ಬೆಂಗಳೂರು: ನಿರ್ದೇಶಕ ಜೆ ಡಿ ಚಕ್ರವರ್ತಿ ಅವರೊಂದಿಗೆ ಹಲವು ಸಿನೆಮಾಗಳ ಒಪ್ಪಂದ ಮಾಡಿಕೊಳ್ಳುವ ಮೂಲಕ ನಟಿ-ನಿರ್ಮಾಪಕಿ ಪೂಜಾ ಗಾಂಧಿ ನೂತನ ನಿರ್ಮಾಣ ಸಂಸ್ಥೆ ಆನ್ ಎಂಟರ್ಟೈನ್ಮೆಂಟ್ ಫ್ಯಾಕ್ಟರಿಯನ್ನು ಮತ್ತೊಂದು ಸ್ಥರಕ್ಕೆ ಕೊಂಡೊಯ್ಯುತ್ತಿದ್ದಾರೆ. ಯೋಜನೆಗಳು ಪ್ರಾರಂಭವಾದ ಮೇಲಷ್ಟೇ ಎಲ್ಲಾ ವಿವರಗಳನ್ನು ತಿಳಿಸುವುದಾಗಿ ಹೇಳುವ ಪೂಜಾ, ಬುದ್ಧಿವಂತ ಸಿನೆಮಾ ನಿರ್ದೇಶಕರ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಖುಷಿಯಾಗಿದೆ ಎನ್ನುತ್ತಾರೆ.
ಬ್ರಾಂಡ್ ಚಕ್ರವರ್ತಿ ಜೊತೆಗೆ ಒಪ್ಪಂದ ಮಾಡಿಕೊಂಡಿರುವುದಕ್ಕಿಂದ ಹೆಚ್ಚಾಗಿ "ಇದು ಸೃಜನಶೀಲತೆಯ ಉನ್ಮಾದ" ಎನ್ನುತ್ತಾರೆ ಪೂಜಾ.
ಇದರ ಬಗ್ಗೆ ಮಾತನಾಡುವ ನಿರ್ದೇಶಕ ಜೆಡಿ "ಪೂಜಾ ಅವರ ಅತ್ಯುತ್ಸಾಹ ಮತ್ತು ಕಾರ್ಯಚಟುವಟಿಕೆಗಳು ನಮ್ಮಿಬ್ಬರನ್ನು ಒಟ್ಟಿಗೆ ತಂದಿತು. ಈಗ ಕೆಲವೊಂದು ಉತ್ಸಾಹದಾಯಕ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ" ಎನ್ನುತ್ತಾರೆ.
ಈ ಬ್ಯಾನರ್ ಅಡಿ ಆರು ಚಿತ್ರಗಳನ್ನು ಹೊರತರುವ ಒಪ್ಪಂದವಾಗಿದೆ ಎಂದು ತಿಳಿಸುವ ಅವರು ಮೂರು ಸಿನೆಮಾಗಳ ವಿವರಗಳನ್ನು ನೀಡುತ್ತಾರೆ. ಒಂದು ಸಿನೆಮಾದಲ್ಲಿ ಪೂಜಾ ಗಾಂಧಿ ಕಾಣಿಸಿಕೊಳ್ಳಲಿದ್ದಾರೆ, ಜೆಡಿ ನಿರ್ದೇಶನದ ಮತ್ತೊಂದು ಸಿನೆಮಾ ಹೆಸರು 'ಬೂ- ಬಿ ಅಫ್ರೈಡ್.. ಬಿ ವೆರಿ ಅಫ್ರೈಡ್" ಎಂದಿದ್ದು, ಈ ಸಿನೆಮಾದ ತಾರಾಗಣ ಇನ್ನು ತಿಳಿಯಬೇಕಿದೆ.
ಪೂಜಾ ಗಾಂಧಿ ಅರ್ಪಿಸುತ್ತಿರುವ ಮೂರನೇ ಸಿನೆಮಾದ ಹೆಸರು 'ಬ್ಲಾಕ್ ವರ್ಸಸ್ ವೈಟ್'. ಲಕ್ಕಿ ಶಂಕರ್ ಇದನ್ನು ನಿರ್ದೇಶಿಸುತ್ತಿದ್ದು, ಇದರಲ್ಲಿ ಪೂಜಾ ಗಾಂಧಿ ಜೊತೆಗೆ ಹೊಸ ನಟರು ಇರಲಿದ್ದಾರೆ.
ಸದ್ಯಕ್ಕೆ ಪೂಜಾ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಹಲವು ಸುತ್ತಿನ ಪ್ರಯಾಣ ಬೆಳೆಸಿದ್ದಾರೆ. ಈ ಯೋಜನೆಗಳ ಪೂರ್ವಾಭಾರಿ ಸಿದ್ಧತೆಯಲ್ಲಿ ಪೂಜಾ ಮತ್ತು ಜೆಡಿ ಬ್ಯುಸಿಯಾಗಿದ್ದಾರಂತೆ. "ಈ ಸಿನೆಮಾಗಳು ದ್ವಿಭಾಷಾ ಚಿತ್ರಗಳಾಗಿರುತ್ತವೋ ಅಥವಾ ಇನ್ನು ಐದು ಹೆಚ್ಚವರಿ ಭಾಷೆಗಳಲ್ಲಿ ಕೂಡ ಮಾಡುತ್ತೇವೋ ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ. ಜೆಡಿ ಸರ್ ಹೇಗೆ ಮುಂದೆ ತೆಗೆದುಕೊಂಡು ಹೋಗಲು ಇಚ್ಛಿಸುತ್ತಾರೋ ಅದರ ಮೇಲೆ ಅವಲಂಬಿತವಾಗಿದೆ" ಎನ್ನುತ್ತಾರೆ ಪೂಜಾ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos