ಬೆಂಗಳೂರು: ದುನಿಯಾ ವಿಜಯ್ ನಟಿಸಿರುವ 'ಮಾಸ್ತಿ ಗುಡಿ' ಈ ವಾರ ಅದ್ದೂರಿ ಬಿಡುಗಡೆಗೆ ಸಿದ್ಧವಾಗಿದೆ. ಜಾಕ್ ಮಂಜು ವಿತರಿಸುತ್ತಿರುವ ಈ ಸಿನೆಮಾ ಕರ್ನಾಟಕದಾದ್ಯಂತ ೩೦೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಚೆನ್ನೈ, ಮುಂಬೈ, ಹೈದರಾಬಾದ್ ಮತ್ತು ಗುರಗಾಂವ್ ನಗರಗಳಲ್ಲಿಯೂ ಸಿನೆಮಾ ಬಿಡುಗಡೆಯಾಗುತ್ತಿರುವುದು ವಿಶೇಷ.
ನಾಗಶೇಖರ್ ನಿರ್ದೇಶನದ ಈ ಸಿನೆಮಾಗೆ ಸಾಧು ಕೋಕಿಲ ಸಂಗೀತ ನೀಡಿದ್ದು, ಹಾಡುಗಳು ಈಗಾಗಲೇ ಅಭಿಮಾನಿಗಳ ನಡುವೆ ಕುತೂಹಲ ಮೂಡಿಸಿವೆ. ಹಾಗೆಯೇ ಸಿನೆಮಾದ ಗ್ರಾಫಿಕ್ಸ್ ಕೂಡ ಅಪಾರ ಕಾತರಕ್ಕೆ ಕಾರಣವಾಗಿದ್ದು, ಸಿನೆಮಾ ಹುಲಿ ಸಂರಕ್ಷಣೆ ಬಗ್ಗೆ ಕೂಡ ಚರ್ಚಿಸಲಿದೆ ಎನ್ನಲಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ ಕೂಡ ಅಭಿಮಾನಿಗಳಿಗೆ ಆಸಕ್ತಿ ಕೆರಳಿಸಿದೆ.
ಸುಂದರ್ ಪಿ ಗೌಡ್ರು ನಿರ್ಮಿಸಿರುವ ಈ ಸಿನೆಮಾದಲ್ಲಿ ಅಮೂಲ್ಯ ಮತ್ತು ಕೃತಿ ಕರಬಂಧ ನಾಯಕ ನಟಿಯರು. ಸುಹಾಸಿನಿ ಮಣಿರತ್ನಂ, ರಂಗಾಯಣ ರಘು ಮಾತು ರವಿಶಂಕರ್ ಗೌಡ ಕೂಡ ತಾರಾಗಣದ ಭಾಗವಾಗಿದ್ದಾರೆ.