ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಬಾಹುಬಲಿ ಪೋಸ್ಟರ್ ನಲ್ಲಿನ WKKB ಅರ್ಥ ಏನು ಗೊತ್ತಾ?

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಫಿಕ್ಸ್ ನಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರಸ ಇದೀಗ ಮತ್ತೆ ತನ್ನ ಪೋಸ್ಟರ್ ಗಳ ಮೂಲಕ ಸುದ್ದಿಗೆ ಗ್ರಾಸವಾಗಿದ್ದು, ಪೋಸ್ಟರ್ ನಲ್ಲಿನ ಕೆಲ ಅಂಶಗಳು ಇದೀಗ ಗೂಗಲ್ ಶೋಧಕ್ಕೆ ದಾರಿ ಮಾಡಿವೆ.

ಹೈದರಾಬಾದ್: ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಫಿಕ್ಸ್ ನಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರಸ ಇದೀಗ ಮತ್ತೆ ತನ್ನ ಪೋಸ್ಟರ್ ಗಳ ಮೂಲಕ ಸುದ್ದಿಗೆ  ಗ್ರಾಸವಾಗಿದ್ದು, ಪೋಸ್ಟರ್ ನಲ್ಲಿನ ಕೆಲ ಅಂಶಗಳು ಇದೀಗ ಗೂಗಲ್ ಶೋಧಕ್ಕೆ ದಾರಿ ಮಾಡಿವೆ.

ಬಾಹುಬಲಿ-2 ಚಿತ್ರದ ಎಲ್ಲ ಪೋಸ್ಟರ್ ಗಳಲ್ಲೂ #WKKB ಎಂಬ ಹ್ಯಾಶ್ ಟ್ಯಾಗ್ ಸಾಮಾನ್ಯವಾಗಿದ್ದು, ಇದರ ಅರ್ಥವೇನು ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಗೂಗಲ್ ಸರ್ಚ್ ಮೊರೆ ಹೋಗಿದ್ದಾರೆ. ಬಾಹುಬಲಿ  ಮೊದಲ ಭಾಗ ಆರಂಭವಾದಾಗಿನಿಂದಲೂ ಎಲ್ಲ ಅಭಿಮಾನಿಗಳಲ್ಲೂ ಮೂಡಿದ್ದ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಪ್ರಶ್ನೆ ವೈರಲ್ ಆಗಿತ್ತು. ಇದೀಗ ಅದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ಎಸ್ ಎಸ್ ರಾಜಮೌಳಿ  ತಮ್ಮ ಬಾಹುಬಲಿ-2ಗೆ ವಿನೂತನವಾಗಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಬಾಹುಬಲಿ 2 ಚಿತ್ರದ ಪ್ರತೀ ಪೋಸ್ಟರ್ ನಲ್ಲೂ ರಾಜಮೌಳಿ WKKB ಹ್ಯಾಶ್ ಟ್ಯಾಗ್ ಅನ್ನು ಕಡ್ಡಾಯ ಮಾಡಿದ್ದು, ಇದೀ ಹ್ಯಾಶ್ ಟ್ಯಾಗ್ ಇದೀಗ ಅಭಿಮಾನಿಗಳ ತಲೆಗೆ ಹುಳಬಿಟ್ಟ ಅನುಭವವನ್ನು ನೀಡುತ್ತಿದೆ. ಇಷ್ಟಕ್ಕೂ WKKB   ಅಂದರೆ ಏನು ಎಂಬ ಪ್ರಶ್ನೆಗೆ ಸ್ವತಃ ರಾಜಮೌಳಿ ಅವರೇ ಉತ್ತರ ನೀಡಿದ್ದು, WKKB ಅಂದರೆ Why Kattappa killed Baahubali (ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ?) ಎಂದು ಹೇಳಿದ್ದಾರೆ.

ಇದಕ್ಕೂ ಮೊದಲೇ WKKB ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಖ್ಯಾತ ಕರಾಟೆ ಪುಸ್ತಕಕ್ಕೆ ಸೇರಿದ್ದ WKKB (World kenpo Karate Books) ಹ್ಯಾಶ್ ಟ್ಯಾಗ್ ಇದೀಗ ಬಾಹುಬಲಿ ಹ್ಯಾಶ್ ಟ್ಯಾಗ್ ಮಾರ್ಪಟ್ಟಿದೆ. ಆ ಮೂಲಕ  WKKB ಎಂದು ಟೈಪಿಸಿ ಕರಾಟೆ ಪುಸ್ತಕದ ಕುರಿತು ವಿಶ್ವದ ಯಾವುದೇ ಮೂಲೆಯಿಂದ ಗೂಗಲ್ ನಲ್ಲಿ ಶೋಧ ಮಾಡಿದರೂ ಬಾಹುಬಲಿ ಚಿತ್ರದ ಕುರಿತ ವಿಚಾರಗಳು ತೆರೆದುಕೊಳ್ಳುತ್ತಿವೆ. ಆ ಮೂಲಕ ರಾಜಮೌಳಿ ನಯಾ ಪೈಸೆ  ಖರ್ಚಿಲ್ಲದೇ ಬಾಹುಬಲಿ ಚಿತ್ರ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ