ಎ ಪಿ ಅರ್ಜುನ್-ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

'ಶಿವಣ್ಣ ಸಿನೆಮಾ ನಿರ್ದೇಶನದಿಂದ ನನ್ನ ಕನಸು ನನಸಾಗಲಿದೆ': ನಿರ್ದೇಶಕ ಎ ಪಿ ಅರ್ಜುನ್

ಕಥೆಗಳ ಕಣಜವನ್ನು ಇಟ್ಟುಕೊಂಡು ನಂತರ ನಟರನ್ನು ಆಯ್ಕೆ ಮಾಡಿಕೊಳ್ಳುವ ನಿರ್ದೇಶಕರಿದ್ದಾರೆ. ನಟನನ್ನು ಮನಸ್ಸಿನಲ್ಲಿಟ್ಟುಕೊಂಡು ಅವರಿಗೆ ಕಥೆ ರಚಿಸುವ ನಿರ್ದೇಶಕರು ಕೂಡ ಇದ್ದಾರೆ.

ಬೆಂಗಳೂರು: ಕಥೆಗಳ ಕಣಜವನ್ನು ಇಟ್ಟುಕೊಂಡು ನಂತರ ನಟರನ್ನು ಆಯ್ಕೆ ಮಾಡಿಕೊಳ್ಳುವ ನಿರ್ದೇಶಕರಿದ್ದಾರೆ. ನಟನನ್ನು ಮನಸ್ಸಿನಲ್ಲಿಟ್ಟುಕೊಂಡು ಅವರಿಗೆ ಕಥೆ ರಚಿಸುವ ನಿರ್ದೇಶಕರು ಕೂಡ ಇದ್ದಾರೆ. ಅಂತಹ ನಿರ್ದೇಶಕರಲ್ಲಿ ಒಬ್ಬರು ಎ ಪಿ ಅರ್ಜುನ್. ಈಗ ನಟ ಶಿವರಾಜ್ ಕುಮಾರ್ ಅವರಿಗೆ ಕಥೆ ಬರೆದಿರುವ ಅವರು ನಟನ ಮೆಚ್ಚುಗೆಯನ್ನು ಕೂಡ ಗಳಿಸಿದ್ದಾರೆ. 
ಈಗ ಎಲ್ಲವು ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್ ನಿಂದ ಈ ನೂತನ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಇದು ಅರ್ಜುನ್ ತಮ್ಮ ಸದ್ಯದ 'ಕಿಸ್' ಸಿನೆಮಾ ಮುಗಿಸಿದ ನಂತರ ಮತ್ತು ಶಿವರಾಜ್ ಕುಮಾರ್ ತಮ್ಮ ಪೂರ್ವ ನಿಯೋಜಿತ ಸಿನೆಮಾಗಳನ್ನು ಸಂಪೂರ್ಣಗೊಳಿಸಿದ ಮೇಲೆ.  
ಶಿವರಾಜ್ ಕುಮಾರ್ ಅವರನ್ನು ನಿರ್ದೇಶಿಸಲು ಉತ್ಸುಕರಾಗಿರುವ ಅರ್ಜುನ್ "ಶಿವಣ್ಣ ನನ್ನ ಸ್ಕ್ರಿಪ್ಟ್ ಅನ್ನು ಒಂದು ಬಾರಿ ಓದಿದ್ದಾರೆ ಮತ್ತು ಅದನ್ನು ಅವರು ಇಷ್ಟ ಪಟ್ಟಿದ್ದಾರೆ. ಹಾಗೆಯೇ ಮುಂದುವರೆಯಲು ತಿಳಿಸಿದ್ದಾರೆ" ಎನ್ನುತ್ತಾರೆ. 'ಅಂಬಾರಿ'ಯಿಂದ ಪಾದಾರ್ಪಣೆ ಮಾಡಿ ಇಲ್ಲಿಯವರೆಗೂ ಐದು ಸಿನೆಮಾಗಳನ್ನು ನಿರ್ದೇಶಿಸಿದ್ದಾರೆ ಅರ್ಜುನ್. 
ಶಿವರಾಜ್ ಕುಮಾರ್ ತಮ್ಮ ಜೀವನದಲ್ಲಿ ೧೦೦ ಕ್ಕೂ ಹೆಚ್ಚು ಪಾತ್ರಗಳನ್ನೂ ನಿರ್ವಹಿಸಿದ್ದರು, ಈ ಸಿನೆಮಾದಲ್ಲಿ ನಟ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಅರ್ಜುನ್. 
"ಈ ಸಿನೆಮಾದ ಪಾತ್ರ ಅವರ ವಯಸ್ಸಿಗೆ ಖಚಿತವಾಗಿ ಹೊಂದಾಣಿಕೆಯಾಗುತ್ತದೆ. ಈ ಸಿನೆಮಾದಲ್ಲಿ ಶಿವಣ್ಣ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಸಣ್ಣ ಭಾಗದಲ್ಲಿ ಅವರು ೨೦ ವರ್ಷ ಹಿಂದಕ್ಕೆ ಹೋಗಿ ವರ್ತಮಾನಕ್ಕೆ ಮರಳಲಿದ್ದಾರೆ" ಎಂದು ವಿವರಿಸುತ್ತಾರೆ ಅರ್ಜುನ್. 
"ಅವರು ೭೦ ವರ್ಷದ ವ್ಯಕ್ತಿಯಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ" ಎಂದು ತಿಳಿಸುವ ಅರ್ಜುನ್ "ಇದು ಅವರೊಂದಿಗೆ ಸಿನಿಮಾ ಮಾಡುವ ಆಸೆಯಷ್ಟೇ ಅಲ್ಲ ಆದರೆ ಅವರ ವಯಸ್ಸಿಗೆ ಹೊಂದುವ ಕಥೆ ಹೇಳಬೇಕಿತ್ತು. ಶಿವಣ್ಣನವರ ನಿಜ ಜೀವನಕ್ಕೆ ಹತ್ತಿರವಾಗಿರುವಂತೆ ಈ ಸಿನೆಮಾ ನಿರ್ದೇಶಿಸಲಿದ್ದೇನೆ ಮತ್ತು ಅದಕ್ಕಾಗಿ ನಾನು ತಯಾರಿ ಮಾಡಿಕೊಂಡಿದ್ದೇನೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT