ಸಿನಿಮಾ ಸುದ್ದಿ

'ಕೆಂಡಸಂಪಿಗೆ' ದಿನಗಳಿಗೆ ಮರಳಿದ ಸೂರಿ!

Raghavendra Adiga
ಬೆಂಗಳೂರು: ನಿರ್ದೇಶಕ ಸೂರಿ ಅವರ ಮುಂದಿನ ಚಿತ್ರ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಇದೀಗ ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಇದರ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ನಿರ್ದೇಶಕರು ತೀರ್ಮಾನಿಸಿದ್ದು ಚಿತ್ರವು 2018ರ ಪ್ರಾರಂಭದಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. 
'ಟಗರು' ನಂತರ ನಿರ್ದೇಶಕರ ಯೋಜನೆ ಏನು? ಎಂದಾಗ "ನಾನು ಪುನಃ 'ಕಾಗೆ ಬಂಗಾರ'ದ ಕಥೆಯನ್ನು ಮುಂದುವರಿಸುತ್ತೇನೆ. ಇದು 2015ರಲ್ಲಿ ಬಿಡುಗಡೆಯಾಗಿ ವಿಮರ್ಶಕರ ಮೆಚ್ಚುಗೆ  ಗೈಸಿದ 'ಕೆಂಡಸಂಪಿಗೆ' ಚಿತ್ರದ ಪಾತ್ರದ ಕಥೆ.
ಪ್ರಶಾಂತ್ ಸಿದ್ದಿ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ಕಥೆ ಮೂವರು ಮೂರ್ಖರ ನಡುವೆ ಸುತ್ತುತ್ತದೆ. ಇದೀಗ ಪಾತ್ರ ಚಿತ್ರಣದ ಕುರಿತು ಕೆಲಸ ಮಾಡುತ್ತಿರುವ ಸೂರಿ  "ನಾನು ಮತ್ತೆ ಪ್ರಾಯೋಗಿಕ ಚಿತ್ರ ಮಾಡಲು ಬಯಸುತ್ತೇನೆ, ಇದು ನನ್ನ ಬದ್ದತೆಯಾಗಿದೆ. 'ಕಾಗೆ ಬಂಗಾರ' ಒಂದು ವಾಣಿಜ್ಯ ಉದ್ದೇಶಿತ ಚಿತ್ರವಾಗಿದ್ದು, ಹಲವು ಪ್ರಸಿದ್ಧ ನಟರೊಡನೆಯೇ ಹೊಸ ಮುಖಗಳನ್ನೂ ಹೊಂದಿದೆ. ಚಿತ್ರದ ಕಥೆ 'ಕೆಂಡಸಂಪಿಗೆ'ಯ ಛಾಯೆ ಹೊಂದಿದ್ದು ಕೂಡ ವಿಭಿನ್ನವಾಗಿ ಮೂಡಿ ಬರಲಿದೆ. ಇದು ಡ್ರಾಮಾವಾಗಿದ್ದೂ ಸಹ ಸಮಕಾಲೀನ ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಲಿದೆ" 
ಸೂರಿ ಪರಿಮಳ ಫಿಲ್ಮ್ ಫ್ಯಾಕ್ಟರಿ ಹೆಸರಿನ ತಮ್ಮ ಸ್ವಂತ ಬ್ಯಾನರ್ ನಲ್ಲಿ ಸೂರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. 2018, ಫೆಬ್ರವರಿಯಲ್ಲಿ ಕೆಲಸ ಪ್ರಾರಂಭಿಸಲು ಅವರು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಚೇತನ್ ರಾಜ್ ಸಂಗೀತ ನೀಡುತ್ತಾರೆಂದು ಹೇಳಿರುವ ಸೂರಿ ಉಳಿದಂತೆ ಪಾತ್ರಗಳು ಹಾಗೂ ತಂತ್ರಜ್ಞರನ್ನು ಆಯ್ಕೆ ಮಾಡಬೇಕಿದೆ ಎಂದರು.
SCROLL FOR NEXT