ಪದ್ಮಜಾ ರಾವ್-ಅರುಂಧತಿ ನಾಗ್ 
ಸಿನಿಮಾ ಸುದ್ದಿ

ಅಮ್ಮನ ಪಾತ್ರಕ್ಕೆ ನನ್ನ ನೆಚ್ಚಿನ ನಟಿ ಯಾರು? ನಟರು-ನಿರ್ದೇಶಕರ ಆಯ್ಕೆ!

ಬೆಳ್ಳಿ ತೆರಯ ಮೇಲೆ 'ತಾಯಿ'ಯ ಪಾತ್ರ ಮಾಡುವುದು ಭಾವನಾತ್ಮಕವಾಗಿ ಪ್ರೇಕ್ಷಕನನ್ನು ಕಲಕುವ ಮತ್ತು ತಲುಪುವ ದೊಡ್ಡ ಜವಾಬ್ದಾರಿ ಇರುತ್ತದೆ. ಅಮ್ಮನ ಪಾತ್ರದಲ್ಲಿ ತಮ್ಮ ನೆಚ್ಚಿನ ನಟಿಯ ಬಗ್ಗೆ ಮಾತನಾಡಿರುವ

ಬೆಂಗಳೂರು: ಬೆಳ್ಳಿ ತೆರಯ ಮೇಲೆ 'ತಾಯಿ'ಯ ಪಾತ್ರ ಮಾಡುವುದು ಭಾವನಾತ್ಮಕವಾಗಿ ಪ್ರೇಕ್ಷಕನನ್ನು ಕಲಕುವ ಮತ್ತು ತಲುಪುವ ದೊಡ್ಡ ಜವಾಬ್ದಾರಿ ಇರುತ್ತದೆ. ಅಮ್ಮನ ಪಾತ್ರದಲ್ಲಿ ತಮ್ಮ ನೆಚ್ಚಿನ ನಟಿಯ ಬಗ್ಗೆ ಮಾತನಾಡಿರುವ ಕೆಲವು ನಟರು ನಿರ್ದೇಶಕರು, ಲೀಲಾವತಿ, ಸಾವ್ಕಾರ್ ಜಾನಕಿ, ಕಾಂಚನ, ಬಿ ಸರೋಜಾದೇವಿ ಈ ತಾಯಿಯರನ್ನು ಹೊರತುಪಡಿಸಿ ಹಲವರನ್ನು ನೆನಪಿಸಿಕೊಂಡಿದ್ದಾರೆ.
ನಿರ್ದೇಶಕ್ ಕೆ ಎಂ ಚೈತನ್ಯ ಅವರಿಗೆ ತಾಯಿ ಪಾತ್ರದ ನೆಚ್ಚಿನ ನಟಿ ಅರುಂಧತಿ ನಾಗ್. 'ಕಾನೂರು ಹೆಗ್ಗಡತಿ' ಮತ್ತು 'ಜೋಗಿ' ಸಿನೆಮಾಗಳಲ್ಲಿ ತಾಯಿಯ ಪಾತ್ರಕ್ಕೆ ಜೀವ ಕೊಟ್ಟ ನಟಿ ಇವರು. 'ಪಾ' ಸಿನೆಮಾದಲ್ಲಿ ಆಧುನಿಕ ತಾಯಿಯ ಪಾತ್ರದಲ್ಲಿಯೂ ನಟಿಸಿ ಗಮನ ಸೆಳೆದವರು. ತಾಯಿ ಪಾತ್ರದ ಮಾಮೂಲಿತನವನ್ನು ಮುರಿದು ವಿವಿಧ ಛಾಯೆಗಳಲ್ಲಿ ಕಾಣಿಸಿಕೊಂಡಿದ್ದಾರೆ ಅರುಂಧತಿ ನಾಗ್. 
ನಟಿ ರಾಗಿಣಿ ದ್ವಿವೇದಿ ಅವರು ಹೇಳುವಂತೆ "ತೆರೆಯ ಮೇಲೆ ಅಮ್ಮನ ಪಾತ್ರಕ್ಕೆ ನನ್ನ ಮೊದಲ ಆಯ್ಕೆ ಸುಮಲತಾ ಮತ್ತು ಅರುಂಧತಿ ನಾಗ್. ಅವರು ಬಹಳ ಸ್ವಾಭಾವಿಕವಾಗಿ ನಟಿಸುತ್ತಾರೆ ಮತ್ತು ತಾಯ್ತನವನ್ನು ಆಪ್ತವಾಗಿ ಬಿಂಬಿಸುತ್ತಾರೆ. ರಘು ಹಾಸನ್ ಅವರ 'ಗಾಂಧಿಗಿರಿ'ಯಲ್ಲಿ ಅರುಂಧತಿ ನಾಗ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿತ್ತು. ಅತ್ಯುತ್ತಮ ನಟಿ ಅವರು" ಎನ್ನುತ್ತಾರೆ. 
ನಟಿ ಸಂಗೀತಾ ಭಟ್ ಹೇಳುವಂತೆ "'ಪ್ರೀತ್ಸೋದ್ ತಪ್ಪ' ಸಿನೆಮಾದಿಂದಲೂ ನಾನು ಲಕ್ಷ್ಮಿ ಅವರ ನಟನೆಯನ್ನು ಇಷ್ಟ ಪಟ್ಟಿದ್ದೇನೆ. 'ಎರಡನೇ ಸಲ' ಸಿನೆಮಾದಲ್ಲಿ ಅವರ ಜೊತೆಗೆ ಕೆಲಸ ಮಾಡುವ ಅದೃಷ್ಟ ಸಿಕ್ಕಿತ್ತು. ಅವರು ಸೆಟ್ ನಲ್ಲಿ ಎಲ್ಲರನ್ನು ಸಂತಸದಿಂದ ಇರುವಂತೆ ನೋಡಿಕೊಳ್ಳುತ್ತಾರೆ. ಅರುಣಾ ಇರಾನಿ ಮತ್ತು ಈಗ ರಮ್ಯಾ ಕೃಷ್ಣ ಕೂಡ ಭಾವನಾತ್ಮಕವಾಗಿ ತಾಯಿಯ ಪಾತ್ರದಲ್ಲಿ ಜನಕ್ಕೆ ಇಷ್ಟ ಆಗುತ್ತಾರೆ, ಭಾರತಿ ವಿಷ್ಣುವರ್ಧನ್ ಕೂಡ ಒಳ್ಳೆಯ ಆಯ್ಕೆ. 'ಭಾಗ್ಯವಂತರು' ಟಿವಿ ಸೀರಿಯಲ್ ಚಿತ್ರಕರಣದ ಸಮಯದಲ್ಲಿ ಅವರ ಜೊತೆಗೆ ನಾನು ಸಾಕಷ್ಟು ಸಮಯ ಕಳೆದಿದ್ದೆ" ಎನ್ನುತ್ತಾರೆ. 
ನಟಿ ಮಾನ್ವಿತಾ ಹರೀಶ್ ತಿಳಿಸುವಂತೆ "ಪದ್ಮಜಾ ರಾವ್ ನನಗೆ ಪೂಜನೀಯ ತಾಯಿಯ ಭಾವನೆ ನೀಡುತ್ತಾರೆ. ಸದ್ಯಕ್ಕೆ ನಾನು 'ಕನಕ'ದಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಅವರದ್ದು ನನ್ನ ನೆರೆಯವರ ಪಾತ್ರ. ಅವರ ಜೊತೆಗೆ ಕೆಲಸ ಮಾಡುವಾಗ ಸಾಕಷ್ಟು ಅತ್ತಿದ್ದೇನೆ
 ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT