ನಟಿ ರಾಧಿಕಾ ಕುಮಾರಸ್ವಾಮಿ 
ಸಿನಿಮಾ ಸುದ್ದಿ

ಕಿರುತೆರೆ ಪಾದಾರ್ಪಣೆ ಬಗ್ಗೆ ಉತ್ಸುಕರಾಗಿರುವ ರಾಧಿಕಾ

ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಕಿರುತೆರೆಯಲ್ಲಿ ಪಾದಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೂನ್ ಮಧ್ಯಭಾಗದಿಂದ ಪ್ರಸಾರವಾಗಲಿರುವ

ಬೆಂಗಳೂರು: ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ನಟಿ ರಾಧಿಕಾ ಕುಮಾರಸ್ವಾಮಿ ಕಿರುತೆರೆಯಲ್ಲಿ ಪಾದಾರ್ಪಣೆ ಮಾಡಲು ಸಿದ್ದರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಜೂನ್ ಮಧ್ಯಭಾಗದಿಂದ ಪ್ರಸಾರವಾಗಲಿರುವ ಡಾನ್ಸ್ ಡಾನ್ಸ್ ಜೂನಿಯರ್ಸ್ - ಮಕ್ಕಳ ನೃತ್ಯ ರಿಯಾಲಿಟಿ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನೆನಪಿರಲಿ ಸಿನೆಮಾ ಖ್ಯಾತಿಯ ಪ್ರೇಮ್ ಮತ್ತು ಬಾಲಿವುಡ್ ನೃತ್ಯ ನಿರ್ದೇಶಕ ಸಲ್ಮಾನ್ ಕೂಡ ಸಹ ತೀರ್ಪುಗಾರರು.
ಕಿರುತೆರೆಯ ಪಾದಾರ್ಪಣೆ ಒಳ್ಳೆಯ ಅನುಭವ ನೀಡುವ ಭರವಸೆಯಲ್ಲಿ ಉತ್ಸುಕರಾಗಿರುವ ನಟಿ "ಈ ಕಾರ್ಯಕ್ರಮದಲ್ಲಿ ನೃತ್ಯವಿರುತ್ತಾದ್ದರಿಂದ ನಾನು ತೀರ್ಪುಗಾರಳಾಗಿ ಭಾಗವಹಿಸಲು ಒಪ್ಪಿಕೊಂಡೆ. ಪುಟ್ಟ ಮಕ್ಕಳು ಹೆಜ್ಜೆ ಹಾಕುವುದನ್ನು ನಾನು ನೋಡಲಿದ್ದೇನೆ ಮತ್ತು ಇದು ತೀರ್ಪು ನೀಡಲು ಕಷ್ಟ ಕೊಡುತ್ತದೆ" ಎನ್ನುತ್ತಾರೆ ರಾಧಿಕಾ. "ಈ ಕಾರ್ಯಕರ್ಮದಲ್ಲಿ ನಾನು ಕೂಡ ಪ್ರದರ್ಶನ ನೀಡಲಿದ್ದೇನೆ ಮತ್ತು ಅದಕ್ಕಾಗಿ ಕೆಲವು ದಿನಗಳಿಂದ ಅಭ್ಯಾಸ ಮಾಡುತ್ತಿದ್ದೇನೆ" ಎಂದು ತಿಳಿಸುತ್ತಾರೆ. 
ನನ್ನ ನೃತ್ಯದ ದೊಡ್ಡ ಅಭಿಮಾನಿ ಶಮಿಕಾ 
ರಾಧಿಕಾ ಅವರ ಪುತ್ರಿ ಶಮಿಕಾ, ತಮ್ಮ ನೃತ್ಯದ ದೊಡ್ಡ ಅಭಿಮಾನಿ ಎಂದು ತಿಳಿಸುವ ಅವರು "ನಾನು ಮನೆಯಲ್ಲಿ ಅಭ್ಯಾಸ ಮಾಡುವಾಗ ಅವಳು ನನ್ನನ್ನು ಕೂಡಿಕೊಂಡು ಅನುಕರಿಸಲು ಪ್ರಯತ್ನಿಸುತ್ತಾಳೆ. ಹಲವು ನೃತ್ಯಪ್ರಕಾರಗಳನ್ನು ಪ್ರಯತ್ನಿಸಿವುದಕ್ಕೆ ಅವಳಿಗೆ ಇಷ್ಟ ಮತ್ತು ಯಾವಾಗಲೂ ಚಟುವಟಿಕೆಯಿಂದ ನೃತ್ಯ ಮಾಡುತ್ತಾಳೆ. ಅವಳ ವಿದ್ಯಾಭ್ಯಾಸದಲ್ಲಿಯೂ ಆಸಕ್ತಿ ಹೊಂದಿರುವಂತೆ ನಾನು ನೋಡಿಕೊಳ್ಳುತ್ತಿದ್ದೇನೆ" ಎನ್ನುತ್ತಾರೆ ನಟಿ. 
ಮುಂದಿನ ಯೋಜನೆ ಬಗ್ಗೆ!
ಅರ್ಜುನ್ ಸರ್ಜಾ ಮತ್ತು ಜೆಡಿ ಚಕ್ರವರ್ತಿ ಅವರೊಂದಿಗೆ ನಾಯಕನಟಿಯಾಗಿ ನಟಿಸುತ್ತಿರುವ ರಾಧಿಕಾ, ಸಿನೆಮಾ ಬಗ್ಗೆ ಹೆಚ್ಚು ವಿವರಗಳನ್ನು ನೀಡಲು ನಿರಾಕರಿಸುತ್ತಾರೆ. "ಸರಿಯಾದ ಸಮಯದಲ್ಲಿ ಈ ಸಿನೆಮಾ ಬಗ್ಗೆ ಹೆಚ್ಚು ವಿವರ ತಿಳಿಸುತ್ತೇನೆ" ಎನ್ನುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಲಸೆ ವೀಸಾ ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಲಸೆ ನೀತಿ ಮತ್ತಷ್ಟು ಕಠಿಣ, ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌..!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!