ನಟ ಇರ್ಫಾನ್ ಖಾನ್ 
ಸಿನಿಮಾ ಸುದ್ದಿ

ಮುಂದಿನ ಹಾಲಿವುಡ್ ಯೋಜನೆಯ ಬಗ್ಗೆ ಉತ್ಸುಕರಾಗಿರುವ ಇರ್ಫಾನ್

ನ್ಯೂಯಾರ್ಕ್ ಮೂಲದ ಬಿಗ್ ಬೀಚ್ ಫಿಲಂಸ್ ನ ಹಾಲಿವುಡ್ ಸಿನೆಮಾ 'ಪಜಲ್'ನಲ್ಲಿ ನಟ ಇರ್ಫಾನ್ ಖಾನ್ ನಟಿಸಲಿದ್ದು ಯೋಜನೆಯ ಬಗ್ಗೆ ಉತ್ಸುಕರಾಗಿದ್ದಾರೆ. ಈ ಸಂಸ್ಥೆ ಈ ಹಿಂದೆ ಆಸ್ಕರ್ ವಿಜೇತ 'ಲಿಟಲ್ ಮಿಸ್

ಮುಂಬೈ: ನ್ಯೂಯಾರ್ಕ್ ಮೂಲದ ಬಿಗ್ ಬೀಚ್ ಫಿಲಂಸ್ ನ ಹಾಲಿವುಡ್ ಸಿನೆಮಾ 'ಪಜಲ್'ನಲ್ಲಿ ನಟ ಇರ್ಫಾನ್ ಖಾನ್ ನಟಿಸಲಿದ್ದು ಯೋಜನೆಯ ಬಗ್ಗೆ ಉತ್ಸುಕರಾಗಿದ್ದಾರೆ. ಈ ಸಂಸ್ಥೆ ಈ ಹಿಂದೆ ಆಸ್ಕರ್ ವಿಜೇತ 'ಲಿಟಲ್ ಮಿಸ್ ಸನ್ ಶೈನ್' ನಿರ್ಮಿಸಿತ್ತು. 
ಬಿಗ್ ಬೀಚ್ ಫಿಲಂಸ್ ನ ಸಹಯೋಗಿ ಮಾರ್ಕ್ ಟರ್ಟಲ್ಟಬ್ ಈ ಸಿನೆಮಾ ನಿರ್ದೇಶಿಸುತ್ತಿದ್ದಾರೆ. ಇದು ೨೦೧೦ರ ಅರ್ಜೆಂಟೈನಾದ ಸಿನೆಮಾ 'ರಾಂಪೆಕಾಬೇಜಾಸ್' ನ ಹಾಲಿವುಡ್ ಅವತಾರಿಣಿಕೆಯಾಗಲಿದೆ.
"'ಲಿಟಲ್ ಮಿಸ್ ಸನ್ ಶೈನ್' ನಂತರ ಸಿನೆಮಾದಲ್ಲಿದ್ದ ತಂಡದ ಜೊತೆಗೆ ಕೆಲಸ ಮಾಡಲು ಕಾತರದಿಂದಿದ್ದೇನೆ" ಎಂದು ಇರ್ಫಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಈ ಹಿಂದೆ ಇರ್ಫಾನ್ ೨೦೧೬ರ ಹಾಲಿವುಡ್ ಸಿನೆಮಾ ರಾನ್ ಹೊವಾರ್ಡ್ ಅವರ 'ಇನ್ಫರ್ನೊ'ದಲ್ಲಿ ನಟಿಸಿದ್ದರು. ಈಗ ನಟಿ ಕೆಲ್ಲಿ ಮೇಕ್ಡೋನಾಲ್ಡ್ ಜೊತೆಗೆ ನಟಿಸಲಿರುವ ಈ ನೂತನ ಯೋಜನೆಯಲ್ಲಿ ಭಾಗಿಯಾಗಲು ಶೀಘ್ರದಲ್ಲೆ ನ್ಯೂಯಾರ್ಕ್ ಗೆ ತೆರಳಲಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

ಕಾಂಗ್ರೆಸ್‌ನಲ್ಲಿ Muslim ಕೋಟಾಕ್ಕೆ ಪೈಪೋಟಿ; ಜಮೀರ್ ಪರ DK brothers ಬ್ಯಾಟಿಂಗ್, ಹೈಕಮಾಂಡ್ ಮೇಲೆ ಒತ್ತಡ..!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೋಲಾಹಲ: TMC ಬಂಡಾಯ ಗುಂಪು ಕಾಕೋಲಿ ಘೋಷ್ ನೇತೃತ್ವದಲ್ಲಿ NCP ಜೊತೆ ವಿಲೀನ!

SCROLL FOR NEXT