ಸರೋಜಮ್ಮ 
ಸಿನಿಮಾ ಸುದ್ದಿ

30 ವರ್ಷದ ಸಿನಿಮಾ ವೃತ್ತಿ ಜೀವನ, ಆದರೂ ಸಹನಟಿ!

1986ರಲ್ಲಿ ಇವರಿಗೆ ಕನ್ನಡ ಚಿತ್ರವೊಂದರ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದಾಗ 20 ವಯಸ್ಸಿನ...

ಬೆಂಗಳೂರು: 1986ರಲ್ಲಿ ಇವರಿಗೆ ಕನ್ನಡ ಚಿತ್ರವೊಂದರ ಪಾತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದಾಗ 20ರ ಹರೆಯದ ಆಸುಪಾಸಿನಲ್ಲಿದ್ದರು. ಆ ಸಿನಿಮಾದಲ್ಲಿ ಕೇವಲ 2 ನಿಮಿಷದ ಪಾತ್ರವಾಗಿತ್ತು. ಅದನ್ನು ಅವರು ಎರಡು ಕಾರಣಗಳಿಗಾಗಿ ಒಪ್ಪಿಕೊಂಡರು. ಒಂದು ಹಣಕ್ಕಾಗಿ, ಆ ಪಾತ್ರಕ್ಕೆ 5 ರೂಪಾಯಿ ಗೌರವ ಧನ ಸಿಕ್ಕಿತ್ತು. ಇನ್ನೊಂದು ಕನ್ನಡದ ಮೇರು ನಟ ಡಾ.ರಾಜ್ ಕುಮಾರ್ ಅವರನ್ನು ಕಾಣುವ ಅವಕಾಶ. 
ಅಲ್ಲಿಂದ ನಂತರ ಚಿತ್ರರಂಗದಲ್ಲಿ ಈ ಕಲಾವಿದೆಯದ್ದು ಸುದೀರ್ಘ ಪ್ರಯಾಣ. ಸುಮಾರು 1000 ಕನ್ನಡ ಚಿತ್ರಗಳಲ್ಲಿ ಮತ್ತು ಟೆಲಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದಲ್ಲಿ 3 ದಶಕಗಳನ್ನು ಕಳೆದಿದ್ದಾರೆ. ಆದರೂ ಕೂಡ ಇಂದಿಗೂ ಅವರನ್ನು ಗುರುತಿಸುವುದು ಜ್ಯೂನಿಯರ್ ಆರ್ಟಿಸ್ಟ್ ಎಂದು! ಅವರು ಬೇರಾರು ಅಲ್ಲ ಸರೋಜಮ್ಮ.
ಹಳೆಯ ನೆನಪುಗಳಿಗೆ ಜಾರಿದ ಸರೋಜಮ್ಮ ತಮ್ಮ ಸಿನಿ ಪ್ರಯಾಣವನ್ನು ಮರುಜ್ಞಾಪಿಸಿಕೊಳ್ಳುತ್ತಾರೆ. ತುಮಕೂರಿನ ಸಾವನದುರ್ಗದವರಾದ ಸರೋಜಮ್ಮ ತಮ್ಮ ಪೋಷಕರು ಮತ್ತು ಸಹೋದರ-ಸಹೋದರಿಯರೊಂದಿಗೆ 1970ರ ಸುಮಾರಿಗೆ ಬೆಂಗಳೂರಿಗೆ ವಲಸೆ ಬಂದರು. ಆ ಸಮಯದಲ್ಲಿ ನಮ್ಮೂರಿನಲ್ಲಿ ತೀವ್ರ ಬರಗಾಲ ಬಂದಿತ್ತು. ನಮ್ಮ ಮನೆಯಲ್ಲಿ ತಂದೆ-ತಾಯಿಗೆ ಕೃಷಿ ಕೆಲಸವಿರಲಿಲ್ಲ. ಹೀಗಾಗಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಹೋದರು.
ಸರೋಜಮ್ಮಗೆ 11ನೇ ವಯಸ್ಸಿನಲ್ಲಿ ಮದುವೆಯಾಗಿ 20 ವರ್ಷಕ್ಕೆ ಮುಂಚೆ ಮೂರು ಮಕ್ಕಳಾದವು. ಅವರ ಪತಿ ಆಗ ಬಿನ್ನಿ ಮಿಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಬಿನ್ನಿ ಮಿಲ್ಸ್ ಮುಚ್ಚಿ ಹೋಯಿತು.
''ನಂತರ ನನ್ನ ಪತಿ ತರಕಾರಿ ಮಾರಾಟ ಮಾಡಲು ಆರಂಭಿಸಿದರು. ನಾನು ಮನೆಕೆಲಸಕ್ಕೆ ಹೋಗುತ್ತಿದ್ದೆ.ಆದರೆ ನಮ್ಮ ಸಂಪಾದನೆ ಕುಟುಂಬದ ಜೀವನಕ್ಕೆ ಸಾಕಾಗುತ್ತಿರಲಿಲ್ಲ.1986ರಲ್ಲಿ ಗುಬ್ಬಿ ವೀರಣ್ಣ ನಾಟಕ ಕಂಪೆನಿಯಲ್ಲಿ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ನನಗೆ ಸಿನಿಮಾದಲ್ಲಿ ಅವಕಾಶ ಮಾಡಿಕೊಟ್ಟರು. ಅವರಿಗೆ ಸಿನಿಮಾ ಕ್ಷೇತ್ರದವರ ಪರಿಚಯವಿತ್ತು. ಆದರೆ ನನ್ನ ಪತಿ ಒಪ್ಪಲಿಲ್ಲ. ಆಗ ಆ ಮಹಿಳೆ ನನ್ನ ಪತಿಯ ಮನವೊಲಿಸಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದಲ್ಲಿಗೆ ಕರೆದುಕೊಂಡು ಹೋದರು. ಅಂದು ನನಗೆ ಸಿನಿಮಾದಲ್ಲಿ ಮದುವೆ ಸನ್ನಿವೇಶದಲ್ಲೊಂದು ಚಿಕ್ಕ ಪಾತ್ರ ಸಿಕ್ಕಿತು. ಅಲ್ಲಿ ನಾನು ಡಾ.ರಾಜ್ ಕುಮಾರ್ ಅವರನ್ನು ನೋಡಿದೆ. ಬಹಳ ಖುಷಿಯಾಯಿತು. ಅಲ್ಲಿ ನನಗೆ ಸಿಕ್ಕಿದ 5 ರೂಪಾಯಿ ಮನೆ ಸಾಮಾನು ಕೊಳ್ಳಲು ಸಹಾಯವಾಯಿತು. ಅಲ್ಲಿಂದ ನನ್ನ ಸಿನಿ ವೃತ್ತಿ ಜೀವನ ಆರಂಭವಾಯಿತು'' ಎಂದು ಸರೋಜಮ್ಮ ವಿವರಿಸುತ್ತಾರೆ.
ಪ್ರಸ್ತುತ ಬೆಂಗಳೂರಿನ ಗಾಂಧಿನಗರದಲ್ಲಿ ವಾಸವಾಗಿರುವ ಸರೋಜಮ್ಮ ಟೆಲಿ ಸೀರಿಯಲ್ ಗಳಲ್ಲಿ ಅಭಿನಯಿಸಲು ಆರಂಭಿಸಿದರು. ಅಲ್ಲಿ ಅವರಿಗೆ ದಿನಕ್ಕೆ 50 ರೂಪಾಯಿ ಸಂಬಳ ಸಿಗುತ್ತಿತ್ತು. ಇಂದಿಗೂ ಅವರನ್ನು ಸಹನಟಿ ಎಂದು ಗುರುತಿಸುತ್ತಿರುವುದು ಮಾತ್ರ ವಿಪರ್ಯಾಸ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Coal mafia: ಜಾರ್ಖಂಡ್-ಪಶ್ಚಿಮ ಬಂಗಾಳದಲ್ಲಿ 40 ಕ್ಕೂ ಹೆಚ್ಚು ಸ್ಥಳಗಳ ಮೇಲೆ ED ದಾಳಿ, ತೀವ್ರ ಶೋಧ

ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನ: ಕನಿಷ್ಠ 6 ಸಾವು, ಕೋಲ್ಕತಾ ಸೇರಿ ಭಾರತದ ಹಲವೆಡೆ ಕಂಪಿಸಿದ ಭೂಮಿ, Video

'7 ಕಿ.ಮೀ ಉದ್ದ, 25 ಮೀಟರ್ ಆಳ, 80 ರೂಮ್ ಗಳು': ಪಾತಾಳದಲ್ಲಿ 'ಹಮಾಸ್' ಲೋಕ ಪತ್ತೆ ಮಾಡಿದ ಇಸ್ರೇಲ್! Video

ಜಾರ್ಖಂಡ್‌ನಲ್ಲಿ ಮರ್ಯಾದಾ ಹತ್ಯೆ: ಬಾಯ್ ಫ್ರೆಂಡ್ ಜತೆ ಸಿಕ್ಕಿಬಿದ್ದ ಹುಡುಗಿಗೆ ಹೊಡೆದು ಕೊಂದ ಪೋಷಕರು!

LKG, UKG in Anganwadis: ರಾಜ್ಯದ 5000 ಅಂಗನವಾಡಿಗಳಲ್ಲಿ ನ.28ರಿಂದ ತರಗತಿಗಳು ಆರಂಭ..!

SCROLL FOR NEXT