ಜೈಪುರ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಬಿಡುಗಡೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜೈಪುರದ ಮಾಜಿ ರಾಜಮನೆತನ ಕೂಡ ತೀವ್ರ ವಿರೋಧ ವ್ಯಕ್ತ ಪಡಿಸಿದೆ.
ಐತಿಹಾಸಿಕ ಸತ್ಯಗಳನ್ನು ತಿರುಚಿದರೇ ಅದಕ್ಕೆ ವಿರೋಧ ವ್ಯಕ್ತ ಪಡಿಸುವುದಾಗಿ ಮಾಜಿ ರಾಜಕುಮಾರಿ ಹಾಗೂ ಬಿಜೆಪಿ ಶಾಸಕಿ ದಿಯಾ ಕುಮಾರಿ ಹೇಳಿದ್ದಾರೆ. ಸಮುದಾಯದ ಜನರ ಭಾವನೆಗಳಿಗೆ ಯಾವುದೇ ರೀತಿಯ ನೋವುಂಟು ಮಾಡುವ ಅಂಶಗಳಿದ್ದರೇ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತ ಪಡಿಸುವುದಾಗಿ ತಿಳಿಸಿದ್ದಾರೆ.
ನಿರ್ದೇಶಕ ಸಂಜಯ್ ಲೀಲ್ ಬನ್ಸಾಲಿ ಚಿತ್ತೂರಿನ ರಾಣಿ ಪದ್ಮಾವತಿ ಜೀವನವನ್ನು ತೆರೆಯ ಮೇಲೆ ತರಲು ಹೊರಟಿದ್ದು ರೀಲೀಸ್ ಡೇಡ್ ಹತಕ್ತಿರವಾಗುತ್ತಿದ್ದಂತೆ ಹಲವು ತೊಂದರೆಗಳು ಎದುರಾಗುತ್ತಿವೆ.
ರಾಜಮನೆತನದ ಬಗ್ಗೆ ಯಾವುದೇ ವಿರೋಧಾತ್ಮಕ ಅಂಶಗಳು ಕಂಡು ಬಂದರೆ ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ,.
ಪ್ರದರ್ಶನ ಮಾಡುವ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆಂದು ಬಿಜೆಪಿ ಶಾಸಕ ರಾಜಾ ಸಿಂಗ್ ಎಚ್ಚರಿಕೆ ನೀಡಿದ್ದಾರೆ.