ಬೆಂಗಳೂರು: ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿ ಅಭಿಮಾನಿಗಳಿಗೆ ಅಚ್ಚರಿ ನೀಡಿರುವ ಶ್ರದ್ಧಾ ಶ್ರೀನಾಥ್ ಸದ್ಯ ಬ್ಯುಸಿ ನಟಿಯಾಗಿದ್ದಾರೆ.
ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿರುವ ಶ್ರದ್ಧಾ ತೆಲುಗಿನಲ್ಲಿ ಆದಿ ಜೊತೆ ಈಡುಜೋಡು ಮತ್ತು ಹಾಯ್ ಕೃಷ್ಣ ಮುಕುಂದ ಮುರಾರಿ ಎಂಬ ಸಿನಿಮಾ ಗಳ ಶೂಟಿಂಗ್ ಅಂತಿಮ ಘಟ್ಟ ತಲುಪಿದೆ, ಕನ್ನಡ ಗೋದ್ರಾ ಸಿನಿಮಾದ ಶೂಟಿಂಗ್ ಇನ್ನು 5 ದಿನ ಬಾಕಿ ಉಳಿದಿದೆ.
ನಿರ್ದೇಶಕರು ನಾನು ಬ್ಯುಸಿಯಾಗಿದ್ದೇನೆ ಎಂದುಕೊಳ್ಳುತ್ತಾರೆ, ಆದರೆ ನಾನು ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗುತ್ತೀದ್ದೇನೆ, ಆಪರೇಷನ್ ಕನ್ನಡದ ಅಲಮೇಲಮ್ಮ ಮತ್ತು ತಮಿಳಿನ ವಿಕ್ರಮ್ ವೇದ ಸಿನಿಮಾಗಳು ನನ್ನ ಮನಸಿನ ಮೇಲೆ ಪರಿಣಾಮ ಬೀರಿವೆ, ಯಾವ ರೀತಿಯ ವಿಷಯವುಳ್ಳ ಪಾತ್ರಗಳನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತೆ ಮಾಡುತ್ತಿದ್ದೇನೆ ಎಂದು ಶ್ರದ್ಧಾ ಹೇಳಿದ್ದಾರೆ.
ಶ್ರದ್ಧಾ ಹೊಸದನ್ನು ಪ್ರಯತ್ನಿಸುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಏಕೆಂದರೇ ಇತ್ತೀಚೆಗೆ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರ್ಯಾಂಪ್ ವಾಕ್ ಮಾಡಿದ್ದರು. ಅದೊಂದು ನಿಧಿ ಸಂಗ್ರಹ ಕಾರ್ಯಕ್ರಮವಾಗಿತ್ತು, ಹೀಗಾಗಿ ಅದರಲ್ಲಿ ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.
ನಾನು ಯಾವುದೇ ಸಿನಿಮಾದಲ್ಲಿ ಒಂದು ಭಾಗವಾಗಿರಲು ಬಯಸುತ್ತೇನೆ, ನಾಯಕನಿಗೆ ನಾನು ಸ್ಪರ್ಧಿಯಲ್ಲ, ಆದರೆ ನಾಯಕನಷ್ಟೇ ನಾಯಕಿಗೂ ಕೂಡ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
ಪರದೆ ಮೇಲೆ ಸಿಲ್ಲಿ ಥಿಂಗ್ಸ್ ಮಾಡುವುದು ನನಗೆ ಇಷ್ಟವಾಗುವುದಿಲ್ಲ, ಕಮರ್ಷಿಯಲ್ ಅಥವಾ ಸ್ವಾರಸ್ಯಕರ ಸಿನಿಮಾವೇ ಇರಲಿ, ನನ್ನ ಪಾತ್ರಕ್ಕೂ ಹೆಚ್ಚಿನ ಪ್ರಭಾವ ಬೀರಬೇಕು, ಸಿನಿಮಾದಲ್ಲಿ ಉತ್ತಮ ಪಾತ್ರ ನನ್ನದಾಗಿರಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics