ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಇಳಯರಾಜ ನೋಟಿಸ್ ಕಳಿಸಲು ಕಾರಣವೇನು?
ಸಂಗೀತ ನಿರ್ದೇಶಕ ಇಳಯರಾಜ ತಮ್ಮ ರಚನೆಯ ಹಾಡುಗಳನ್ನು ಹಾಡಬಾರದೆಂದು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ವಿಶೇಷ ವರದಿ ಪ್ರಕಟಿಸಿದೆ.
ಇಳಯರಾಜ ಅವರು ತಮಗೆ ನೋಟಿಸ್ ನೀಡಿದ್ದರ ಬಗ್ಗೆ ಸ್ವತಃ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಅಷ್ಟೇ ಅಲ್ಲದೇ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯೆ ನೀಡಿರುವ ಎಸ್.ಪಿ. ಬಿ, ಇಳಯರಾಜ ಅವರು ನನ್ನೊಂದಿಗೆ ಮಾತನಾಡಿದ್ದರೆ ಈ ಪರಿಸ್ಥಿತಿಯನ್ನು ತಡೆಯಬಹುದಾಗಿತ್ತು" ಎಂದಿದ್ದಾರೆ.
ಈ ದುರದೃಷ್ಟಕರ ಬೆಳವಣಿಗೆ ಬಗ್ಗೆ ತಮ್ಮ ಕೇಳುಗರಿಗೆ ತಿಳಿಸಿ, ಪರಿಸ್ಥಿತಿಯನ್ನು ಅರಿಯುವುದಕ್ಕೆ ತಯಾರು ಮಾಡಿಕೊಳ್ಳುವುದಕ್ಕೆ ಹೇಳುವುದು ತಮ್ಮ ಉದ್ದೇಶವಾಗಿತ್ತು ಎಂದು ಹೇಳಿರುವ ಎಸ್ ಪಿಬಿ, ಯಾವುದೇ ರೀತಿಯಲ್ಲಿ ಕಠಿಣ ಅಭಿಪ್ರಾಯ ವ್ಯಕ್ತಪಡಿಸಿ, ಚರ್ಚೆ ಮಾಡದಂತೆ ಮನವಿ ಮಾಡಿದ್ದಾರೆ. ಎಸ್.ಪಿ.ಬಿ ಹಾಗೂ ಇಳಯರಾಜ ಅವರ ಆಪ್ತ ವಲಯಗಳು ಹೇಳುವ ಪ್ರಕಾರ, ಕಳೆದ ವರ್ಷ ಅಮೆರಿಕಾ ಪ್ರವಾಸ ಕೈಗೊಂಡ ವೇಳೆಯಲ್ಲಿ ಇಳಯರಾಜ ಅವರೊಂದಿಗೆ ಎಸ್.ಪಿ.ಬಿ ಹೋಗಿರಲಿಲ್ಲ. ಆದ್ದರಿಂದ ಇಬ್ಬರ ನಡುವೆ ಅಸಮಾಧಾನ ಉಂಟಾಗಿದೆಯಂತೆ. ತಮ್ಮ ರಚನೆಗಳನ್ನು ಅನುಮತಿ ಇಲ್ಲದೇ ಬಳಸಿಕೊಂಡಿದ್ದ ಆಡಿಯೋ ಸಂಸ್ಥೆಗಳ ವಿರುದ್ಧವೂ ಇಳಯರಾಜ ದೂರು ದಾಖಲಿಸಿದ್ದ ಉದಾಹರಣೆಗಳಿವೆ. ಅಷ್ಟೇ ಅಲ್ಲದೇ ನಿರ್ದೇಶಕ ಶಂಕರ್ ಅವರು ತಮ್ಮ "ಊರು ವಿಟ್ಟು ಊರು ವಂದು" ಎಂಬ ಹಳೆಯ ಗೀತ ರಚನೆಯೊಂದನ್ನು ಅನುಮತಿ ಇಲ್ಲದೇ 2014 ರಲ್ಲಿ ತೆರೆ ಕಂಡ ಕಪ್ಪಲ್ ಚಲನಚಿತ್ರದ ರೀಮಿಕ್ಸ್ ಗಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಾಡನ್ನು 1989 ರ ಚಿತ್ರ ಕರಗಟ್ಟಕಾರನ್ ಗಾಗಿ ಇಳಯರಾಜ ರಚಿಸಿದ್ದರು.
ಇಳಯರಾಜ ಅವರು ತಮ್ಮ ತಂದೆಗೆ ನೋಟಿಸ್ ಜಾರಿ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ ಪಿ ಚರಣ್, ನಾವು "ಎಸ್.ಪಿ.ಬಿ 50" ನ್ನು ಆಚರಣೆಯಲ್ಲಿದ್ದೇವೆ. ಎಸ್.ಪಿ.ಬಿ ಹಲವು ಸಂಗೀತ ನಿರ್ದೇಶಕರ ಹಾಡುಗಳನ್ನು ಹಾಡಿದ್ದು ಇಳಯರಾಜ ಅವರ ಪೈಕಿ ಒಬ್ಬರಷ್ಟೇ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos