ನಿರ್ಮಾಪಕ ಉಮಾಪತಿ ಜೊತೆಗೆ ನಟ ಸುದೀಪ್
ಬೆಂಗಳೂರು: ಟ್ವಿಟ್ಟರ್ ಯುಗದಲ್ಲಿ ಯಾವ ಮಾಹಿತಿಯು ಗೌಪ್ಯವಾಗಿ ಉಳಿಯುವುದು ಕಷ್ಟ. ಅದರಲ್ಲೂ ಈ ಮೈಕ್ರೋಬ್ಲಾಗಿಂಗ್ ತಾಣದಲ್ಲಿ ನಿಮ್ಮ ಉಪಸ್ಥಿತಿ ಎದ್ದು ಕಾಣುವಂತಿದ್ದು, ಹೆಚ್ಚಿನ ಜನ ನಿಮ್ಮ ಅನುಯಾಯಿಗಳಾಗಿದ್ದರಂತೂ ಪ್ರತಿ ನಡೆಯನ್ನು ಗಮನಿಸಲಾಗುತ್ತಿರುತ್ತದೆ.
ಜನಪ್ರಿಯ ನಟ ಸುದೀಪ್ ಈಗ ನಿರ್ಮಾಪಕ ಉಮಾಪತಿ ಅವರೊಂದಿಗೆ 'ಕೆಂಪೇಗೌಡ ೨' ಸಿನೆಮಾ ಮಾಡಲಿದ್ದಾರೆ ಎಂಬ ಸುದ್ದಿ ಶುಕ್ರವಾರ ದಟ್ಟವಾಗಿ ಹರಡಿತ್ತು. ಮೂಲಗಳನ್ನು ತಿಳಿಸುತ್ತಾ ನಟನ ಅಭಿಮಾನಿಗಳು ಈ ವಿಷಯದ ಬಗ್ಗೆ ಹೆಚ್ಚೆಚ್ಚು ಟ್ವೀಟ್ ಮಾಡಿದ್ದಾರೆ.
ಉಮಾಪತಿಯವರು ಸುದೀಪ್ ಜೊತೆಗೆ ಮೊದಲು ಮಾಡಿದ ಸಿನೆಮಾ 'ಹೆಬ್ಬುಲಿ'. ಅವರು ಈ ಸಿನೆಮಾವನ್ನು ರಘುನಾಥ್ ಜೊತೆಗೆ ನಿರ್ಮಿಸಿದ್ದರು. ಈಗ ಕಿಚ್ಚನ ಜೊತೆಗೆ ನಿರ್ಮಾಪಕರಿಗೆ ಇದು ದ್ವಿತೀಯ ಸಿನೆಮಾ ಆಗಲಿದೆ.
ಉಮಾಪತಿಯವರೇ ಈ ಸುದ್ದಿಯನ್ನು ಧೃಢೀಕರಿಸಿದ್ದು, ಗುರುವಾರ ಬೆಳಗ್ಗೆ ಸಭೆ ನಡೆದಿದ್ದು ಮತ್ತೊಂದು ದೊಡ್ಡ ಯೋಜನೆಗೆ ಕೈಜೋಡಿಸುತ್ತಿರುವುದಾಗಿ ತಿಳಿಸಿದ್ದಾರೆ. "ಈ ಯೋಜನೆ ನನ್ನ ಸಹೋದರನಿಂದ (ಸುದೀಪ್) ಬಂದ ಉಡುಗೊರೆ" ಎನ್ನುತ್ತಾರೆ ಸುದೀಪ್.
ಸುದೀಪ್ ಸದ್ಯಕ್ಕೆ ಪ್ರೇಮ್ ನಿರ್ದೇಶನದ 'ದ ವಿಲನ್'ನಲ್ಲಿ ಬ್ಯುಸಿಯಾಗಿದ್ದು, ನಂತರ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರ ಸಿನೆಮಾಗಳಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ. 'ಕೆಂಪೇಗೌಡ ೨' ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬ ಸ್ಪಷ್ಟನೆ ಇಲ್ಲ. "ನಾವು ಮೊದಲ ಸುತ್ತಿನ ಮಾತುಕತೆ ಮುಗಿಸಿದ್ದೇವೆ. ಇನ್ನು ಹಲವು ಸುತ್ತಿನ ಮಾತುಕತೆಗಳ ನಂತರ ಕೆಂಪೇಗೌಡ ೨ ಯಾವಾಗ ಪ್ರಾರಂಭವಾಗುತ್ತದೆ ಎಂಬುದರ ಮೇಲೆ ಸ್ಪಷ್ಟನೆ ಸಿಗುತ್ತದೆ" ಎನ್ನುತ್ತಾರೆ ಉಮಾಪತಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos