ಲತಾ ಹೆಗಡೆ 
ಸಿನಿಮಾ ಸುದ್ದಿ

ನಾನು ನಟಿಯಾಗಬೇಕೆಂದು ಬಯಸಿರಲಿಲ್ಲ, ಈಗ ಬೇರೆ ಯಾವುದೂ ಬೇಡ: ಲತಾ ಹೆಗಡೆ

ಆಕ್ಲೆಂಡ್ ಮೂಲದವರಾದ ಲತಾ ಹೆಗಡೆ ಸ್ಯಾಂಡಲ್ ವುಡ್ ಬಂದಿರುವ ನವತಾರೆ. ಇದೇ ನ.24ರಂದು ಅವರ ನಟನೆಯ ಮೊದಲ ಕನ್ನಡ ಸಿನಿಮಾ 'ಅತಿರಥ' ಬಿಡುಗಡೆಯಾಗುತ್ತಿದ್ದು...

ಬೆಂಗಳೂರು: ಆಕ್ಲೆಂಡ್ ಮೂಲದವರಾದ ಲತಾ ಹೆಗಡೆ ಸ್ಯಾಂಡಲ್ ವುಡ್ ಬಂದಿರುವ ನವತಾರೆ. ಇದೇ ನ.24ರಂದು ಅವರ ನಟನೆಯ ಮೊದಲ ಕನ್ನಡ ಸಿನಿಮಾ 'ಅತಿರಥ' ಬಿಡುಗಡೆಯಾಗುತ್ತಿದ್ದು ಅದಕ್ಕಾಗಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಮಹೇಶ್ ಬಾಬುನಿರ್ದೇಶನದ ಈ ಚಿತ್ರದಲ್ಲಿ  ಚೇತನ್ ಣಾಯಕನಟನಾಗಿ ಅಭಿನಯಿಸಿದ್ಡಾರೆ.
ಆದರೆ ಈ ನಟಿ ನಟನೆಗೆ ಹೊಸಬರಲ್ಲ. ಇವರಾಗಲೇ ತೆಲುಗು ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಅವರ ನಟನೆಯ ತಮಿಳು ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ. ಆದರೆ ಕನ್ನಡ ಚಿತ್ರದಲ್ಲಿನ ಅಭಿನಯ ಇವರಿಗೆ ವಿಶೇಷವಾದದ್ದಾಗಿದೆ. ಇವರ ಮಾತೃಭಾಷೆ ಸಹ ಕನ್ನಡವಾಗಿದ್ದು ನಟಿ 'ಅತಿರಥ' ಚಿತ್ರದಲ್ಲಿಆಭಿನಯಿಸಿದ ಅನುಭವವನ್ನು ಎಕ್ಸ್ ಪ್ರೆಸ್ ನೊಡನೆ ಹಂಚಿಕೊಂಡಿದ್ದಾರೆ.
"ಅತಿರಥ ನನ್ನ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಆಗಿದೆ" ಎನ್ನುವ ಲತಾ "ಬೆಂಗಳೂರು ನನ್ನ ಮನೆ ಎನಿಸಿದೆ. ದೂರದ ನ್ಯೂಜಿಲ್ಯಾಂಡಿನಲ್ಲಿನ ಪರಿಸರಕ್ಕೂ, ಬೆಂಗಳೂರಿನ ಪರಿಸರಕ್ಕೂ ಹೆಚ್ಚೇನೂ ಬದಲಾವಣೆ ಇಲ್ಲ. ಇನ್ನ್ ಉ ಅತಿರಥ ನನ್ನ ಪಾಲಿಗೆ ಬಹಳ ವಿಶೇಷವಾದ ಚಿತ್ರ. ನನಗೆ ಅದರಲ್ಲಿ ಡಬ್ ಮಾಡುವ ಅವ್ಕಾಶವೂ ದೊರಕಿತ್ತು,
"ನೀವು ನಾನು ನಟಿಯಾಗಬೇಕೆಂದು ಬಂದಿದ್ದೇನೆ ಎಂದುಕೊಳ್ಳಬಹುದು, ಆದರೆ ನಾನೆಂದೂ ನಟಿಯಾಗಬೇಕೆಂದು ಬಯಸಲಿಲ್ಲ. ಯಾವುದಾದರೂ ಅರ್ಥಪೂರ್ಣ ಕೆಲಸದಲ್ಲಿ ಭಾಗಿಯಾಗಬೇಕು ಎನ್ನುವುದು ನನ್ನ ಹಂಬಲವಾಗಿತ್ತು.ನಾನು ಪ್ರಾಣಿಗಳ ಕಲ್ಯಾಣ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂದುಕೊಡಿದ್ದೆ. ಸಮಯ ಕಳೆಯುವ ಸಲುವಾಗಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಆಗ ನಾಣು ಚಿತ್ರರಂಗದ ವ್ಯಕ್ತಿಅಗಳ ಗಮನಕ್ಕೆ ಬಂದೆನು. ನಾನು ಚಿತ್ರರಂಗದಲ್ಲೇ ಮುಂದುವರ್ತಿಯುತ್ತೇನೋ ಎನ್ನುವುದು ನನಗೆ ತಿಳಿದಿಲ್ಲ. ಆದರೆ ಇಲ್ಲಿ ನನಗೆ ಸಾಕಷ್ಟು ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ. ಹಾಗೆಯೇ ಇದೀಗ ನಟನೆ ನನ್ನ ವೃತ್ತಿಯಾಗಿದೆ. ನಾನು ಇದನ್ನು ಇಷ್ಟ ಪಡುತ್ತೇನೆ."
ಸ್ಯಾಂಡಲ್ ವುಡ್ ಗೆ ಹೊಸ ಪರಿಚಯವಾದ ಈ ನಟಿ "ಕನ್ನಡ ಸೇರಿ ಭಾರತೀಯ ಭಾಷೆಗಳಲ್ಲಿ ಚಿತ್ರದ ಶೂಟಿಂಗ್ ಸಮಯಕ್ಕೆ ಸರಿಯಾಗಿ ಮುಗಿಯುವುದಿಲ್ಲ. ನಾನು ನ್ಯೂಜಿಲ್ಯಾಂಡಿನಲ್ಲಿ ಬೆಳೆದ ಕಾರಣ ಅಲ್ಲಿನ ಜನರು ಸಮಯ ಪಾಲನೆ ವಿಚಾರದಲ್ಲಿ ಅನುಸರಿಸುವ ಶಿಸ್ತನ್ನು ನೊಡಿದ್ದೆ. ಇದರಿಂದಾಗಿ ನನಗೆ ಇಲ್ಲಿನವರ ಸಮಯದ ಕುರಿತ ಅಸಡ್ಡೆ ಅತೀವ ಕಿರಿಕಿರಿಯನ್ನುಂಟು ಮಾಡಿತ್ತು"ಎನ್ನುತ್ತಾರೆ.
ಇದೇ ವೇಳೆ ಲತಾ ಅವರು ಕನ್ನಡದ ಇನ್ನೊಂದು ಚಿತ್ರ ‘ಅನಂತು ವರ್ಸಸ್‌ ನುಸ್ರತ್‌’ ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ವಿನಯ್ ರಾಜ್ ಕುಮಾರ್ ನಾಯಕ ನಟನಾಗಿರುವ ಈ ಚಿತ್ರವನ್ನು ಸುಧೀರ್ ನಿರ್ದೇಶಿಸುತ್ತಿದ್ದಾರೆ. "ನನ್ನ ತಾಯಿಯ ಅನಾರೋಗ್ಯದ ಕಾರಣ ನಾನೀಗ ನ್ಯೂಜಿಲ್ಯಂಡಿಗೆ ಮರಳಿದ್ದು ಇನ್ನು ಕೆಲವು ದಿನಗಳಲ್ಲಿ ಬೆಂಗಳುರಿಗೆ ಬರಲಿದ್ದೇನೆ. ನಿರ್ದೇಶಕರು ನನ್ನ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುತ್ತಾರೆ ಎನ್ನುವ ಭರವಸೆ ಇದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT