ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ವಿಲನ್ ಚಿತ್ರ ತಂಡ ಜುಲೈ 10 ರಿಂದ ಬ್ಯಾಂಕಾಕ್ ಮತ್ತು ಲಂಡನ್ ಗಳಲ್ಲಿ ಶೂಟಿಂಗ್ ಆರಂಭಿಸಲಿದೆ.
ಜೂನ್ 2 ರಂದು ಲಂಡನ್ ನಲ್ಲಿ ನಡೆದ ಭಯೋತ್ಪಾದಕರ ದಾಳಿಯಿಂದಾಗಿ ಮೊದಲು ಬ್ಯಾಂಕಾಕ್ ನಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿರುವ ಚಿತ್ರ ತಂಡ ಶೂಟಿಂಗ್ ಲೊಕೇಶನ್ ಗಳನ್ನು ಗುರುತು ಹಚ್ಚಿದೆ. ಸುದೀಪ್ ಮತ್ತು ಶಿವರಾಜ್ ಕುಮಾರ್ ಈಗಾಗಲೇ ಬ್ಯಾಂಕಾಕ್ ತಲುಪಿದ್ದು, ಆ್ಮಿ ಜಾಕ್ಸನ್ ಜೂನ್ 18 ರಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಲಂಡನ್ ನಲ್ಲಿ ಮೊದಲು ಶೂಟಿಂಗ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಉಗ್ರರ ದಾಳಿ ಹಿನ್ನೆಲೆಯಲ್ಲಿ ಲಂಡನ್ ಶೂಟಿಂಗ್ ಮುಂದೂಡಲಾಗಿದೆ. ಆ್ಯಮಿ ಜಾಕ್ಸನ್ ಅಧಿಕೃತವಾಗಿ ಬ್ಯಾಂಕಾಕ್ ನ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
ತನ್ವಿ ಪ್ರೊಡಕ್ಷನ್ ಅಡಿ ತಯಾರಾಗುತ್ತಿರುವ ವಿಲನ್ ಚಿತ್ರವನ್ನು ಸಿಆರ್ ಮನೋಹರ್ ನಿರ್ಮಿಸುತ್ತಿದ್ದಾರೆ, ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಜಾಕ್ಸನ್ ಸಿದ್ದತೆ ನಡೆಸಿದ್ದಾರೆ.
ತೆಲುಗು ನಟ ಶ್ರೀಕಾಂತ್ ಹಾಗೂ ಬಿ- ಟೌನ್ ದಾದಾ ಮಿಥುನ್ ಚಕ್ರವರ್ತಿ ವಿಲನ್ ಸಿನಿಮಾದಲ್ಲಿ ನಟಿಸಲಿದ್ದಾರೆ.