ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

"ಬಂಗಾರ ಸನ್ ಆಫ್ ಬಂಗಾರದ ಮನುಷ್ಯ"ಗೆ ಧ್ವನಿಗೂಡಿಸಿದ ರಾಕಿಂಗ್ ಸ್ಟಾರ್ ಯಶ್!

ನಟ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಬಂಗಾರ ಸನ್ ಆಫ್ ಬಂಗಾರದ ಮನುಷ್ಯ" ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿದ್ದಾರೆ.

ಬೆಂಗಳೂರು: ನಟ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ "ಬಂಗಾರ ಸನ್ ಆಫ್ ಬಂಗಾರದ ಮನುಷ್ಯ" ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಧ್ವನಿ ನೀಡಿದ್ದಾರೆ.

ಸಿನಿಮಾ ಮಾತ್ರವಲ್ಲದೇ ರೈತರ ಪರ ಕಾರ್ಯಕ್ರಮಗಳ ಮೂಲಕವೂ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಟ ಯಶ್ ಇದೀಗ ರೈತರ ಕುರಿತಾದ ಚಿತ್ರಕಥೆ ಹೊಂದಿರುವ ನಟ ಶಿವರಾಜ್ ಕುಮಾರ್ ಅಭಿನಯದ "ಬಂಗಾರ  ಸನ್ ಆಫ್ ಬಂಗಾರದ ಮನುಷ್ಯ"ಕ್ಕೆ ಧ್ವನಿಯಾಗಿದ್ದಾರೆ. ಚಿತ್ರದ ಆರಂಭದಲ್ಲಿ ಚಿತ್ರಕಥೆಯನ್ನು ಯಶ್ ಸಂಕ್ಷಿಪ್ತವಾಗಿ ಪ್ರೇಕ್ಷಕರಿಗೆ ವಿವರಿಸಲಿದ್ದಾರಂತೆ. ಇನ್ನು ಸಿನಿಮಾ ರಂಗದ ಹೊರತಾಗಿಯೂ ಶಿವಣ್ಣ ಮತ್ತು ಯಶ್ ನಡುವೆ ಸ್ನೇಹ  ಸಂಬಂಧವಿದ್ದು, ವೈಯುಕ್ತಿಕವಾಗಿ ಶಿವಣ್ಣ ಮತ್ತು ಅವರ ಕುಟುಂಬ ಯಶ್ ಕುಟುಂಬಕ್ಕೆ ಹತ್ತಿರವಾಗಿದೆ. ಇದೇ ಕಾರಣಕ್ಕೆ ನಟ ಯಶ್ ಎರಡು ಮಾತಿಲ್ಲದೇ ಧ್ವನಿ ನೀಡಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ಚಿತ್ರ ಜಯಣ್ಣ ಮತ್ತು ಭೋಗೇಂದ್ರ ಅವರ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿದ್ದು, ಈ ಬ್ಯಾನರ್ ನಟ ಯಶ್ ಅವರಿಗೆ ಮೆಚ್ಚಿನ ನಿರ್ಮಾಣ ಸಂಸ್ಥೆಯಾಗಿದೆಯ ಈ ಹಿಂದೆ ಯಶ್ ಸಾಕಷ್ಟು ಚಿತ್ರಗಳನ್ನು ಈ ನಿರ್ಮಾಣ  ಸಂಸ್ಥೆಯಡಿಯಲ್ಲಿ ಮಾಡಿದ್ದಾರೆ. ಇದೂ ಕೂಡ ಯಶ್ ಧ್ವನಿ ನೀಡಲು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಈ ವಿಚಾರವನ್ನು ಸ್ವತಃ ಚಿತ್ರ ನಿರ್ಮಾಪಕ ಭೋಗೇಂದ್ರ ಅವರು ಹೇಳಿಕೊಂಡಿದ್ದು, ನಾನು ಚಿತ್ರಕ್ಕಾಗಿ ಧ್ವನಿ ನೀಡುವಂತೆ ಕೇಳಿದ ತಕ್ಷಣ ಯಶ್ ಮರು ಮಾತಿಲ್ಲದೆ ಒಪ್ಪಿಕೊಂಡರು. ಅವರ ಸಹೃದಯಕ್ಕೆ ನಾನು ಧನ್ಯವಾದ  ಹೇಳುತ್ತೇನೆ. ಅವರ ಈ ಉತ್ತಮ ಗುಣವೇ ಇಡೀ ಚಿತ್ರರಂಗ ಅವರನ್ನು ಇಷ್ಟ ಪಡುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.

ಬೇರೆ ನಾಯಕನ ಚಿತ್ರಕ್ಕೆ ಮತ್ತೊಬ್ಬ ನಾಯಕ ಧ್ವನಿ ನೀಡಿವುದು ಇದೇ ಹೊಸದೇನು ಅಲ್ಲ.. ಈ ಹಿಂದೆ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ನಟ ಸುದೀಪ್, ಉಪೇಂದ್ರ ಅವರ ಸೂಪರ್ ಚಿತ್ರಕ್ಕೆ ನಿರ್ದೇಶಕ  ಯೋದರಾಜ್ ಭಟ್ ಅವರು ಧ್ವನಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!