ಹರಿ ಸಂತೋಶ್ ನಿರ್ದೇಶನದ ಕಾಲೇಜ್ ಕುಮಾರ್ ಚಿತ್ರವನ್ನು ಕಾಲಿವುಡ್ ನ ನಿರ್ದೇಶಕರು ಹಾಗೂ ತಂತ್ರಜ್ಞರು ವೀಕ್ಷಿಸಿದ್ದು, ಕನ್ನಡದ ಚಿತ್ರ ತಮಿಳಿಗೆ ರಿಮೇಕ್ ಆಗುವ ಸಾಧ್ಯತೆ ಇದೆ.
ಚಿತ್ರ ತಂಡ ತಮಿಳುನಾಡಿನಲ್ಲಿ ವಿಶೇಷ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿತ್ತು. ವಿಶೇಷ ಸ್ಕ್ರೀನಿಂಗ್ ನಲ್ಲಿ ಕಾಲೇಜ್ ಕುಮಾರ್ ಚಿತ್ರವನ್ನು ಪಿಎ ರಂಜಿತ್ ವೆಂಕಟ್ ಪ್ರಭು, ರಾಜೇಶ್, ನಿರ್ದೇಶಕ ಎಸ್ಎಸ್ ಕುಮಾರನ್, ನಾಗರಾಜ್, ಡಿಒಪಿ ಶಕ್ತಿ ಸರವಣನ್, ಸಂಗೀತ ನಿರ್ದೇಶಕ ಜಸ್ಟಿನ್ ಪ್ರಭಾಕರನ್, ನಟ ಕಲೈಅರಸನ್, ಸಂಕಲನಕಾರರಾದ ಸೆಲ್ವ ಕಿಶೋರ್, ಗೀತ ರಚನೆಗಾರ ವಿವೇಕ್ ಹಾಗೂ ನಿರ್ಮಾಪಕ ಟಿ ಶಿವ ಸೇರಿದಂತೆ ತಮಿಳು ಸಿನಿಮಾ ಇಂಡಸ್ಟ್ರಿಯ ನಿರ್ದೇಶಕರು ಹಾಗೂ ತಂತ್ರಜ್ಞರು ವೀಕ್ಷಿಸಿದ್ದಾರೆ.
ಕಾಲೇಜ್ ಕುಮಾರ್ ಕಾನ್ಸೆಪ್ಟ್ ನ್ನು ಇಷ್ಟಪಟ್ಟಿರುವ ತಮಿಳು ಚಿತ್ರರಂಗದ ನಿರ್ದೇಶಕರು, ತಂತ್ರಜ್ಞರು ಮೆಚ್ಚಿದ್ದು, ಚಿತ್ರದ ಹಕ್ಕುಗಳನ್ನು ಖರೀದಿಸುವ ಬಗ್ಗೆ ಶೀಘ್ರವೇ ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.