ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಬೆಳ್ಳಿ ತೆರೆಗೆ ಬರಲಿದ್ದಾರೆ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್

ವಿಷ್ಣುವರ್ಧನ್, ಸುದೀಪ್, ದರ್ಶನ್ ಮತ್ತು ಯಶ್ ಸೇರಿದಂತೆ ಹಲವಾರು ಜನಪ್ರಿಯ ನಟರ ಸಿನೆಮಾಗಳನ್ನು ನಿರ್ಮಿಸಿರುವ ಕೆ ಮಂಜು ಈಗ ಅವರ ಪುತ್ರ ಶ್ರೇಯಸ್ ಮಂಜು ಅವರನ್ನು ಅದ್ದೂರಿಯಾಗಿ ಬೆಳ್ಳಿ ತೆರೆಗೆ

ಬೆಂಗಳೂರು: ವಿಷ್ಣುವರ್ಧನ್, ಸುದೀಪ್, ದರ್ಶನ್ ಮತ್ತು ಯಶ್ ಸೇರಿದಂತೆ ಹಲವಾರು ಜನಪ್ರಿಯ ನಟರ ಸಿನೆಮಾಗಳನ್ನು ನಿರ್ಮಿಸಿರುವ ಕೆ ಮಂಜು ಈಗ ಅವರ ಪುತ್ರ ಶ್ರೇಯಸ್ ಮಂಜು ಅವರನ್ನು ಅದ್ದೂರಿಯಾಗಿ ಬೆಳ್ಳಿ ತೆರೆಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. 
೨೨ ವರ್ಷದ ಈ ಯುವ ಪ್ರತಿಭೆ ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ೬ ಅಡಿ ಎತ್ತರದ ಈ ಯುವ ನಟ, ತನ್ನ ನಟನೆಯ ಇಂಗಿತವನ್ನು ತಂದೆಯ ಬಳಿ ವ್ಯಕ್ತಪಡಿಸಿ ನಟನಾ ತರಬೇತಿಗೆ ಸೇರಿಕೊಂಡಿದ್ದಾರೆ. ಈ ಸುದ್ದಿಯನ್ನು ಧೃಢೀಕರಿಸುವ ಮಂಜು "ಮೇ ಅಥವಾ ಜೂನ್ ವೇಳೆಗೆ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ" ಎನ್ನುತ್ತಾರೆ.
"ಹಲವಾರು ನಿರ್ಮಾಪಕರು ಮತ್ತು ನಿರ್ದೇಶಕರು ಮುಂದೆ ಬಂದಿದ್ದಾರೆ ಆದರೆ ಮೊದಲ ಸಿನೆಮಾವನ್ನು ನನ್ನ ಬ್ಯಾನರ್ ಅಡಿಯಲ್ಲೇ ನಿರ್ಮಿಸಲು ಇಚ್ಛಿಸಿದ್ದೇನೆ ಮತ್ತು ಇದು ನನ್ನ ಗುರು ವಿಷ್ಣುವರ್ಧನ್ ಅವರಿಗೆ ಅರ್ಪಿತವಾಗಲಿದೆ" ಎನ್ನುತ್ತಾರೆ ಮಂಜು. 
"ಮತ್ತೆ, ನಾನು ಶೀರ್ಷಿಕೆಯನ್ನು ಕೂಡ ಅಂತಿಮಗೊಳಿಸಿದ್ದೇನೆ, ಅದು 'ಸಂಪತ್ ಕುಮಾರ್' (ವಿಷ್ಣುವರ್ಧನ್ ಅವರ ಮೂಲ ಹೆಸರು) ಎಂದು. ನನ್ನ ಪುತ್ರನ ವೃತ್ತಿಜೀವನ ಇಲ್ಲಿಂದ ಪ್ರಾರಂಭ ಆಗಬೇಕೆಂಬುದು ನನ್ನಾಸೆ" ಎನ್ನುತ್ತಾರೆ. 
ಹಲವಾರು ಸ್ಕ್ರಿಪ್ಟ್ ಗಳನ್ನು ಓದುತ್ತಿರುವ ಅಪ್ಪ-ಮಗ ಜೋಡಿಗೆ ಅದ್ರಲ್ಲಿ ಒಂದು ಗಮನ ಸೆಳೆದಿದೆಯಂತೆ. "ಶಶಾಂಕ್ ಅವರಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ರಘು ಒಂದೊಳ್ಳೆ ಕಥೆ ರಚಿಸಿದ್ದಾರೆ ಮತ್ತು ಅದು 'ಸಂಪತ್ ಕುಮಾರ್' ಶೀರ್ಷಿಕೆಗೆ ಒಪ್ಪಿಕೊಳ್ಳುತ್ತದೆ ಮತ್ತು ಇದು ಒಳ್ಳೆಯ ಆರಂಭವಾಗಲಿದೆ ಎಂದು ನಾನು ನಂಬಿದ್ದೇನೆ" ಎನ್ನುತ್ತಾರೆ ಮಂಜು.
"ಬಹುಶಃ ನಾನು ಇದರಿಂದಲೇ ಪ್ರಾರಂಭಿಸುತ್ತೇನೆ ಆದರೆ ಏಪ್ರಿಲ್ ಕೊನೆಯಲ್ಲಿ ಸ್ಕ್ರಿಪ್ಟ್ ಕೆಲಸ ಮುಗಿಯಲಿದ್ದು ತದನಂತರವೇ ಅಧಿಕೃತ ಘೋಷಣೆ ಮಾಡಲು ಸಾಧ್ಯ" ಎನ್ನುತ್ತಾರೆ. 
ಶ್ರೇಯಸ್ ಶಾಲಾ ದಿನಗಳಿಂದಲೂ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದನ್ನು ನೆನಪಿಸಿಕೊಳ್ಳುವ ಮಂಜು "ಅವರು ವೈಜಾಗ್ ನಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಮಹೇಶ್ ಬಾಬು ಮತ್ತು ಪವನ್ ಕಲ್ಯಾಣ್ ಸೇರಿದಂತೆ ಜನಪ್ರಿಯ ತೆಲುಗು ನಟರು ನಟನಾ ತರಬೇತಿ ಪಡೆದಿರುವುದು ಅಲ್ಲಿಯೇ" ಎಂದು ಕೂಡ ಅವರು ತಿಳಿಸುತ್ತಾರೆ. 
ಹಿರಿಯ ನಟ ದ್ವಾರಕೀಶ್ ಕೂಡ ಶ್ರೇಯಸ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ಉತ್ಸುಕರಾಗಿದ್ದರಂತೆ ಮತ್ತು ಅವರು 'ಕರ್ಣ' ಎಂಬ ಸಿನೆಮಾ ಶೀರ್ಷಿಕೆಯಿಂದ ಸಿದ್ಧರಾಗಿದ್ದರಂತೆ. "ಅಂತಹ ಹಿರಿಯ ನಟ-ನಿರ್ಮಾಪಪಕ ನನ್ನ ಪುತ್ರನನ್ನು ಪರಿಚಯಿಸಲು ಮುಂದೆ ಬಂದದ್ದಕ್ಕೆ ನನಗೆ ಖುಷಿಯಾಗಿದೆ" ಎನ್ನುವ ಮಂಜು "ನಾನು ಆ ಕಥೆ ಕೇಳಿದ್ದೇನೆ ಮತ್ತು  ಅದರಲ್ಲಿ ಪ್ರೀತಿ-ಆಕ್ಷನ್ ಇದೆ. ಆದರೆ ಸದ್ಯಕ್ಕೆ 'ಸಂಪತ್ ಕುಮಾರ್' ಸಿನೆಮಾದೊಂದಿಗೆ ಪ್ರಾರಂಭಿಸಲಿದ್ದೇನೆ, ನಂತರ ದ್ವಾರಕೀಶ್ ಅವರ ಸಿನೆಮಾವನ್ನು ಮಾಡಬಹುದು... ಅದರ ಬಗ್ಗೆ ಶೀಘ್ರವೇ ನಿರ್ಣಯಿಸಲಿದ್ದೇನೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT