ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಚಿತ್ರರಂಗದ ಗುಂಪುಗಾರಿಕೆಗೆ ಆ ದೊಡ್ಡ ನಟನೇ ಕಾರಣ: "ಬುಲೆಟ್" ಟ್ವೀಟ್

ಕನ್ನಡ ಚಿತ್ರರಂಗದ ಇತ್ತೀಚೆಗಿನ ಗುಂಪುಗಾರಿಕೆಗೆ ಆ ದೊಡ್ಡ ನಟನೇ ಕಾರಣ ಎಂದ ಖ್ಯಾತ ಹಾಸ್ಯನಟ ಮತ್ತು ನಿರ್ಮಾಪಕ ಬುಲೆಟ್ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರರಂಗದ ಇತ್ತೀಚೆಗಿನ ಗುಂಪುಗಾರಿಕೆಗೆ ಆ ದೊಡ್ಡ ನಟನೇ ಕಾರಣ ಎಂದ ಖ್ಯಾತ ಹಾಸ್ಯನಟ ಮತ್ತು ನಿರ್ಮಾಪಕ ಬುಲೆಟ್ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಟ ಬುಲೆಟ್ ಪ್ರಕಾಶ್ ಅವರು, ಕನ್ನಡ ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಯಾರು ಕಾರಣ ಎನ್ನುವುದನ್ನು ನಾನು ಬುಧವಾರ ತಿಳಿಸುತ್ತೇನೆ. ಡಾ ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ  ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ನಾನು ಬೆಳಗ್ಗೆ ಸಂಪೂರ್ಣವಾಗಿ ತಿಳಿಸುತ್ತೇನೆ ಎಂದರು. ನಾನು ಸತ್ಯವನ್ನೇ ಹೇಳುತ್ತೇನೆ. ಎಲ್ಲರೂ  ಮೆಚ್ಚಿಕೊಳ್ಳುವಂತಹ ನಟನ ಬಗ್ಗೆ ನಾನು ನಾಳೆ ಹೇಳುತ್ತೇನೆ. ಆ ವ್ಯಕ್ತಿ ದರ್ಶನ್ ಅವರನ್ನು ಹಾಳು ಮಾಡಿದ್ದಾನೆ. ಚೆನ್ನಾಗಿ ಇದ್ದ ಚಿತ್ರರಂಗದಲ್ಲಿ ಸುಂಟರಗಾಳಿ ಏಳಲು ಆ ವ್ಯಕ್ತಿಯೇ ಕಾರಣವಾಗಿದ್ದು, ಆ ವ್ಯಕ್ತಿಯಿಂದಲೇ ಗುಂಪುಗಾರಿಕೆ  ಆರಂಭವಾಗಿದೆ. ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸುತ್ತೇನೆ. ದೀಪ ಇರುವ ಮೊದಲು ಜೋರಾಗಿ ಉರಿಯುತ್ತದೆ ಎಂದು ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

ಬುಲೆಟ್ "ಯೂಟರ್ನ್"

ಚಿತ್ರರಂಗದ ಗುಂಪುಗಾರಿಕೆ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದು ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದ ನಟ ಬುಲೆಟ್ ಪ್ರಕಾಶ್ ಇಂದು ಯೂಟರ್ನ್ ಹೊಡೆದಿದ್ದು, ಇಂದು ಮತ್ತೆ ಟ್ವೀಟ್ ಮಾಡಿ ಹಿರಿಯರೊಂದಿಗೆ ಚರ್ಚಿಸಿ  ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೆ ತಮ್ಮ ಟ್ವೀಟ್ ನಿಂದ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಬುಲೆಟ್ ಪ್ರಕಾಶ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

D Boss, D Boss ಜೈಕಾರಕ್ಕೆ ಗರಂ: ನಿಮ್ಮಂತವರಿಂದಲೇ ತೊಂದರೆ ಆಗ್ತೀರೋದು, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಬುದ್ಧಿ ಮಾತು, Video!

ಶಿವಮೊಗ್ಗ: ನಡು ರಸ್ತೆಯಲ್ಲೇ ಕಬ್ಬಿಣದ ರಾಡ್ ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, Video ವೈರಲ್ ಬಳಿಕ ಆರೋಪಿ ಬಂಧನ!

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನ್ಯೂ ಟೀಂ ಘೋಷಣೆ; ರಾಮ್ ಮಾಧವ್, ಸ್ಮೃತಿ ಜೊತೆ ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ!