ಬಾಹುಬಲಿ-೨ ಸಿನೆಮಾ ಪೋಸ್ಟರ್ 
ಸಿನಿಮಾ ಸುದ್ದಿ

ಬಾಹುಬಲಿ-೨ ಆಡಿಯೋ ಹಕ್ಕುಗಳು ೪ ಕೋಟಿ ರೂಗೆ ಲಹರಿ ವಶ; ಮಾರ್ಚ್ 26 ಕ್ಕೆ ಆಡಿಯೋ ಬಿಡುಗಡೆ

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ: ಮುಕ್ತಾಯ' ಸಿನೆಮಾದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದು, ಈ ಅತಿ ದೊಡ್ಡ ಬಜೆಟ್ ಸಿನೆಮಾದ ಆಡಿಯೋ

ಬೆಂಗಳೂರು: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ: ಮುಕ್ತಾಯ' ಸಿನೆಮಾದ ಟ್ರೇಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದು, ಈ ಅತಿ ದೊಡ್ಡ ಬಜೆಟ್ ಸಿನೆಮಾದ ಆಡಿಯೋ ಹಕ್ಕುಗಳನ್ನು ಬೆಂಗಳೂರು ಮೂಲದ ಲಹರಿ ಸಂಸ್ಥೆ ೪ ಕೋಟಿ ರೂಗಳಿಗೆ ಕೊಂಡಿದೆ ಎಂದು ತಿಳಿದುಬಂದಿದೆ. 
೯ ಹಾಡುಗಳಿರುವ ಬಾಹುಬಲಿ-೨ ಸಿನೆಮಾದ ಆಡಿಯೋ ಹಕ್ಕುಗಳನ್ನು ೪ ಕೋಟಿಗೆ ಖರೀದಿಸಿರುವುದು ದಕ್ಷಿಣ ಭಾರತದ ಯಾವುದೇ ಭಾಷೆಯ ಸಿನೆಮಾಗೆ ದಾಖಲೆ ಎನ್ನಲಾಗಿದೆ. ಸುಮಾರು ೨೦೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಈ ಸಿನೆಮಾದ ಟಿವಿ ಹಕ್ಕುಗಳನ್ನು ಕೂಡ ೨೫ ಕೋಟಿಗೆ ಮಾರಾಟ ಮಾಡಿರುವುದು ದಾಖಲೆಯೇ!
ಮಾರ್ಚ್ ೨೬ ಕ್ಕೆ ಸಿನೆಮಾದ ಆಡಿಯೋ ಬಿಡುಗಡೆಯನ್ನು ಅದ್ದೂರಿಯಾಗಿ ನೆರವೇರಿಸಲು ಲಹರಿ ಸಂಸ್ಥೆ ಸಿದ್ಧಗೊಳ್ಳುತ್ತಿದೆ. ಈ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟನಟಿಯರು ಸೇರಿದಂತೆ ದಕ್ಷಿಣ ಭಾರತದ ಮತ್ತು ಬಾಲಿವುಡ್ ನ ತಾರಾ ದಂಡೇ ನೆರೆಯಲಿದೆಯಂತೆ. 
ಪ್ರಭಾಸ್, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ, ರಾಣಾ ದಗ್ಗುಬಾಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನೆಮಾ ಏಪ್ರಿಲ್ ೨೮ಕ್ಕೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಎಂ ಎಂ ಕೀರವಾಣಿ ಈ ಸಿನೆಮಾದ ಸಂಗೀತ ನಿರ್ದೇಶಕರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT