ಮುಂಬಯಿ: 25 ವರ್ಷಗಳ ಹಿಂದೆ ದಿವಾನಾ ಸಿನಿಮಾದ ಮೂಲಕ ಮ್ಯಾಜಿಕ್ ಮಾಡಿ,ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮುಂಬಯಿಯ 'ಮನ್ನತ್' ನಿವಾಸದೆದುರು ಈದ್ ಅಂಗವಾಗಿ ಸೋಮವಾರ ಸಾವಿರಾರು ಅಭಿಮಾನಿಗಳು ನೆರೆದಿದ್ದರು.
ಅಭಿಮಾನಿಗಳ ಪ್ರೀತಿಯೇ ತಮಗೆ ಬಹುದೊಡ್ಡ ಪ್ರೇರೇಪಣೆ ಎಂದು ಶಾರುಖ್ ಹೇಳಿದ್ದಾರೆ. 1992ರ ಜೂನ್ 25 ರಂದು ಶಾರುಖ್ ಖಾನ್ ಅವರ ದಿವಾನ ಸಿನಿಮಾ ರಿಲೀಸ್ ಆಯಿತು, ಅದಕ್ಕೂ ಮುನ್ನ ಶಾರುಖ್ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದರು.
ನನ್ನನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಹೊರಗಡೆ ಕಾಯುತ್ತಿದ್ದಾರೆ.ಈ ಜನಗಳ ಅಪಾರ ಪ್ರೀತಿ ನನಗೆ ಪ್ರೇರಪಣೆ ಎಂದು ಹೇಳಿದ್ದಾರೆ.
ಈ ವರ್ಷದ ಈದ್ ನನಗೆ ತುಂಬಾ ವಿಶೇಷವಾಗಿದೆ, ಏಕೆಂದರೇ 25 ವರ್ಷಗಳ ಹಿಂದೆ 1992ರ ಜೂನ್ 25 ರಂದು ದಿವಾನಾ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದಿಂದ ಬಾಲಿವುಡ್ ನಲ್ಲಿ ಶಾರುಖ್ ನೆಲೆ ನಿಲ್ಲುವಂತಾಯಿತು.
25 ವರ್ಷ ಸುದೀರ್ಘ ಸಮಯ, ನನ್ನ ಜೀವನದ ಅರ್ಧಆಯಸ್ಸನ್ನು ಸಿನಿಮಾ ರಂಗದಲ್ಲೇ ಕಳೆದಿದ್ದೇನೆ. ಈ ವರ್ಶ ನನಗೆ 52 ವಯಸ್ಸಾಗುತ್ತದೆ.ಇಷ್ಟು ವರ್ಷ ನನ್ನನ್ನು ಪ್ರೀತಿಯಿಂದ ಸಹಿಸಿಕೊಂಡು ಬಂದ ಜನರಿಗೆ ನಾನು ಥ್ಯಾಂಕ್ಸ್ ಹೇಳುವುದಿಲ್ಲ ಎಂದು ಹೇಳಿ ಶಾರುಖ್ ಮಾಧ್ಯಮಗಳಿಗೆ ಕೈ ಮುಗಿದರು.
ಪುತ್ರಿ ಸುಹಾನಾ ಈಗ ಕ್ಯಾಮೆರಾವನ್ನು ಸುಲಭವಾಗಿ ಎದುರಿಸುತ್ತಿದ್ದಾಳೆ, ಮಗಳನ್ನು ನಟಿಯಾಗಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಕರೆತರುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾರುಖ್, ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುತ್ತಾರೆ ಎಂದರೇ ಅದರ ಅರ್ಥ, ಅವರು ನಟರಾಗಬೇಕು ಎಂಬುದಲ್ಲ, ನನ್ನ ಮಕ್ಕಳು ಅವರ ವಿದ್ಯಾಭ್ಯಾಸ ಮುಗಿಸಿದ ಮೇಲೆ, ಮುಂದಿನ ಯೋಚನೆ ಎಂದು ತಿಳಿಸಿದ್ದಾರೆ.