ಸಿನಿಮಾ ಸುದ್ದಿ

ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ: ನಟ ಪ್ರಕಾಶ್ ರೈ ಸ್ಪಷ್ಟನೆ

Shilpa D
ಬೆಂಗಳೂರು:  ಜನಪ್ರಿಯತೆ ಇದೆ ಎಂದ ಮಾತ್ರಕ್ಕೆ ನಟರು, ಕಲಾವಿದರು, ರಾಜಕೀಯ ಪ್ರವೇಶಿಸುವುದು ಸರಿಯಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ. 
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿದ್ದರು. ಜನಪ್ರಿಯತೆ ಇದೆ ಎಂಬ ಮಾತ್ರಕ್ಕೆ ನಟರು ರಾಜಕಾರಣವನ್ನು ಆಯ್ಕೆ ಮಾಡುತ್ತಿರುವುದು ದೇಶದಲ್ಲಿ ನಡೆಯುತ್ತಿರುವ ದುರಂತ ಎಂದು ಹೇಳಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಹೇಳಿಕೆಗೆ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರು ಪ್ರೆಸ್ ಕ್ಲಬ್ ಗೆ ಬಹಿರಂಗ ಪತ್ರ ಬರೆದಿದ್ದಾರೆ.
'ನೀವೆಲ್ಲಾ ಮಾಧ್ಯಮದವರು ಸೇರಿ ನನ್ನನ್ನು ಸಂವಾದದಲ್ಲಿ ಪಾಲ್ಗೋಳ್ಳುವಂತೆ ಆಹ್ವಾನಿಸಿದ್ದೀರಿ, ಅದಕ್ಕೆ ನಾನು ಒಪ್ಪಿ ಬಂದೆ, ಪ್ರತಿಯೊಬ್ಬರ ಪ್ರಶ್ನೆಗೂ ನಾನು ಉತ್ತರಿಸಿದ್ದೇನೆ, ಆದರೆ ನಂತರ ಎಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳಲ್ಲಿ  ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಪ್ರಕಟಿಸಲಾಗಿದೆ. ನಮ್ಮ ನಿಮ್ನ ನಡುವೆ ನಂಬಿಕೆ ಎಲ್ಲಿಂದ ಬರಬೇಕು, ಪ್ರೆಸ್ ಕ್ಲಬ್ ನಲ್ಲಿ ಎಲ್ಲಾ ಮಾಧ್ಯಮದವರು ಇದ್ದು ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಇಂತಹವರ ವಿರುದ್ಧ ಪ್ರೆಸ್ ಕ್ಲಬ್ ಯಾವ ಕ್ರಮಕೈಗೊಳ್ಳುತ್ತದೆ. ಎಂದು ಪ್ರಶ್ನಿಸಿರುವ ಪ್ರಕಾಶ್ ರೈ, ನನ್ನ ಪ್ರಶ್ನೆಗೆ ಉತ್ತರ ಸಿಗಲಿದೆ ಎಂಬ ಭರವಸೆಯಲ್ಲಿದ್ದೇನೆ ಎಂದು ಬರೆದಿದ್ದಾರೆ. '
ನ.12 ರಂದು ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದ ಪ್ರಕಾಶ್ ರೈ, ಜನಪ್ರಿಯತೆ ಇದೆ ಎಂಬ ಮಾತ್ರಕ್ಕೆ ನಟರು ರಾಜಕಾರಣವನ್ನು ಆಯ್ಕೆ ಮಾಡುತ್ತಿರುವುದು ದೇಶದಲ್ಲಿ ನಡೆಯುತ್ತಿರುವ ದುರಂತ ಎಂದು ಪ್ರಕಾಶ್ ರೈ ಹೇಳಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.,
ಇನ್ನು ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟ ಎಂದು ಮತದಾನ ಮಾಡದೇ, ಜವಾಬ್ದಾರಿಯುತ ನಾಗರಿಕರಾಗಿ ಮತದಾನ ಮಾಡಬೇಕಿದೆ ಎಂದು ಹೇಳಿದ್ದಾರೆ, 
ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಯಾವುದೇ ಉದ್ದೇಶ ನನಗಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. 
SCROLL FOR NEXT