ಸಿನಿಮಾ ಸುದ್ದಿ

ಜೇಮ್ಸ್‌ ಬಾಂಡ್‌ ಖ್ಯಾತಿಯ ಹಾಲಿವುಡ್ ನಟ ರೋಜರ್‌ ಮೂರ್‌ ನಿಧನ

Srinivasamurthy VN

ಲಂಡನ್‌: ಜೇಮ್ಸ್ ಬಾಂಡ್ ಖ್ಯಾತಿಯ ನಟ ಜೇಮ್ಸ್ ಮೂರ್ (89 ವರ್ಷ) ಅವರು ಮಂಗಳವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

‘ಲಿವ್‌ ಅಂಡ್‌ ಲೆಟ್‌ ಡೈ', ಮತ್ತು ‘ದ ಸ್ಪೈ ಹೂ ಲವ್ಡ್ ಮಿ' ಸೇರಿದಂತೆ 7 ಚಿತ್ರಗಳಲ್ಲಿ ಜೇಮ್ಸ್‌ಬಾಂಡ್‌ ಪಾತ್ರ ನಿರ್ವಹಿಸಿದ್ದ ಬ್ರಿಟನ್‌ ನ ಖ್ಯಾತ ನಟ ರೋಜರ್‌ ಮೂರ್‌ (89) ಕ್ಯಾನ್ಸರ್‌ನಿಂದಾಗಿ ಅಸುನೀಗಿದ್ದಾರೆ ಎಂದು ಅವರ  ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಮೂರ್ ಅವರ ಕುಟುಂಬಸ್ಥರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, "ನಮ್ಮ ತಂದೆ ಸರ್‌ ರೋಜರ್‌ ಸಾವಿಗೀಡಾಗಿರುವುದನ್ನು ದುಃಖ ಮಡುಗಟ್ಟಿದ ಭಾರದ ಹೃದಯದಿಂದ ತಿಳಿಸಲ್ಪಡಲು  ಇಚ್ಛಿಸುತ್ತೇನೆ. ಅವರ ಸಾವು ನಮ್ಮ ಕುಟುಂಬದ ಆತ್ಮಸ್ಥೈರ್ಯವನ್ನೇ ಕುಂದಿಸಿದೆ ಎಂದು ಟ್ವೀಟ್ ಮಾಡಲಾಗಿದೆ.

ಲಂಡನ್ನಿನ ಸ್ಟಾಕ್‌ ವೆಲ್‌ನಲ್ಲಿ 1927, ಅ.14ರಂದು ಜನಿಸಿದ ಮೂರ್‌, ರಾಯಲ್‌ ಅಕಾಡೆಮಿ ಆಫ್‌ ಡ್ರಾಮೆಟಿಕ್‌ ಆಟ್ಸ್‌ರ್‍ನಲ್ಲಿ ವ್ಯಾಸಂಗ ಮಾಡಿದರು. 1966ರಲ್ಲಿ ಜೇಮ್ಸ್‌ಬಾಂಡ್‌ 007 ಪಾತ್ರದಲ್ಲಿ ಹೆಚ್ಚು ದಿನಗಳ ಕಾಲ  ಮುಂದುವರಿಯುವುದಿಲ್ಲ ಎಂದು ಸೀನ್‌ ಕಾನರಿ ಘೋಷಣೆ ಮಾಡುತ್ತಿದ್ದಂತೆ, ಆ ಸ್ಥಾನ ತುಂಬುವ ಅವಕಾಶವನ್ನು ರೋಜರ್‌ ಮೂರ್‌ ಸಮರ್ಥವಾಗಿ ಬಳಸಿಕೊಂಡರು. ಇಯಾನ್‌ ಫ್ಲೆಮಿಂಗ್‌ ಪುಸ್ತಕ ಆಧರಿಸಿ 1973-1985ರವರೆಗೂ  ತೆರೆಕಂಡ ಸತತ 7 ಜೇಮ್ಸ್‌ಬಾಂಡ್‌ ಸರಣಿಯ ಚಿತ್ರಗಳಲ್ಲಿ ರೋಜರ್‌ ಮೂರ್‌ ಅವರು ಜೇಮ್ಸ್‌ಬಾಂಡ್‌ ಪಾತ್ರದಲ್ಲಿ ನಟಿಸಿ ವಿಶ್ವದಾದ್ಯಂತ ಜನಪ್ರಿಯರಾಗಿದ್ದರು. ಅತಿ ಹೆಚ್ಚು ಚಿತ್ರಗಳಲ್ಲಿ ಜೇಮ್ಸ್‌ಬಾಂಡ್‌ ಪಾತ್ರ ನಿರ್ವಹಿಸಿದ  ಖ್ಯಾತಿಯೂ ಮೂರ್‌ ಅವರದ್ದಾಗಿತ್ತು. ಜೊತೆಗೆ ಈ ಎಲ್ಲಾ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದವು.

SCROLL FOR NEXT