ಮಯೂರಿ 
ಸಿನಿಮಾ ಸುದ್ದಿ

ಕರಿಯ-2 ಚಿತ್ರಕ್ಕೆ ನಾಯಕಿ ಮಯೂರಿ ಹಿನ್ನೆಲೆ ಗಾಯನ

ಹಲವು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಮಯೂರಿ ಈಗ ಹಿನ್ನೆಲೆ ಗಾಯಕಿಯಾಗಲು ಸಿದ್ಧತೆ ನಡೆಸುತ್ತಿದ್ದಾರೆ.

ಹಲವು ಚಿತ್ರಗಳಲ್ಲಿ ನಾಯಕ ನಟಿಯಾಗಿ ನಟಿಸಿರುವ ಮಯೂರಿ ಈಗ ಹಿನ್ನೆಲೆ ಗಾಯಕಿಯಾಗಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರಭು ಶ್ರೀನಿವಾಸ್ ನಿರ್ದೇಶನದ ಸಂತೋಷ್ ಬಾಲರಾಜ್ ನಾಯಕ ನಟನಾಗಿ ನಟಿಸಿರುವ  ಕರಿಯಾ-2 ಚಿತ್ರದಲ್ಲಿ ಮಯೂರಿ ಹಿನ್ನೆಲೆ ಗಾಯನ ನೀಡಲಿದ್ದಾರೆ. 
ಥಾಯ್ ಲ್ಯಾಂಡ್ ಪ್ರವಾಸ ಮುಕ್ತಾಯಗೊಳಿಸಿ ವಾಪಸ್ಸಾಗಿರುವ ನಟಿ ಮಯೂರಿ ಹಿನ್ನೆಲೆ ಗಾಯಕಿಯಾಗಲು ತಯಾರಿ ನಡೆಸುತ್ತಿದ್ದಾರೆ. ಮ್ಯೂಸಿಕ್ ಆಲ್ಬಮ್ ನಲ್ಲಿ  ಸೋನು ನಿಗಮ್ ಹಾಗೂ ಅರ್ಮಾನ್ ಮಲೀಕ್ ಹಾಡಿದ್ದು, ಅವರ ಜೊತೆಗೆ ನನ್ನ ಹೆಸರು ಸಹ ಪ್ರಕಟವಾಗುವುದು ಸಾಧನೆಯೇ ಸರಿ ಎಂದಿದ್ದಾರೆ ಮಯೂರಿ. 
ಅಂತಿಮ ಲಿರಿಕ್ಸ್ ಗಾಗಿ ಕಾಯುತ್ತಿರುವ ನಟಿ ಕಮ್ ಹಿನ್ನೆಲೆ ಗಾಯಕಿ ಮಯೂರಿ ಚಿತ್ರದ ರಾಗವನ್ನು ಅಭ್ಯಾಸ ಮಾಡುತ್ತಿದ್ದು, "ಹಿನ್ನೆಲೆ ಗಾಯನದಲ್ಲಿ ನನ್ನ ಸಾಮರ್ಥ್ಯವನ್ನು ನಿರೂಪಿಸಲು ಇದೊಂದು ಅತ್ಯುತ್ತಮ ಅವಕಾಶವಾಗಿದ್ದು ಸದುಪಯೋಗ ಪಡಿಸಿಕೊಳ್ಳುವೆ". ಎಂದಿದ್ದಾರೆ 
ಹಿನ್ನೆಲೆ ಗಾಯನದ ಬಗ್ಗೆ ಆಸಕ್ತಿ ಇದೆ. ಆದರೆ ತರಬೇತಿ ಪಡೆದಿಲ್ಲ, ಒಂದು ಸಿನಿಮಾದಲ್ಲಿಯಾದರೂ ಹಿನ್ನೆಲೆ ಗಾಯನ ನೀಡಬೇಕೆಂಬುದು ತಮ್ಮ ಹೆಬ್ಬಯಕೆಯಾಗಿದ್ದು, ಕರಿಯಾ-2 ಚಿತ್ರದ ಮೂಲಕ ನನಸಾಗುವ ಸಾಧ್ಯತೆ ಇದೆ ಎಂದು ಮಯೂರಿ ಹೇಳಿದ್ದಾರೆ. ಕರಿಯಾ-2 ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ಮುಕ್ತಾಯಗೊಂಡಿದ್ದು, ಒಂದೆರಡು ವಾರಗಳಲ್ಲಿ ಚಿತ್ರತಂಡ ಪ್ರಮೋಷನ್ ಕೆಲಸವನ್ನೂ ಪ್ರಾರಂಭಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!