ' ಸಿನೆಮಾದ ಸ್ಟಿಲ್ 
ಸಿನಿಮಾ ಸುದ್ದಿ

'ಮೊಜೊ' ಸಿನೆಮಾದೊಂದಿಗೆ ಶ್ರೀಶ ಪಾದಾರ್ಪಣೆ

ಶ್ರೀಶ ಬೆಳಕವಾಡಿ 'ಮೊಜೊ' ಸಿನೆಮಾದ ಮೂಕಲ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ.

ಬೆಂಗಳೂರು: ಶ್ರೀಶ ಬೆಳಕವಾಡಿ 'ಮೊಜೊ' ಸಿನೆಮಾದ ಮೂಕಲ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದ್ದಾರೆ. 
'ಮೊಜೊ' ಸಿನೆಮಾಗೆ ಶ್ರೀಶ ಸಹನಿರ್ಮಾಪಕರು ಕೂಡ. ಅವರ ಅನಿವಾಸಿ ಭಾರತೀಯ ಗೆಳೆಯರಾದ ಸತೀಶ್ ಪಾಠಕ್, ಮನಯ್ಯ ಬೆಲ್ಲಿಂಗುರ್ ಮತ್ತು ಸಂತೋಷ್ ಪಾಟೀಲ್ ಎಂಬ ಮೂವರು ಕ್ಯಾಲಿಫೋರ್ನಿಯಾ ಮೂಲದ ಸಾಫ್ಟ್ವೇರ್ ಎಂಜಿನಿಯರ್ ಗಳು ಸಿನೆಮಾ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. 
'ಮೊಜೊ' 'ಸಿಕ್ಸ್ತ್ ಸೆನ್ಸ್' ಕಲ್ಪನೆಯ ಬಗೆಗಿನ ಥ್ರಿಲ್ಲರ್ ಅಂತೆ. "ನುರಿತ ರಂಗಭೂಮಿ ಕಲಾವಿದರಾದ ಮನು, ಅನೂಷಾ ಇದರಲ್ಲಿ ನಟಿಸಿದ್ದಾರೆ. ನಿಸರ್ಗದ ನಿಗೂಢತೆ ಮತ್ತು ಮನುಷ್ಯನ ಸ್ವಭಾವವನ್ನು ಈ ಸಿನೆಮಾ ಒಳಗೊಂಡಿದೆ. ಒಂದು ಕೊಲೆಯ ಸುತ್ತ ಇರುವ ಹಲವು ನಿಗೂಢತೆಗಳು ಕಾಣಲಿವೆ" ಎನ್ನುತ್ತಾರೆ ನಿರ್ದೇಶಕ. 
ಮತ್ತೊಂದು ಆಸಕ್ತಿದಾಯಕ ವಿಷಯದಲ್ಲಿ 'ಲಾಸ್ಟ ಬಸ್' ಖ್ಯಾತಿಯ ನಿರ್ದೇಶಕ ಎಸ್ ಡಿ ಅರವಿಂದ್ ಈ ಸಿನೆಮಾಗೆ ಸಂಗೀತ ನಿರ್ದೇಶಿಸಿದ್ದಾರೆ. ಅನಂತ್ ಅರಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. 
ಸದ್ಯಕ್ಕೆ ಸಿನೆಮಾ ಸೆನ್ಸಾರ್ ಮಂಡಳಿ ಮುಂದಿದ್ದು, ಹಲವು ಸಿನೆಮೋತ್ಸವಗಳಿಗೂ ಇದನ್ನು ಕಳುಹಿಸಿಕೊಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ