ಸಿನಿಮಾ ಸುದ್ದಿ

'ನನ್ ಮಗಳೇ ಹೀರೋಯಿನ್' ನಲ್ಲಿ ನನ್ನ ಪಾತ್ರ ಸವಾಲಿನದಾಗಿತ್ತು: ಸಂಚಾರಿ ವಿಜಯ್

Raghavendra Adiga
ಬೆಂಗಳೂರು: "ರಾಷ್ಟ್ರ ಪ್ರಶಸ್ತಿ ಗೆಲ್ಲುವುದು ಎಂದರೆ ಅದೊಂದು ಅದೃಷ್ತ" 'ನಾನು ಅವನಲ್ಲ ಅವಳು' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದ ನಟ ಸಂಚಾರಿ ವಿಜಯ್ ಹೇಳಿದರು. 
ಆದರೆ ಇದರಿಂದ ಅವರಿಗೆ ಇನ್ನಷ್ಟು ಚಿತ್ರಗಳು ಕೈಗೆ ಬಂದಿದೆಯೆ? ಈ ಪ್ರಶ್ನೆಗೆ ಉತ್ತರಿಸಿದ ವಿಜಯ್ "ನೀವು ಎಣಿಸಿರುವಂತೆ ಇತರೆ ನಟರಿಗಿರುವಷ್ಟು ಆಯ್ಕೆಗಳು ಬಂದಿಲ್ಲ. ಆದರೆ ನಾನು ಪ್ರತಿ ಚಿತ್ರದಲ್ಲಿಯೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಬಯಸುತ್ತೇನೆ. ಅಂತಹಾಊಂದು ವಿಭಿನ್ನ ಪಾತ್ರ ಇರುವ ನನ್ನ ಚಿತ್ರ 'ನನ್ ಮಗಳೇ ಹೀರೀಯಿನ್' ಈ ಚಿತ್ರ ಬಿಡುಗಡೆಯಾದ ನಂತರ ನನಗೆ ಇನ್ನು ಹೆಚ್ಚು ಅವಕಾಶಗಳು ದೊರಯಲಿಕ್ಕಿದೆ ಎಂದು ನಾಣು ನಂಬುತ್ತೇನೆ. ನನ್ನ ಬಳಿ ಬರುವ ನಿರ್ದೇಶಕರೆಲ್ಲರೂ ಸದಭಿರುಚಿಯ, ವಿಶಿಷ್ಟ ಪಾತ್ರಗಳ ಕಥೆ ಇಟ್ಟುಕೊಂಡು ಬರುತ್ತಾರೆ.ಇದೀಗ ನಾನು ಸರಿಯಾದ ದಾರಿಯಲ್ಲೇ ಇದ್ದು ಇದೊಂದು 'ಟರಯ್ ಆಂಡ್ ಎರರ್' ವಿಧಾನವಾಗಿದೆ." ಅವರು ವಿವರಿಸಿದರು.
ಇದು ವಿಜಯ್ ಹಾಸ್ಯದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಾಗಿದೆ. 'ನನ್ ಮಗಳೇ ಹೀರೋಯಿನ್'ಚಿತ್ರವನ್ನು ಬಾಹುಬಲಿ ನಿರ್ದೇಶಿಸುತ್ತಿದ್ದು "ಚಿತ್ರ ಜಗತ್ತಿನಲ್ಲಿ ನಿರ್ದೇಶನದಷ್ಟು ಕಠಿಣವಾದ ಕೆಲಸ ಇನ್ನೊಂದಿರಲಾರದು. ಹಾಸ್ಯವು ವೀಕ್ಷಕರನ್ನು ಸೆಳೆಯುತ್ತದೆ. ನಾನು ವೀಕ್ಷಕರ ಮನಗೆಲ್ಲಲು ಬಯಸುತ್ತೇನೆ" ಎಂದು ಸಂಚಾರಿ ವಿಜಯ್ ಹೇಳಿದರು.
"ಇಂದಿನ ಜನರ ಟ್ರೆಂಡ್ ಬದಲಾಗಿದೆ. ಕಮರ್ಷಿಯಲ್ ವಿಷಯಗಳ ಹೊರತಾಗಿಯೂ ಇಂದು ಉತ್ತಮ ಚಿತ್ರಕಥೆ ಹೊಂದಿದ ಚಿತ್ರವೊಂದು ಯಶಸ್ವಿಯಾಗುತ್ತದೆ" ಎಂದು ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ.
SCROLL FOR NEXT