ವಿಕ್ರಂ ರವಿಚಂದ್ರನ್ 
ಸಿನಿಮಾ ಸುದ್ದಿ

ವಿಕ್ರಂ ರವಿಚಂದ್ರನ್ ಪಾದಾರ್ಪಣೆ ಚಿತ್ರವನ್ನು ನಿರ್ದೇಶಿಸಲಿರುವ ನಾಗಶೇಖರ್

ಜನಪ್ರಿಯ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಇನ್ನೇನು ಬಿಡುಗಡೆಯಾಗಬೇಕಿದ್ದು, ನಟನ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಕೂಡ ಈಗ ಪಾದಾರ್ಪಣೆ

ಬೆಂಗಳೂರು: ಜನಪ್ರಿಯ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಚೊಚ್ಚಲ ಚಿತ್ರ 'ಸಾಹೇಬ' ಇನ್ನೇನು ಬಿಡುಗಡೆಯಾಗಬೇಕಿದ್ದು, ನಟನ ದ್ವಿತೀಯ ಪುತ್ರ ವಿಕ್ರಂ ರವಿಚಂದ್ರನ್ ಕೂಡ ಈಗ ಪಾದಾರ್ಪಣೆ ಮಾಡಲು ಸಿದ್ಧರಾಗುತ್ತಿದ್ದಾರೆ. 
ಈ ನಟನ ಲಾಂಚ್ ಬಗ್ಗೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು, ಹಲವು ನಿರ್ದೇಶಕರನ್ನು ಪರಿಗಣಿಸಲಾಗಿತ್ತಂತೆ. ಈಗ ಮೂಲಗಳು ತಿಳಿಸಿರುವ ಪ್ರಕಾರ ನಾಗಶೇಖರ್, ವಿಕ್ರಂ ಅವರ ಚೊಚ್ಚಲ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದನ್ನು ಆರ್ ಎಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಕನಕಪುರ ಶ್ರೀನಿವಾಸ್ ನಿರ್ಮಿಸಲಿದ್ದಾರೆ ಎನ್ನಲಾಗಿದೆ. 
ವಿಕ್ರಂ ತಮ್ಮ ತಂದೆಯವರ ಸಿನೆಮಾಗಳಿಗೆ ಸಹಾಯಕನಾಗಿ ದುಡಿದಿರುವುದಲ್ಲದೆ ಸಣ್ಣ ಪುಟ್ಟ ಪಾತ್ರಗಳನ್ನೂ ಕೂಡ ನಿರ್ವಹಿಸಿದ್ದಾರೆ. ಮನೋರಂಜನ್ ಅವರ 'ಸಾಹೇಬ' ಸೆಟ್ ನಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ ವಿಕ್ರಂ, ಸಹೋದರನ ಸಿನೆಮಾ ಸ್ಕ್ರಿಪ್ಟ್ ಗಳನ್ನು ಕೂಡ ಓದಿ, ಹಲವು ಬದಲಾವಣೆಗಳನ್ನು ಸೂಚಿಸಿದ್ದರಂತೆ. ಈಗ ನಾಗಶೇಖರ್ ಅವರ ಸಿನೆಮಾದಲ್ಲಿ ಸಂಪೂರ್ಣ ಪ್ರಮಾಣದ ಹೀರೊ ಆಗಿ ಹೊರಹೊಮ್ಮಲು ಸಿದ್ಧರಾಗಿದ್ದಾರೆ. 
ಮೂಲಗಳು ತಿಳಿಸುವಂತೆ "ಆರ್ ಎಸ್ ಪ್ರೊಡಕ್ಷನ್ಸ್ ಮತ್ತು ನಾಗಶೇಖರ್ ನಡುವೆ ಮುಂಚೆಯೇ ಒಂದು ಒಪ್ಪಂದವಾಗಿತ್ತು. ಚಲನಚಿತ್ರವೊಂದನ್ನು ನಿರ್ದೇಶಿಸಲು ನಿರ್ಮಾಣಸಂಸ್ಥೆ ನಾಗಶೇಖರ್ ಅವರಿಗೆ ಮುಂಗಡ ನೀಡಿತ್ತು. ಈಗ ರವಿಚಂದ್ರನ್ ಮತ್ತು ವಿಕ್ರಂ ನಾಗಶೇಖರ್ ಅವರ ಹೊಸ ಸ್ಕ್ರಿಪ್ಟ್ ಅನ್ನು ಇಷ್ಟಪಟ್ಟಿದ್ದು, ಹಲವು ಸುತ್ತಿನ ಮಾತುಕತೆಗಳ ನಂತರ ಹಸಿರು ನಿಶಾನೆ ಸಿಕ್ಕಿದೆ" ಎನ್ನುತ್ತವೆ. 
ಆಸಕ್ತಿದಾಯಕ ಮಾಹಿತಿಯಲ್ಲಿ ಈ ಸಿನೆಮಾ ದ್ವಿಭಾಷಾ ಚಿತ್ರವಾಗಿರಲಿದ್ದು ಕನ್ನಡ ಮತ್ತು ತಮಿಳಿನಲ್ಲಿ ಮೂಡಿಬರಲಿದೆ. ಎಲ್ಲವು ಸುಸೂತ್ರವಾಗಿ ನಡೆದರೆ, ಆಷಾಢ ಕಳೆದ ನಂತರ ಆಗಸ್ಟ್ ಮೊದಲ ವಾರದಲ್ಲಿ ಸಿನೆಮಾಗೆ ಚಾಲನೆ ಸಿಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel