ವಿನಯ್ ರಾಜ್ ಕುಮಾರ್ ಮುಂದಿನ ಸಿನಿಮಾಗೆ ಮೂವರು ನಾಯಕಿಯರು?
ನೀಲ್ ತಾಲ್ಯ ನಿರ್ದೇಶನ ಹೊಸ ಸಿನಿಮಾದಲ್ಲಿ ನಟ ವಿನಯ್ ರಾಜ್ ಕುಮಾರ್ ಜೊತೆ ಮೂವರು ನಾಯಕಿಯರು ಅಭಿನಯಿಸಲಿದ್ದಾರೆ. ...
ಬೆಂಗಳೂರು: ಸುನೀಲ್ ತಾಲ್ಯ ನಿರ್ದೇಶನ ಹೊಸ ಸಿನಿಮಾದಲ್ಲಿ ನಟ ವಿನಯ್ ರಾಜ್ ಕುಮಾರ್ ಜೊತೆ ಮೂವರು ನಾಯಕಿಯರು ಅಭಿನಯಿಸಲಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾಗೆ ಆಷಾಢ ಆರಂಭಕ್ಕೂ ವಿನಯ್ ರಾಜ್ ಮನೆಯಲ್ಲಿ ಸಣ್ಣ ಪೂಜೆ ನಡೆಸಿ ಹೊಸ ಪ್ರಾಜೆಕ್ಟ್ ಗೆ ಚಾಲನೆ ನೀಡಲಾಗಿದೆ.
ಕೊನೆಯ ಹಂತದ ಸಿದ್ಧತೆಗಳೊಂದಿಗೆ ವಿನಯ್ ರಾಜ್ ಫೋಟೋ ಶೂಟ್ ನಡೆಸಲಾಗಿದೆ, ಈ ಸಿನಿಮಾದಲ್ಲಿ ವಿನಯ್ ಗೆ ಮೂವರು ನಾಯಕಿಯರಿದ್ದಾರೆ. ಸಿನಿಮಾ ತಂಡ ಪ್ರತಿಭಾವಂತ ನಾಯಕಿಯರಿಗಾಗಿ ಹುಡುಕಾಟ ನಡೆಸುತ್ತಿದೆ.
ಆಯ್ಕೆ ಪ್ರಕ್ರಿಯೆ ಅಂತಿಮಘಟ್ಟ ತಲುಪಿದ್ದು, ಶೀಘ್ರದಲ್ಲೇ ನಾಯಕಿಯರ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂವಗಳು ತಿಳಿಸಿವೆ. ವಿನಯ್ ಎರಡು ಸಿನಿಮಾಗಳಲ್ಲಿ ನಟಿಸುವ ಯೋಜನೆ ಹೊಂದಿದ್ದು, ಮತ್ತೊಂದು ಉತ್ತಮ ಕಥೆಗಾಗಿ ಕಾಯುತ್ತಿದ್ದಾರೆ. ಮುಂದಿನ ಚಿತ್ರದ ಕಥೆ ಹೇಗಿರುತ್ತದೆ ಎಂಬುದನ್ನು ಸಮಯವ್ ನಿರ್ಧರಿಸಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.