ನಟ-ನಿರ್ದೇಶಕ ಪವನ್ ಒಡೆಯರ್ 
ಸಿನಿಮಾ ಸುದ್ದಿ

ಪವನ್ ಒಡೆಯರ್ ಗೆ 'ಶಾದಿ ಭಾಗ್ಯ'; ಶ್ರೀನರಸಿಂಹ ನಿರ್ದೇಶನ

ತೆಲುಗು ಹಿಟ್ ಸಿನೆಮಾ 'ಪೆಳ್ಳಿ ಚೊಪ್ಪುಲು' ಕನ್ನಡಕ್ಕೆ 'ಶಾದಿ ಭಾಗ್ಯ'ವಾಗಿ ಬರಲು ಸಿದ್ಧವಾಗಿದೆ. ಈ ವಾರ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ.

ಬೆಂಗಳೂರು: ತೆಲುಗು ಹಿಟ್ ಸಿನೆಮಾ 'ಪೆಳ್ಳಿ ಚೊಪ್ಪುಲು' ಕನ್ನಡಕ್ಕೆ 'ಶಾದಿ ಭಾಗ್ಯ'ವಾಗಿ ಬರಲು ಸಿದ್ಧವಾಗಿದೆ. ಈ ವಾರ ಸಿನೆಮಾ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ. 
ಈ ಮೊದಲು ಘೋಷಿಸಿದ್ದಂತೆ ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ ಇಳಿದಿರುವ ಮುರಳಿ ಮಾಸ್ಟರ್ ಈ ಸಿನೆಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಸಮಯದ ಕಲಹದಿಂದ ಅವರು ಹಿಂದೆ ಸರಿದಿದ್ದಾರಂತೆ. ಈಗ ನಿರ್ದೇಶಕರ ಖುರ್ಚಿಯನ್ನು ಅಲಂಕರಿಸಿರುವವರು ಶ್ರೀನರಸಿಂಹ. 'ಶಾದಿ ಭಾಗ್ಯ'ದ ಮೂಲಕ ಅವರು ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. 
ಪವನ್ ಒಡೆಯರ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿರುವ ಈ ಚೊಚ್ಚಲ ನಿರ್ದೇಶಕ ರಮೇಶ್ ಅರವಿಂದ್ ಅವರ 'ಪುಷ್ಪಕ ವಿಮಾನ' ಸಿನೆಮಾದಲ್ಲಿ ಕೂಡ ದುಡಿದ ಅನುಭವ ಹೊಂದಿರುವವರು. ಈಗ ಸ್ವತಂತ್ರ ನಿರ್ದೇಶಕನಾಗಿ ಹೊರಮೊಮ್ಮಲು ಉತ್ಸುಕರಾಗಿದ್ದಾರೆ. 
ಈ ಸುದ್ದಿಯನ್ನು ಧೃಢೀಕರಿಸುವ ನಿರ್ಮಾಪಕ ಹರ್ಷ ಖಾಸನೀಸ್ "ಮುರಳಿ ಮಾಸ್ಟರ್ ಅವರ ಪೂರ್ವನಿಯೋಜಿತ ಕಾರ್ಯಕ್ರಮಗಳಿಂದ ಈ ಸಿನೆಮಾ ನಿರ್ದೇಶಿಸಲು ಸಾಧ್ಯವಾಗುತ್ತಿಲ್ಲ ಆದುದರಿಂದ ನಾವು ನರಸಿಂಹ ಅವರನ್ನು ಕರೆತಂದಿದ್ದೇವೆ" ಎನ್ನುತ್ತಾರೆ. 
ಶ್ರದ್ಧ ಶ್ರೀನಾಥ್ ನಾಯಕನಟಿಯಾಗಿರುವ ಈ ಸಿನೆಮಾದಲ್ಲಿ, ನಿರ್ದೇಶಕ ಪವನ್ ಒಡೆಯರ್ ಹೀರೊ ಆಗಿ ನಟಿಸುತ್ತಿರುವುದು ವಿಶೇಷ. ಪವನ್ ಈ ಹಿಂದೆ 'ಬಹುಪರಾಕ್' ನಲ್ಲಿ ಅತಿಥಿ ನಟರಾಗಿದ್ದರು. ೨೦೧೪ ರಲ್ಲಿ ಬಿಡುಗಡೆಯಾದ 'ಪ್ರೀತಿ ಗೀತಿ ಇತ್ಯಾದಿ'ಯಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ನಾನು ನಟನಾಗಲೆಂದೇ ಚಿತ್ರರಂಗಕ್ಕೆ ಬಂದವನು ಎಂದು ತಿಳಿಸುವ ಪವನ್ "ಈಗ 'ಶಾದಿ ಭಾಗ್ಯ'ದಲ್ಲಿ ಮತ್ತೆ ನಟಿಸಲಿದ್ದೇನೆ" ಎನ್ನುತ್ತಾರೆ. 
ಈ ಪಾತ್ರಕ್ಕಾಗಿ ೧೫ ಕೆಜಿ ತೂಕ ಕಳೆದುಕೊಂಡಿರುವುದಾಗಿಯೂ ತಿಳಿಸುತ್ತಾರೆ ನಟ-ನಿರ್ದೇಶಕ ಪವನ್. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT