ಕನಕ ಚಿತ್ರದ ಟ್ರೇಲರ್ ನ ಒಂದು ದೃಶ್ಯ
ಕನ್ನಡದ ಹೊಸ ಚಿತ್ರ ಕನಕದ ಟ್ರೇಲರ್ ಬಿಡುಗಡೆಯಾಗಿದ್ದು ಆನ್ ಲೈನ್ ನಲ್ಲಿ ಸದ್ದು ಮಾಡಿದ್ದು ನಿರ್ದೇಶಕ ಆರ್.ಚಂದ್ರು ಥ್ರಿಲ್ ಆಗಿದ್ದಾರೆ.
ಜನರು ಸಿನಿಮಾದ ಆಹ್ವಾನವೆಂದು ಟ್ರೇಲರ್ ನ್ನು ಭಾವಿಸುತ್ತಾರೆ. ಮತ್ತು ಅದರ ಜನಪ್ರಿಯತೆ ಕೂಡ ಇಲ್ಲಿ ಪರಿಗಣನೆಗೆ ಬರುತ್ತದೆ. ಕಳೆದ ನಾಲ್ಕು ದಿನಗಳಲ್ಲಿ ಆನ್ ಲೈನ್ ನಲ್ಲಿ ಕನಕ ಚಿತ್ರದ ಟ್ರೇಲರ್ ಟಾಪ್ ನಲ್ಲಿದೆ ಎನ್ನುತ್ತಾರೆ ಚಂದ್ರು.
ಕನಕ ಟ್ರೇಲರ್ ಸಿನಿಮಾ ವಿತರಕರು ಮತ್ತು ಗೋಲ್ಡಿ ಫಿಲ್ಮ್ಸ್ ಅವರ ಗಮನ ಕೂಡ ಸೆಳೆದಿದೆ. ಗೋಲ್ಡಿ ಫಿಲ್ಮ್ಸ್ ಬಾಹುಬಲಿ ಚಿತ್ರವನ್ನು ಕರ್ನಾಟಕದಲ್ಲಿ ವಿತರಿಸಿದದ ಕಂಪೆನಿ. ಅದು ಚಿತ್ರದ ವಿತರಣೆಯನ್ನು ಖರೀದಿಸುವ ಆಲೋಚನೆಯಲ್ಲಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಚಂದ್ರು ಹೇಳಿದರು.
ಈ ಮಧ್ಯೆ ಚಿತ್ರದ ಸಂಗೀತ ಬಿಡುಗಡೆಯನ್ನು ಅದ್ದೂರಿಯಾಗಿ ಆಯೋಜಿಸುವ ಸಿದ್ದತೆಯಲ್ಲಿದೆ ಚಿತ್ರತಂಡ. ಇದೇ 19ರಂದು ಶಿಡ್ಲಘಟ್ಟದಲ್ಲಿ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮವಿದೆ. ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತರನ್ನು ಕರೆಸುವ ಯೋಜನೆಯಲ್ಲಿ ಚಿತ್ರತಂಡವಿದೆ. ಕನಕ ಚಿತ್ರದಲ್ಲಿ ಹರಿಪ್ರಿಯಾ ಮತ್ತು ಮಾನ್ವಿತ ಹರೀಶ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.