ಬಾಬಾ ರಾಮ್ ದೇವ್ 
ಸಿನಿಮಾ ಸುದ್ದಿ

ಡಿಸ್ಕವರಿ ಹಿಂದಿ ಚಾನೆಲ್ ನಲ್ಲಿ ಬಾಬಾ ರಾಮ್ ದೇವ್ ಜೀವನ ಚರಿತ್ರೆ ಸರಣಿ ಪ್ರಸಾರ

ಬಾಬಾ ರಾಮ್ ದೇವ್ ಜೀವನಚರಿತ್ರೆ ಸರಣಿ 65 ಕಂತುಗಳ ರೂಪದಲ್ಲಿ ಡಿಸ್ಕವರಿಯ ಹಿಂದಿ...

ಮುಂಬೈ: ಬಾಬಾ ರಾಮ್ ದೇವ್ ಜೀವನಚರಿತ್ರೆ ಸರಣಿ 65 ಕಂತುಗಳ ರೂಪದಲ್ಲಿ ಡಿಸ್ಕವರಿಯ ಹಿಂದಿ ಮನರಂಜನಾ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.
ಭಾರತದಲ್ಲಿ ಡಿಸ್ಕವರಿ ಜೀಟ್ ಹೊಸ ಮನರಂಜನಾ ಧಾರವಾಹಿಯನ್ನು ಆರಂಭಿಸುವ ಯೋಜನೆಯನ್ನು ಡಿಸ್ಕವರಿ ಕಮ್ಯುನಿಕೇಶನ್ಸ್ ಮಂಗಳವಾರ ಘೋಷಿಸಿತು. ಇದು ಈ ವರ್ಷಾಂತ್ಯಕ್ಕೆ ಪ್ರಸಾರ ಆರಂಭವಾಗಲಿದೆ.
ಭಾರತದಲ್ಲಿ ಮೂಲ ಸ್ಥಳೀಯ ಉತ್ಪಾದನೆಗಳಿಗೆ ಬಂಡವಾಳ ಹೂಡುವುದು ಚಾನೆಲ್ ನ ಮಹತ್ವಾಕಾಂಕ್ಷಿ ಫ್ಲಾಗ್ ಶಿಪ್ ಕಾರ್ಯಕ್ರಮವಾಗಿದೆ. ಸತ್ಯ ಅಪರಾಧ ತನಿಖೆಗಳು, ಸಣ್ಣ ಪಟ್ಟಣಗಳ ನಾಯಕರುಗಳು ಮತ್ತು ಸಮಗ್ರ ಬದುಕುಳಿದವರ ಜೀವನ ಚರಿತ್ರೆ ಬಗ್ಗೆ ಕಂತುಗಳ ರೂಪದಲ್ಲಿ ಪ್ರಸಾರ ಮಾಡಲಿದೆ.
ಸ್ವಾಮಿ ಬಾಬಾ ರಾಮ್ ದೇವ್: ದಿ ಅನ್ ಟೋಲ್ಡ್ ಸ್ಟೋರಿ ಜೀವನಾಧಾರಿತ ಸರಣಿಯಾಗಿದ್ದು, ಅನಾಮಧೇಯ ವ್ಯಕ್ತಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಐಕಾನ್ ಮತ್ತು ವ್ಯಾಪಾರಿಯಾಗಿ ಬೆಳವಣಿಗೆ ಹೊಂದಿದ ವಿಷಯಗಳನ್ನು ಇದರಲ್ಲಿ ವಿವರಿಸಲಾಗುತ್ತದೆ.
ಡಿಸ್ಕವರಿ ಜೀಟ್ ನ್ನು ಆರಂಭಿಸಲು ಬಹಳ ಉತ್ಸುಕರಾಗಿದ್ದೇವೆ. ಅದರಲ್ಲಿ ಹೊಸ ಮಾದರಿಯಲ್ಲಿ ಮನರಂಜನೆ ನೀಡಲಾಗುವುದು. ಸ್ಥಳೀಯ ಶೈಲಿಗೆ ಒತ್ತು ನೀಡಲಾಗುವುದು ಎಂದು ಡಿಸ್ಕವರಿ ನೆಟ್ವರ್ಕ್ಸ್ ಏಷ್ಯಾ ಪೆಸಿಫಿಕ್ ನ ಪ್ರಧಾನ ವ್ಯವಸ್ಥಾಪಕ ಮತ್ತು ಹಿರಿಯ ಉಪಾಧ್ಯಕ್ಷ ಕರಣ್ ಬಜಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!