ನಾಗ ಶೌರ್ಯ ಮತ್ತು ರಶ್ಮಿಕಾ 
ಸಿನಿಮಾ ಸುದ್ದಿ

'ಟಾಲಿವುಡ್'ನಲ್ಲಿಯೂ ಕಾಲೇಜು ವಿದ್ಯಾರ್ಥಿಯಾಗಿ ರಶ್ಮಿಕಾ

ಟಿ ರಶ್ಮಿಕಾ ಮಂದಣ್ಣ ಅವರಿಗೆ ಕಾಲೇಜು ಜೀವನ ಶೀಘ್ರದಲ್ಲೇ ಮುಗಿಯುತ್ತಿಲ್ಲ. ನಿಜ ಜೀವನದಲ್ಲೂ ಮತ್ತು ಬೆಳ್ಳಿ ತೆರೆಯಲ್ಲಿಯೂ!

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರಿಗೆ ಕಾಲೇಜು ಜೀವನ ಶೀಘ್ರದಲ್ಲೇ ಮುಗಿಯುತ್ತಿಲ್ಲ. ನಿಜ ಜೀವನದಲ್ಲೂ ಮತ್ತು ಬೆಳ್ಳಿ ತೆರೆಯಲ್ಲಿಯೂ!
ಕನ್ನಡ ಸಿನೆಮಾ 'ಕಿರಿಕ್ ಪಾರ್ಟಿ'ಯಲ್ಲಿ ಪಾದಾರ್ಪಣೆ ಮಾಡಿದ್ದ ನಟಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ಈಗ ತಮ್ಮ ತೆಲುಗು ಪದಾರ್ಪಣೆಯಲ್ಲೂ ಅದೇ ಪಾತ್ರವನ್ನು ಮುಂದುವರೆಸಿದ್ದಾರೆ. 
ಟಾಲಿವುಡ್ ಸಿನೆಮಾ ಸೆಟ್ ನಲ್ಲಿ ಕಾಣಿಕೊಂಡ ನಟಿ ಸದ್ಯಕ್ಕೆ ಗುಂಟೂರಿನ ಕಾಲೇಜು ಕಟ್ಟಡದಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇನ್ನು ಹೆಸರಿದ ಈ ಚಿತ್ರದಲ್ಲಿ ರಶ್ಮಿಕಾ ನಾಗ ಶೌರ್ಯ ಎದುರು ನಟಿಸುತ್ತಿದ್ದಾರೆ. "ನಾನು ೮ ದಿನಗಳಿಂದ ಈ ಸಿನೆಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಈ ಕಾಲೇಜು ೧೮೦ ವರ್ಷ ಹಳೆಯದ್ದಂತೆ. ಚಿತ್ರತಂಡ ಇಲ್ಲೇ ಚಿತ್ರೀಕರಿಸಲು ಉತ್ಸುಕವಾಗಿತ್ತು. ಕಾಲೇಜು ಮತ್ತೆ ಪ್ರಾರಂಭವಾದ ಮೇಲೆ ಉಳಿದ ಚಿತ್ರೀಕರಣ ಮುಗಿಯಲಿದೆ. ಇನ್ನುಳಿದ ಭಾಗ ಹೈದರಾಬಾದ್ ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ" ಎನ್ನುತ್ತಾರೆ ರಶ್ಮಿಕಾ. 
ಈಗ ಪಕ್ಕದ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ಅನುಭವ ಹಂಚಿಕೊಳ್ಳುವ ರಶ್ಮಿಕಾ "ವಿವಿಧ ಪ್ರದೇಶಗಳ ಮತ್ತು ಚಿತ್ರರಂಗಗಳ ಚಿಂತನೆಯನ್ನು ತಿಳಿಯುವುದು ಎಷ್ಟು ಮುಖ್ಯ ಎಂದು ನನಗೆ ಈಗ ತಿಳಿಯುತ್ತಿದೆ. ಒಂದೇ ದೇಶದ ಎರಡು ಪ್ರದೇಶಗಳ ಚಿಂತನಾ ಲಹರಿ ಎಷ್ಟು ವಿಭಿನ್ನವಾಗಿರುತ್ತದೆ - ಇದು ನನಗೆ ಅಚ್ಚರಿಯೆನಿಸಿತು. ಆದರೆ ಇಲ್ಲಿನ ಜನ ಕುಟುಂಬದವರ ರೀತಿಯೇ ನಡೆಸಿಕೊಳ್ಳುತ್ತಾರೆ" ಎನ್ನುತ್ತಾರೆ. 
ಮೇ ೪ ರಂದು ಬೆಂಗಳೂರಿಗೆ ಹಿಂದಿರುಗಲಿರುವ ನಟಿ ತಮ್ಮ ಬಿಎ ಪರೀಕ್ಷೆಗಳನ್ನು ಬರೆಯಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿ ಎ ಹರ್ಷ ನಿರ್ದೇಶನದ 'ಆಂಜನಿಪುತ್ರ' ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪುನೀತ್ ರಾಜಕುಮಾರ್ ಎದುರು ನಟಿಸಲಿದ್ದಾರೆ. ಹಾಗೆಯೇ ಸುನಿ ನಿರ್ದೇಶನದ 'ಚಮಕ್' ಸಿನೆಮಾದಲ್ಲಿ ಗಣೇಶ್ ಎದುರು ನಟಿಸುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT