ಸಿದ್ದರಾಮಯ್ಯ 
ಸಿನಿಮಾ ಸುದ್ದಿ

ಕವಿತಾ ಲಂಕೇಶ್ ನಿರ್ದೇಶನದ ಸಿನಿಮಾದಲ್ಲಿ ಸಿಎಂ ಸಿದ್ದರಾಮಯ್ಯ ನಟನೆ

ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗುತ್ತಿರುವ ಸಮ್ಮರ್‌ ...

ಬೆಂಗಳೂರು: ಬಿಡುವಿಲ್ಲದ ರಾಜಕೀಯ  ಚಟುವಟಿಕೆಗಳ ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗುತ್ತಿರುವ ಸಮ್ಮರ್‌ ಹಾಲಿಡೇಸ್‌  ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ.
ಕವಿತಾ ಲಂಕೇಶ್ ನಿರ್ದೇಶನದ ಈ ಚಿತ್ರ ಅಕ್ಟೋಬರ್ ವೇಳೆಗೆ ತೆರೆ ಕಾಣಲಿದೆ. ಸಿದ್ದರಾಮಯ್ಯನವರು 10 ನಿಮಿಷ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗುರುವಾರ ಅಥವಾ ಶುಕ್ರವಾರ ಚಿತ್ರೀಕರಣ ನಡೆಯಲಿದೆ
ಮಕ್ಕಳಿಗೆ ಬೋಧನೆ ಮಾಡುವ, ಕಷ್ಟಗಳನ್ನೇ ಬಿಂಬಿಸುವ  ಚಿತ್ರದ ಬದಲಿಗೆ ಅಪ್ಪಟ ಮನರಂಜನೆಯ ಮೂಲಕ ಪರೋಕ್ಷ ಸಂದೇಶ ನೀಡುವ ಚಿತ್ರ ಇದಾಗಿದೆ. ದಿಡ್ಡಳ್ಳಿ ಮಾದರಿಯ ಗಿರಿಜನ ಹೋರಾಟದಲ್ಲಿ ಭಾಗಿಯಾಗುವ ಮಕ್ಕಳು ನೆರವು ಕೋರಿ ಮುಖ್ಯಮಂತ್ರಿಗೆ ಮನವಿ ಮಾಡುತ್ತಾರೆ. ಮಕ್ಕಳಿಗೆ ಸಹಾಯ ನೀಡುವ ಪಾತ್ರವನ್ನು ಸಿದ್ದರಾಮಯ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದೊಂದು ಮಕ್ಕಳ ಚಿತ್ರವಾಗಿದ್ದು ಈ ಚಿತ್ರದಲ್ಲಿ ಕವಿತಾ ಲಂಕೇಶ್ ಮಗಳು ಈಶ ಹಾಗೂ ಕವಿತಾ ತಮ್ಮ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಅಭಿನಯಿಸುತ್ತಿದ್ದಾರೆ. ನಟ ರಮೇಶ್‌ ಅರವಿಂದ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡುವ ‘ವೀಕೆಂಡ್ ವಿತ್ ರಮೇಶ್‌’ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾಣಿಸಿಕೊಳ್ಳಲಿದ್ದಾರೆ.
ನಾನು ಎಲ್ ಎಲ್ ಬಿ ಓದುತ್ತಿದ್ದಾಗ ನಾಟಕಗಳಲ್ಲಿ ಅಭಿನಯಿಸಿದ್ದೆ, ನನಗೆ ಸಿನಿಮಾ ನೋಡುವುದು ತುಂಬಾ ಇಷ್ಟ. ಈ ಹಿಂದೆ ಹಲವು ಬಾರಿ ಸಿನಿಮಾದಲ್ಲಿ ನಟಿಸುವಂತೆ ಕವಿತಾ ಕೇಳಿದ್ದರು. ಈಗ ಸಮಯ ಕೂಡಿ ಬಂದಿದ್ದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT