ಸಿನಿಮಾ ಸುದ್ದಿ

ಸಹನಟನಲ್ಲಿ ಸಹೋದರನನ್ನು ಕಂಡುಕೊಳ್ಳಲು ಸಹಕರಿಸಿದ 'ಸಿಲಿಕಾನ್ ಸಿಟಿ'

Guruprasad Narayana
ಬೆಂಗಳೂರು: 'ಸಿಲಿಕಾನ್ ಸಿಟಿ' ಬಿಡುಗಡೆಯಾಗುವವರೆಗೂ ಬೇರೆ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳದೆ ಇರಲು ನಟ ಸೂರಜ್ ಗೌಡ ನಿರ್ಧರಿಸಿದ್ದಾರೆ. ಇದು ಸದ್ಯಕ್ಕೆ ಸೆನ್ಸಾರ್ ಮಂಡಳಿ ಮುಂದಿದ್ದು, ಜೂನ್ ಮಧ್ಯ ಭಾಗದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. 
ಈ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರವನ್ನು ಮುರಳಿ ಗುರಪ್ಪ ನಿರ್ದೇಶಿಸಿದ್ದು, ಸೂರಜ್, ನಟ ಶ್ರೀನಗರ ಕಿಟ್ಟಿ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಕೂಡ ಈ ಸಿನೆಮಾದ ಮೂಲಕ ಹಲವು ದಿನಗಳ ನಂತರ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ. "'ಸಿಲಿಕಾನ್ ಸಿಟಿ'ಯ ಬಗ್ಗೆ ನನಗೆ ಭರವಸೆ ಇದೆ. ನಾನು ನಟನಾಗಿ ಹೊರಹೊಮ್ಮಲು ಇದು ನನಗೆ ಸಹಾಯ ಮಾಡಿದೆ. ಮುರಳಿ ಅವರ ನಿರ್ದೇಶನ ಅತ್ಯುತ್ತಮವಾದದ್ದು. ಮತ್ತು ಚಿತ್ರತಂಡ ಬಹಳ ಆತ್ಮೀಯವಾಗಿತ್ತು" ಎನ್ನುತ್ತಾರೆ ಸೂರಜ್. 
ನಿರ್ದೇಶಕ, ಸಿನೆಮಾ ಹೊರತಾಗಿಯೂ ಸಿನೆಮಾ ಸೆಟ್ ನಲ್ಲಿ ಸಹೋದರನನ್ನು ಕಂಡುಕೊಂಡೆ ಎನ್ನುತ್ತಾರೆ ಸೂರಜ್. ಅದು ಮತ್ಯಾರು ಅಲ್ಲ ಸಹನಟ ಶ್ರೀನಗರ ಕಿಟ್ಟಿ ಎಂದು ಕೂಡ ತಿಳಿಸುವ ಅವರು "ನಾವು ಈ ಸಿನೆಮಾದಲ್ಲಿ ಸಮಾನಾಂತರ ಹಿರೋಗಳಾಗಿ ಕಾಣಿಸಿಕೊಂಡಿದ್ದೇವೆ ಮತ್ತು ಈ ಚಿತ್ರದಲ್ಲಿ ಮಧ್ಯಮ ವರ್ಗದ ಮೌಲ್ಯಗಳನ್ನು ಚರ್ಚಿಸಲಿದ್ದೇವೆ. ಸಿನೆಮಾದಲ್ಲಿ ನಾವಿಬ್ಬರು ಸಹೋದರರು. ಚಿತ್ರೀಕರಣ ಬಹಳ ಆಹ್ಲಾದಕರವಾಗಿತ್ತು. ಇಬ್ಬರೂ ಪರಸ್ಪರ ಆರಾಮವಾಗಿರುವತೆ ಅವರು ನೋಡಿಕೊಂಡರು" ಎನ್ನುತ್ತಾರೆ. 
ರಂಗಭೂಮಿ ಹಿನ್ನಲೆಯಿಂದ ಬಂದಿರುವ ಅತ್ಯುತ್ತಮ ನಟ ಶ್ರೀನಗರ ಕಿಟ್ಟಿ ಎಂದು ಬಣ್ಣಿಸುವ ಸೂರಜ್ "ಅವರು ನನ್ನನ್ನು ಸಹೋದರಂತೆ ಕಂಡರು ಮತ್ತು ಚಿತ್ರೀಕರಣ ಮುಗಿದ ನಂತರವೂ ಅವರು ಅದೇ ರೀತಿ ನನ್ನನು ಕಾಣುತ್ತಿದ್ದಾರೆ" ಎನ್ನುತ್ತಾರೆ. 
ಕಾವ್ಯ ಶೆಟ್ಟಿ ಮತ್ತು ಏಕ್ತಾ ರಾಥೋಡ್ ನಟಿಸಿದ್ದ ತಮಿಳು ಸಿನೆಮಾ 'ಮೆಟ್ರೋ' ಇಂದ ಸ್ಫೂರ್ತಿ ಪಡೆದಿದೆಯಂತೆ 'ಸಿಲಿಕಾನ್ ಸಿಟಿ'. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಶ್ರೀನಿವಾಸ್ ರಾಮಯ್ಯ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 
SCROLL FOR NEXT