'ಮುತ್ತಿನ ಹಾರ' ಸಿನೆಮಾದಲ್ಲಿ ನಟ ಪೃಥ್ವಿ 
ಸಿನಿಮಾ ಸುದ್ದಿ

'ಮುತ್ತಿನ ಹಾರ'ಕ್ಕೆ ಲುಕ್ಸ್ ಬದಲಿಸಿಕೊಂಡ ಪೃಥ್ವಿ

ಪ್ರೀತಮ್ ಗುಬ್ಬಿ ಅವರ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದ ಮೂಲಕ ನಟನೆಯ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ನಟ ಪೃಥ್ವಿ ಕುಮಾರ್ ಈಗ ಅವರ ಎರಡನೇ ಸಿನೆಮಾ 'ಮುತ್ತಿನ ಹಾರ'ದ

ಬೆಂಗಳೂರು: ಪ್ರೀತಮ್ ಗುಬ್ಬಿ ಅವರ 'ನಾನು ಮತ್ತು ವರಲಕ್ಷ್ಮಿ' ಸಿನೆಮಾದ ಮೂಲಕ ನಟನೆಯ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದ ನಟ ಪೃಥ್ವಿ ಕುಮಾರ್ ಈಗ ಅವರ ಎರಡನೇ ಸಿನೆಮಾ 'ಮುತ್ತಿನ ಹಾರ'ದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ನೋಟವನ್ನು ಪಾತ್ರದ ಅಗತ್ಯಕ್ಕೆ ತಕ್ಕಂತೆ ಬದಲಿಸಿಕೊಂಡಿರುವುದು ವಿಶೇಷ.
ರಿಷಿ ರಾಮಯ್ಯ ಅವರ ಚೊಚ್ಚಲ ಚಿತ್ರವಾದ 'ಮುತ್ತಿನ ಹಾರ' ಸುಮಾರು ೪೦% ಚಿತ್ರೀಕರಣ ಮುಗಿಸಿದೆ. 
ನಟ ಪೃಥ್ವಿ ಒಂದೂವರೆ ತಿಂಗಳ ವಿರಾಮ ತೆಗೆದುಕೊಂಡು ಅಮೆರಿಕಾಗೆ ವ್ಯಾವಹಾರಿಕ ಪ್ರವಾಸಕ್ಕಾಗಿ ತೆರಳಿದ್ದರು. ಈ ಸಮಯವನ್ನು ಅವರು ಗಡ್ಡ ಬೆಳೆಸುವುದಕ್ಕೆ ಮತ್ತು ೧೦ ಕೆಜಿ ತೂಕ ಕಳೆದುಕೊಳ್ಳುವುದಕ್ಕೆ ವಿನಿಯೋಗಿಸಿದರಂತೆ. 
ಈ ಪಾತ್ರವನ್ನು ಅಭಿನಯಿಸಲು ಪೃಥ್ವಿಯವರಿಗೆ ಈ ನೋಟದ ಅವಶ್ಯಕತೆ ಇತ್ತು ಎನ್ನುವ ನಿರ್ದೇಶಕ "ಪೃಥ್ವಿ ಅವರ ಪಾತ್ರದಲ್ಲಿ ಎರಡು ಬದಲಾವಣೆಗಳು ಇರಲಿವೆ. ಈಗ ಅವರ ಹೊಸ ನೋಟ ನಮ್ಮ ಪಾತ್ರಕ್ಕೆ ಸರಿಯಾಗಿ ಹೊಂದುತ್ತಿದ್ದು, ಮುಂದಿನ ಹಂತದ ಚಿತ್ರೀಕರಣ ಜುಲೈ ೧೦ ರಿಂದ ಪ್ರಾರಂಭವಾಗಲಿದೆ" ಎನ್ನುತ್ತಾರೆ.
ಇದು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ೧೯೯೦ರ ಪ್ರಖ್ಯಾತ ಸಿನೆಮಾ ಮುತ್ತಿನ ಹಾರ ಶೀರ್ಷಿಕೆಯನ್ನೇ ಹೊತ್ತಿರುವುದು ವಿಶೇಷ. ಆ ಸಿನೆಮಾದಲ್ಲಿ ವಿಷ್ಣುವರ್ಧನ್ ಮತ್ತು ಸುಹಾಸಿನಿ ನಟಿಸಿದ್ದರು. ಈ ಸಿನೆಮಾದಲ್ಲಿ ವಿಷ್ಣು, ಪೃಥ್ವಿ ಪಾತ್ರದ ತಂದೆಯಾಗಿ ಮೂಡಲಿದ್ದಾರಂತೆ ಮತ್ತು ಪೃಥ್ವಿ ಅವರ ಪಾತ್ರದ ಹೆಸರು ವಿರಾಜ್ ಎಂತಿದ್ದು, ಹಳೆಯ ಮುತ್ತಿನ ಹಾರ ಸಿನೆಮಾದಲ್ಲಿ ವಿಷ್ಣು-ಸುಹಾಸಿನಿ ಜೋಡಿಯ ಪುತ್ರನ ಹೆಸರೂ ಕೂಡ ವಿರಾಜ್ ಆಗಿತ್ತು. ಇಲ್ಲಿಯೂ ಪೃಥ್ವಿ ತಾಯಿಯ ಪಾತ್ರಕ್ಕೆ ಸುಹಾಸಿನಿ ಅವರನ್ನು ಕೇಳಿಕೊಳ್ಳಲಾಗಿತ್ತಾದರೂ, ದಿನಾಂಕಗಳ ಹೊಂದಾಣಿಕೆಯಾಗಲಿಲ್ಲ ಎನ್ನುತ್ತಾರೆ ನಿರ್ದೇಶಕ. ಹಳೆಯ ಮುತ್ತಿನ ಹಾರ ಕಥೆಗೂ ನಮ್ಮ ಸಿನೆಮಾಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ರಿಷಿ "ಇದು ಥ್ರಿಲ್ಲರ್ ಸಿನೆಮಾ" ಎನ್ನುತ್ತಾರೆ. 
ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದು, ಆಕಾಂಕ್ಷ ಪೂಜಾರಿ ನಾಯಕನಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ