ಸ್ಯಾಂಡಲ್ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತೆ ಕಿರುತೆರೆಗೆ ಹಿಂತಿರುಗಿದ್ದಾರೆ. ಉದಯ ಸಿಂಗರ್ ಜೂನಿಯರ್ಸ್ ಮಕ್ಕಳ ಹಾಡಿನ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದಾರೆ.
ನಾಲ್ಕು ವರ್ಷಗಳ ಬಳಿಕ ಉದಯ ಟಿವಿಯಲ್ಲಿ ಮತ್ತೆ ಮಕ್ಕಳಿಗಾಗಿ ಹಾಡಿನ ರಿಯಾಲಿಟಿ ಶೋ ಆರಂಭವಾಗಲಿದೆ. 5 ರಿಂದ 13 ವರ್ಷದ 16 ಸ್ಪರ್ಧಿಗಳು ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ.
ನವೆಂಬರ್ 18ರಿಂದ ಉದಯ ಸಿಂಗರ್ ಜೂನಿಯರ್ಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ. ರಿಯಾಲಿಟಿ ಶೋಗೆ ರವಿಚಂದ್ರನ್ ಜತೆಗೆ ಖ್ಯಾತ ಗಾಯಕ ನಾಗೂರು ಬಾಬು ಅವರು ಸಹ ತೀರ್ಪುಗಾರರಾಗಿದ್ದು ನಾಗೂರು ಬಾಬು ಅವರು ಸರಿಸುಮಾರು 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ನಾಗೂರು ಬಾಬು ಅವರು ತೆಲುಗಿನಲ್ಲಿ ಹಲವು ಸಿಂಗರ್ಸ್ ರಿಯಾಲಿಟಿ ಶೋಗಳಿಗೆ ತೀರ್ಪುರಾಗರಾಗಿದ್ದರು. ಇನ್ನು ಉದಯ ಸಿಂಗರ್ ಜೂನಿಯರ್ಸ್ ಕಾರ್ಯಕ್ರಮದ ನಿರೂಪಣೆಯನ್ನು ಹಿನ್ನೆಲೆ ಗಾಯಕಿ ಸಂಗೀತಾ ರವೀಂದ್ರನಾಥ್ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics