ಅಮೂಲ್ಯ-ಜಗದೀಶ್ ಆರ್ ಚಂದ್ರ 
ಸಿನಿಮಾ ಸುದ್ದಿ

ಸಿನೆಮಾಗೆ ವಿದಾಯ ಹೇಳುವ ಚಿಂತನೆ ಇಲ್ಲ: ಅಮೂಲ್ಯ

ಸೋಮವಾರ ಜಗದೀಶ್ ಆರ್ ಚಂದ್ರ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಅಮೂಲ್ಯ, ಶೀಘ್ರದಲ್ಲೇ 'ಮುಗುಳು ನಗೆ' ಸೆಟ್ ಗೆ ಹಿಂದಿರುಗಳಿದ್ದಾರೆ.

ಬೆಂಗಳೂರು: ಸೋಮವಾರ ಜಗದೀಶ್ ಆರ್ ಚಂದ್ರ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಅಮೂಲ್ಯ, ಶೀಘ್ರದಲ್ಲೇ 'ಮುಗುಳು ನಗೆ' ಸೆಟ್ ಗೆ ಹಿಂದಿರುಗಲಿದ್ದಾರೆ. ಈ ಸಿನೆಮಾದಲ್ಲಿ ಅವರು ಗಣೇಶ್ ಎದುರು ನಟಿಸುತ್ತಿದ್ದಾರೆ. 
ಇದು ನಿಮ್ಮ ಕೊನೆಯ ಸಿನೆಮಾ ಆಗಲಿದೆಯೇ ಎಂಬ ಪ್ರಶ್ನೆಗೆ "ಮದುವೆಯ ನಂತರ ಕೆಲ ದಿನಗಳವರೆಗೆ ವಿರಾಮ ತೆಗೆದುಕೊಳ್ಳಬಹುದು. ಅದು ಮೇನಲ್ಲಿ ಆದರೆ ಸಿನೆಮಾಗಳಿಗೆ ವಿದಾಯ ಹೇಳುವ ಯಾವುದೇ ಚಿಂತನೆಗಳಿಲ್ಲ. ನಾನು ೨೦೦೭ ರಲ್ಲಿ 'ಚೆಲುವಿನ ಚಿತ್ತಾರ'ದಲ್ಲಿ ನಾಯಕನಟಿಯಾಗಿ ಅಭಿನಯಿಸಿದೆ. ಚಿತ್ರರಂಗದಲ್ಲಿ ೧೦ ವರ್ಷಕ್ಕೂ ಹೆಚ್ಚು ಕಳೆದಿದ್ದೇನೆ. ಅದನ್ನು ಹಿಂದಕ್ಕೆ ಬಿಡುವುದು ಅಷ್ಟು ಸುಲಭವಲ್ಲ. ಇಲ್ಲಿಯವರೆಗೂ ಒಳ್ಳೆಯ ವಿಷಯವುಳ್ಳ ಸಿನೆಮಾಗಳಲ್ಲಿ ಕೆಲಸ ಮಾಡಿದ್ದೇನೆ, ಮದುವೆಯ ನಂತರವೂ ಅದು ಮುಂದುವರೆಯುತ್ತದೆ" ಎನ್ನುತ್ತಾರೆ ಅಮೂಲ್ಯ. "ಜಗದೀಶ್ ಅವರ ಕುಟುಂಬ ನನ್ನ ಮೇಲೆ ಯ್ಯಾವುದೇ ನಿರ್ಬಂಧ ಹಾಕಿಲ್ಲ" ಎಂದು ಕೂಡ ಅವರು ತಿಳಿಸುತ್ತಾರೆ. 
ಜಗದೀಶ್ ಅವರೊಂದಿಗೆ ಕೆಲವು ವಾರಗಳ ಕಾಲ ಸಮಯ ಕಳೆದಿರುವ ನಟಿ ಅವರು ಹೆಚ್ಚು ಸಿನೆಮಾಗಳನ್ನು ನೋಡುತ್ತಾರೆ ಎಂಬುದನ್ನು ಅರಿತಿರುವುದಾಗಿ ತಿಳಿಸುತ್ತಾರೆ. "ಅವರು ನನ್ನ 'ಗಜ ಕೇಸರಿ' ಮತ್ತು 'ಶ್ರಾವಣಿ ಸುಬ್ರಮಣ್ಯ' ಸಿನೆಮಾಗಳನ್ನು ನೋಡಿದ್ದಾರೆ ಮತ್ತು ವಾರಕ್ಕೊಂದು ಸಿನೆಮಾ ನೋಡುತ್ತಾರೆ. ಅವರು ಎರಡು ವರ್ಷ ಲಂಡನ್ ನಲ್ಲಿ ವಾಸಿಸಿದ್ದರು ಮತ್ತು ಕಲೆಯ ಬಗ್ಗೆ ಅತಿ ಹೆಚ್ಚು ಗೌರವವಿದೆ. ಅವರು ಸಿನೆಮಾಮಂದಿರದೊಳಗೆ ಹೊಕ್ಕ ಕ್ಷಣ ಮೊಬೈಲ್ ಫೋನ್ ಆಫ್ ಮಾಡುವುದಾಗಿ ತಿಳಿಸಿದಿರು. ಅವರ ಪ್ರಕಾರ ಚಿತ್ರಮಂದಿರದೊಳಗೆ ಮೊಬೈಲ್ ಫೋನ್ ಕೊಂಡೊಯ್ಯುವುದು ಕಲೆಯನ್ನು ಅವಮಾನಿಸಿದಂತೆ... ಅದನ್ನು ಕೇಳಿ ನನಗೆ ಖುಷಿ ಆಯಿತು" ಎನ್ನುತ್ತಾರೆ ಅಮೂಲ್ಯ. 
ತಮ್ಮ 'ಮೌನ ಸ್ವಭಾವವನ್ನು' ಮೆಚ್ಚುತ್ತೇನೆ ಎಂದು ಜಗದೀಶ್ ಹೇಳಿದಾಗ ನಾಚಿಕೊಂಡಿದ್ದಾಗಿ ತಿಳಿಸುವ ಅಮೂಲ್ಯ "ಅವರು ನನ್ನಲ್ಲಿ ತಾಯಿಯನ್ನು ಕಂಡಿದ್ದಾಗಿ ಹೇಳಿದರು.. ಅವರು ತಾಯಿ ಕೂಡ ಮೌನದ ಮಹಿಳೆ. ನನ್ನ ಇನ್ನುಳಿದ ಜೀವನವನ್ನು ಕಳೆಯುವ ವ್ಯಕ್ತಿಯಿಂದ ಇಂತಹ ಪ್ರೀತಿಯ ಮಾತುಗಳನ್ನು ಕೇಳುವುದು ಸುಖವೆನ್ನಿಸುತ್ತದೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT