ಸಿನಿಮಾ ಸುದ್ದಿ

ಭಯ ಮತ್ತು ಮುಗ್ಧತೆಯ ಸಮ್ಮಿಲನವೇ ಅಜೇಯ್ ರಾವ್ ಅವರ 'ಧೈರ್ಯ'

Shilpa D

ಬೆಂಗಳೂರು: ಶಿವ ತೇಜಸ್ ನಿರ್ದೇಶನವಿರುವ ಧೈರ್ಯಂ ಚಿತ್ರದಲ್ಲಿ ನಾಯಕ ನಟ ಅಜಯ್ ರಾವ್ ಅವರನ್ನು ವಿಭಿನ್ನವಾಗಿ ತೋರಿಸಲಾಗಿದೆ.

ಧೈರ್ಯಂ ಸಿನಿಮಾ ರೀ-ರೆಕಾರ್ಡಿಂಗ್ ಹಂತದಲ್ಲಿದ್ದು ಮೋಷನ್ ಪೋಸ್ಟರ್ ಯುಗಾದಿ ವೇಳೆಗೆ ಬಿಡುಗಡೆಯಾಗಲಿದೆ. ಅದಾದ ನಂತರ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಆಗಲಿದೆ.

ಈ ಹಿಂದೆ ಮಳೆ ಚಿತ್ರ ನಿರ್ದೇಶಿಸುವ ಮೂಲಕ ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದ ಶಿವ ತೇಜಸ್ ಧೈರ್ಯಂ ನಿರ್ದೇಶಿಸುತ್ತಿದ್ದಾರೆ. ಸಮಾಜದಲ್ಲಿ ಎಲ್ಲವನ್ನೂ ಸಹಿಸಿಕೊಂಡು ಹೋಗುವ ಸಾಮಾನ್ಯ ಮನುಷ್ಯನೊಬ್ಬ ಧೈರ್ಯದಿಂದ ಸಿಡಿದೆದ್ದರೆ ಏನಾಗುತ್ತದೆ ಎಂಬುದೇ ಧೈರ್ಯಯ ಕಾನ್ಸೆಪ್ಟ್.

ಮಧ್ಯಮ ವರ್ಗದ ಕುಟುಂಬದಿಂದ ಬಂದ ಯುವಕನಾಗಿ ಅಜೇಯ್ ರಾವ್ ಕಾಣಿಸಿಕೊಂಡಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುವ ನಾಯಕ ತನ್ನಷ್ಟಕ್ಕೆ ವಿದ್ಯಾಭ್ಯಾಸದಲ್ಲಿ ನಿರತನಾಗಿರುತ್ತಾನೆ. ಆದರೆ ಹೀಗೆ ತನ್ನ ಪಾಡಿಗೆ ತಾನಿದ್ದವನನ್ನು ಇದ್ದಕ್ಕಿದ್ದಂತೆ ಒಂದು ಪರಿಸ್ಥಿತಿ ಸಿಡಿದೇಳುವಂತೆ ಮಾಡುತ್ತದೆ. ಭಯ ಮತ್ತು ಧೈರ್ಯ ಇವೆರಡರ ಸಂಘರ್ಷದ ಸಂಧಿಗ್ಧ ಪರಿಸ್ಥಿತಿಯಲ್ಲಿ ಆತ ತನ್ನಲ್ಲಿನ ಮುಗ್ಧತೆಯನ್ನು ಮೀರಿ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತಾನೆ ಎಂಬುವುದೇ ಈ ಚಿತ್ರದ ಕಥೆ. ರವಿ ಶಂಕರ್ ಮತ್ತು ಅಜಯ್ ರಾಮ್ ನಡುವಿನ ಸಂಘರ್ಷ ಚಿತ್ರದ ಹೈಲೈಟ್ಸ್.

ಧೈರ್ಯಂ ಸಾಹಸ ಪ್ರಧಾನ ಮನರಂಜನಾತ್ಮಕ ಚಿತ್ರ,  ಹೀಗಾಗಿ ಇದರಲ್ಲಿ ಅತ್ಯಧಿಕವಾಗಿ ಲಾಂಗು ಮಚ್ಚು ತೋರಿಸಲಾಗಿಲ್ಲ. ಬದುಕಿನ ಹಲವು ನೈಜ ಘಟನೆಗಳನ್ನು ತೋರಿಸಲಾಗಿದೆ. ಧೈರ್ಯಂ ಸರ್ವತ್ರ ಸಾಧನಂ ಎಂಬ ಮಹಾಭಾರತದ ಒಂದು ಸಾಲನ್ನು ತೆಗೆದುಕೊಂಡು ಸಿನಿಮಾ ಮಾಡಲು ನಿರ್ಧರಿಸಿದ್ದಾಗಿ ಥಿವ ತೇಜಸ್ ಹೇಳುತ್ತಾರೆ. ವೃತ್ತಿಯಿಂದ ವೈದ್ಯರಾಗಿರುವ ರಾಜು ಧೈರ್ಯಂ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

SCROLL FOR NEXT