ಬೆಂಗಳೂರು: ಗೋಹತ್ಯೆ ಪರವಾಗಿರುವವರ ವಿರುದ್ಧ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಖ್ಯಾತ ಚಿತ್ರ ನಟ ಜಗ್ಗೇಶ್, ಬೇರೆ ಧರ್ಮದವರಿಗಿಂತ ಹಿಂದೂಗಳು ಇತ್ತೀಚೆಗೆ ಕಲಬೆರಕೆಗಳಾಗಿದ್ದೂ, ಯಾರೊಬ್ಬರು ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ ಎಂದು ಮಂಗಳವಾರ ಹೇಳಿದ್ದಾರೆ.
ನಗರದ ಮೇಖ್ರಿ ವೃತ್ತದಲ್ಲಿ ನಿನ್ನೆ ಕೆಂಪೇಗೌಡ ಜಯಂತಿ ಪ್ರಯುಕ್ತ ಗಡಿಗೋಪುರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, ಕೆಲವರು ಗೋಮಾಂಸ ತಿನ್ನುತ್ತೇವೆಂಬ ಹೇಳಿಕೆ ನೀಡುವವರು ಬೇಕೆ ಧರ್ಮದ ಬಗ್ಗೆ ಮಾತನಾಡಿದರೆ, ಗಲಾಟೆ ನಡೆಸಲಾಗುತ್ತದೆ. ಯಾರೊಬ್ಬರೂ ಬೇರೆ ಧರ್ಮದ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಹಿಂದೂಗಳು ಮಾತ್ರ ಕಲಬೆರಕೆಗಳಾಗಿದ್ದಾರೆಂದು ಕಿಡಿಕಾರಿದ್ದಾರೆ.
ಹಿಂದುಗಳ ಕುರಿತು ಹಾಗೂ ದೇವರ ನಂಬಿಕೆ ಬಗ್ಗೆ ಮಾಧ್ಯಮಗಳೇ ಗಂಟೆಗಟ್ಟಲೇ ಚರ್ಚೆ ಮಾಡುತ್ತವೆ. ಇದನ್ನು ಜನ ಕಣ್ಣುಬಿಟ್ಟು ನೋಡುತ್ತಾರೆ. ಇಂತಹ ಮನಃಸ್ಥಿತಿಯನ್ನು ಬದಲಿಸಿಕೊಳ್ಳಬೇಕು. ಭಗವದ್ಗೀತೆ ಎಲ್ಲಿದೆ, ದೇವರು ಎಲ್ಲಿದೆ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂದ ಅವರು, ಕೆಂಪೇಗೌಡ ಅವರು ತಾವೊಬ್ಬರೇ ಬದುಕುವದನ್ನು ಯೋಚನೆ ಮಾಡಿಲ್ಲ. ನಾಡಿನ ಜನತೆ ನೆಮ್ಮದಿಯಿಂದ ಸಂಪ್ರದಾಯದಂತೆ ಬದುಕಲು ಬೆಂಗಳೂರು ಕಟ್ಟಿದ್ದಾರೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics