ನಟಿ ರಚಿತಾ ರಾಮ್ 
ಸಿನಿಮಾ ಸುದ್ದಿ

ಚಿತ್ರರಂಗದಲ್ಲಿ ಯಾರೂ ಮತ್ತೊಬ್ಬರ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ: ರಚಿತಾ ರಾಮ್

ಪ್ರೀತಮ್ ಗುಬ್ಬಿ ನಿರ್ದೇಶನದ 'ಜಾನಿ ಜಾನಿ ಯಸ್ ಪಾಪ' ಸಿನೆಮಾದಲ್ಲಿ ನಟಿ ರಚಿತಾ ರಾಮ್ ಮೊದಲ ಬಾರಿಗೆ ದುನಿಯಾ ವಿಜಯ್ ಎದುರು ನಟಿಸುತ್ತಿದ್ದಾರೆ. ಇದು ಹಿಂದಿನ 'ಜಾನಿ ಮೇರಾ ನಾಮ್'

ಬೆಂಗಳೂರು: ಪ್ರೀತಮ್ ಗುಬ್ಬಿ ನಿರ್ದೇಶನದ 'ಜಾನಿ ಜಾನಿ ಯಸ್ ಪಾಪ' ಸಿನೆಮಾದಲ್ಲಿ ನಟಿ ರಚಿತಾ ರಾಮ್ ಮೊದಲ ಬಾರಿಗೆ ದುನಿಯಾ ವಿಜಯ್ ಎದುರು ನಟಿಸುತ್ತಿದ್ದಾರೆ. ಇದು ಹಿಂದಿನ 'ಜಾನಿ ಮೇರಾ ನಾಮ್' ಸಿನೆಮಾದ ಮುಂದುವರೆದ ಭಾಗ. ಆ ಸಿನೆಮಾದಲ್ಲಿ ರಮ್ಯಾ ನಟಿಸಿದ್ದ ಪಾತ್ರಕ್ಕೆ ಈಗ ರಚಿತಾ ರಂಗು ತುಂಬಲಿದ್ದಾರೆ. ಈ ಹಿಂದೆ ದರ್ಶನ್ ಅವರ 'ಬುಲ್ ಬುಲ್' ಸಿನೆಮಾದಲ್ಲಿ ಕೂಡ ರಮ್ಯಾ ನಟಿಸಬೇಕಿದ್ದ ಪಾತ್ರಕ್ಕೆ ರಚಿತಾ ರಾಮ್ ಬದಲಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಈಗ ಕನ್ನಡ ಚಿತ್ರರಂಗದಲ್ಲಿ ಹಲವು ಆಸಕ್ತಿದಾಯಕ ಪಾತ್ರಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ "ಈ ರಂಗದಲ್ಲಿ ಯಾರು ಯಾರನ್ನು ಬದಲಿಸಲು ಸಾಧ್ಯವಿಲ್ಲ" ಎನ್ನುತ್ತಾರೆ. "ನಾನು ರಮ್ಯಾ ಅವರ ಅತಿ ದೊಡ್ಡ ಅಭಿಮಾನಿ. ಅವರನ್ನಾಗಲಿ ಅಥವಾ ಇನ್ಯಾರನ್ನಾಗಲಿ ಮೀರಿ ಮಿಂಚುವ ಯಾವುದೇ ಇರಾದೆ ನನಗಿಲ್ಲ. ನನ್ನ ಪ್ರತಿಭೆಯನ್ನು ಗುರುತಿಸಿ ನಿರ್ದೇಶಕರು ಪಾತ್ರ ನೀಡುತ್ತಾರೆ ಎಂದೇ ನಂಬಿದ್ದೇನೆ. ಪ್ರೀತಮ್ ಮತ್ತು ತಂಡ ಅವರ ಸಿನೆಮಾದ ಎರಡನೇ ಭಾಗ ಘೋಷಿಸಿದಾಗ ರಮ್ಯಾ ಹಿಂದಿರುಗಬಹುದು ಎಂದುಕೊಡಿದ್ದೆ. ಮತ್ತು ಚಿತ್ರತಂಡ ಅವರನ್ನು ಕೇಳಿಕೊಂಡಾಗ ಅವರು ಆಸಕ್ತಿ ತೋರಿದ್ದರು ಎಂದು ಕೂಡ ತಿಳಿದುಬಂತು. ಆದರೆ ಅವರು ರಾಜಕೀಯ ಜೀವನದಲ್ಲಿ ಈಗ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ಅವರಿಗೆ ನಟಿಸಲಾಗುತ್ತಿಲ್ಲ. ನನಗೆ ಹೊಂದಿಕೆಯಾಗುವ ಪಾತ್ರಗಳಲ್ಲಿ ಮಾತ್ರ ನಾನು ಭಾಗವಹಿಸುತ್ತನೆ" ಎನ್ನುತ್ತಾರೆ ರಚಿತಾ,. 
"ಜನ ರಮ್ಯಾ ನಂತರ ರಚಿತಾ ಎಂದು ಹೇಳಿದಾಗಲೆಲ್ಲಾ ನನಗೆ ಸಂತಸವಾಗುತ್ತದೆ. ಚಿತ್ರರಂಗದಲ್ಲಿ ಛಾಪು ಮೂಡಿಸಿದ ಮಾಲಾಶ್ರೀ ಮತ್ತು ರಮ್ಯಾ ನಟಿಸಿದ್ದ ಪಾತ್ರಗಳಂತಹ ಪಾತ್ರಗಳಲ್ಲಿ ನಟಿಸುವುದು ನನ್ನ ಕನಸಾಗಿತ್ತು" ಎನ್ನುತ್ತಾರೆ 'ಜಾನಿ ಜಾನಿ ಯಸ್ ಪಾಪ' ಸಿನೆಮಾದ ಬಗ್ಗೆ ಉತ್ಸುಕರಾಗಿರುವ ನಟಿ. 
ದುನಿಯಾ ವಿಜಯ್ ಎಂತಹ ಪಾತ್ರವನ್ನು ಕೂಡ ಅಚ್ಚುಕಟ್ಟಾಗಿ ಮಾಡಬಲ್ಲರು ಎನ್ನುವ ನಟಿ "ಅವರು ಆಕ್ಷನ್ ಹೀರೊ ಆಗಿ ಕೂಡ ಕಾಣಿಸಿಕೊಳ್ಳಬಲ್ಲರು ಮತ್ತು ರೋಮ್ಯಾಂಟಿಕ್ ಕಾಮಿಡಿ ಚಿತ್ರಗಳಲ್ಲೂ. ಇದಕ್ಕೆ ಜಾನಿ ಮೇರಾ ನಾಮ್ ಉತ್ತಮ ಉದಾಹರಣೆ" ಎನ್ನುತ್ತಾರೆ. 
ದುನಿಯಾ ಟಾಕೀಸ್ ಬ್ಯಾನರ್ ಅಡಿ ಮೂಡಿಬರುತ್ತಿರುವ 'ಜಾನಿ ಜಾನಿ ಯಸ್ ಪಾಪ' ಜುಲೈ ನಿಂದ ಚಿತ್ರೀಕರಣ ಪ್ರಾರಂಭಿಸಲಿದೆ. ಈ ಸಿನೆಮಾಗೆ ವಿ ಹರಿಕೃಷ್ಣ ಸಂಗೀತ ನೀಡಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT