ಸುದೀಪ್ 
ಸಿನಿಮಾ ಸುದ್ದಿ

ಸುದೀಪ್ ನಿರ್ಮಾಣದ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾಗೆ ಗುರುದತ್ತಾ ಗಾಣಿಗ ನಿರ್ದೇಶನ

ರ್ದೇಶಕರುಗಳು, ಕಲಾವಿದರು ಹಾಗೂ ತಂತ್ರಜ್ಞರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವಲ್ಲಿ ಸುದೀಪ್ ಯಾವಾಗಲೂ ಮುಂದಿರುತ್ತಾರೆ, ಈಗ ...

ಬೆಂಗಳೂರು:  ನಿರ್ದೇಶಕರುಗಳು, ಕಲಾವಿದರು ಹಾಗೂ ತಂತ್ರಜ್ಞರನ್ನು ಗುರುತಿಸಿ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡುವಲ್ಲಿ ಸುದೀಪ್ ಯಾವಾಗಲೂ ಮುಂದಿರುತ್ತಾರೆ, ಈಗ ಸದ್ಯ ಸ್ಯಾಂಡಲ್ ವುಡ್ ಗೆ ಸುದೀಪ್ ಗುರುದತ್ತ ಗಾಣಿಗ ಎಂಬ ಹೊಸ ನಿರ್ದೇಶಕನನ್ನು ಪರಿಚಯಿಸುತ್ತಿದ್ದಾರೆ.
ಜಾಕ್ ಮಂಜು ಮೈಸೂರು ಟಾಕೀಸ್ ಅಸೋಸಿಯೇಷನ್ ಮತ್ತು ಕಿಚ್ಚ ಪ್ರೊಡಕ್ಷನ್ ಸಹಯೋಗದಲ್ಲಿ  ರೆಬೆಲ್ ಸ್ಟಾರ್ ಅಂಬರೀಷ್ ಅಭಿನಯಿಸುತ್ತಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಗುರು ನಿರ್ದೇಶಿಸುತ್ತಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುದೀಪ್, ನಿರ್ದೇಶಕ ಯಾರು ಎಂಬುದರ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದ್ದರು, ಅಂತಮಿವಾಗಿ ಗುರು ಅವರಿಗೆ ಅವಕಾಶ ನೀಡಲು ನಿರ್ದರಿಸಿದ್ದಾರೆ.
ಪ್ರೊಡಕ್ಷನ್ ಹೌಸ್ ನಿಂದ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ, ನಿರ್ದೇಶಕ, ಸಿನಿಮಾ ಆರಂಭವಾಗುವ ದಿನಾಂಕ ಎಲ್ಲವನ್ನೂ ಸುದೀಪ್ ಅವರೇ ಬಹಿರಂಗ ಪಡಿಸಲಿದ್ದಾರೆ.
ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಗುರು ಅವರಿಗೆ ಸಿನಿಮಾ ಬಗ್ಗೆ ಹೆಚ್ಚಿನ ಅಭಿರುಚಿಯಿದ್ದು, ಹಲವು ನಿರ್ದೇಶಕರುಗಳ ಕೆಳಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ತಮ್ಮ ಮಾರ್ಗದರ್ಶಕನಿಗೆ ಉತ್ತಮ ಕೆಲಸ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಲು ಗುರು ನಿರ್ಧರಿಸಿದ್ದಾರೆ.
ತಮಿಳಿನ ಹಿಟ್ ಸಿನಿಮಾ ಪಂಡಿ ಎಂಬ ಸಿನಿಮಾದ ರಿಮೇಕ್ ಇದಾಗಿದೆ,ಈ ತಿಂಗಳ ಅಂತ್ಯದಲ್ಲಿ ಸಿನಿಮಾ ಸೆಟ್ಟೇರಲಿದ್ದು, ಹೊಸ ನಿರ್ದೇಶಕ ಗುರು ಅವರಿಗೆ ಇದೊಂದು ದೊಡ್ಡ ಸವಾಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)