ನಟ ಚೇತನ್ 
ಸಿನಿಮಾ ಸುದ್ದಿ

ನಟನೆ ಮತ್ತು ಸಾಮಾಜಿಕ ಕಾರ್ಯಗಳು ಎರಡೂ ಪರಸ್ಪರ ಪೂರಕವಾಗಿರಬೇಕು: ನಟ ಚೇತನ್

ಚೇತನ್ ಕನ್ನಡ ಚಿತ್ರರಂಗದ ಅಪರೂಪದ ನಟರಲ್ಲಿ ಒಬ್ಬರು. ನಟನೆ ಮತ್ತು ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಒಟ್ಟಿಗೇ ತೊಡಗಿಸಿಕೊಂಡಿರುವ ಇವರ ಜತೆ ಎಕ್ಸ್ ಪ್ರೆಸ್ ........

ಬೆಂಗಳುರು: ಚೇತನ್ ಕನ್ನಡ ಚಿತ್ರರಂಗದ ಅಪರೂಪದ ನಟರಲ್ಲಿ ಒಬ್ಬರು. ನಟನೆ ಮತ್ತು ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಒಟ್ಟಿಗೇ ತೊಡಗಿಸಿಕೊಂಡಿರುವ ಇವರ ಜತೆ ಎಕ್ಸ್ ಪ್ರೆಸ್ ಮಾತನಾಡಿದಾಗ ತಮ್ಮ ಚಿತ್ರ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
"ನಾನು ನಟನೆಯಷ್ಟೇ ಸಾಮಾಜಿಕ ಕಾರ್ಯಗಳಿಗೂ ಮಹತ್ವ ಕೊಡುತ್ತೇನೆ. ನಾನು ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಬೀದಿ ನಾಟಗಳನ್ನು ನಿರ್ವಹಿಸುತ್ತಿದ್ದೆ. ಅದರಲ್ಲಿ ಮಹಿಳಾ ಸಬಲೀಕರಣ ಸೇರಿದಂತೆ ಹಲವಾರು ಸಾಮಾಜಿಕ ಮಹತ್ವದ ವಿಚಾರಗಳನ್ನು ಬಿಂಬಿಸುವ ಪ್ರಸಂಗಗಳಿದ್ದವು. ಈಗಲೂ ನಾನು ಸಾಮಾಜಿಕ ಕಾರ್ಯಗಳು, ನಟನೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಬಯಸುತ್ತೇನೆ" ಚೇತನ್ ಹೇಳಿದರು.
"ಪ್ರತಿಯೊಬ್ಬರೂ ಸಿನಿಮಾ ಎಂದರೆ ಅದರ ಕಲೆಕ್ಷನ್ ವಿಚಾರವಾಗಿಯೇ ಮಹತ್ವ ನೀಡುತ್ತಾರೆ .ಆದರೆ ನನಗೆ ಸಿನೆಮಾ ಅದಕ್ಕಿಂತ ಹೆಚ್ಚಿನದಾಗಿದೆ. ಸಿನೆಮಾ ಮತ್ತು ಸಾಮಾಜಿಕ ಜವಾಬ್ದಾರಿ ಎರಡೂ ಸಹ ಪರಸ್ಪರ ಪೂರಕವಾಗಿರಬೇಕು. ಚಿತ್ರರಂಗವು ಸಮಾಜದಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ," ಚೇತನ್ ಅವರ ಮುಂಬರುವ ಚಿತ್ರ 'ಅತಿರಥ' ದಲ್ಲಿ ಅವರು ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. "ನಾನು ಮಾಧ್ಯಮ ಮತ್ತು ಪತ್ರಿಕೋದ್ಯಮವನ್ನು ಬಹಳ ಗೌರವಿಸುತ್ತೇನೆ. ಅನೇಕ ವಿಧಗಳಲ್ಲಿ ಅವರು ನಮ್ಮೆಲ್ಲರಿಗೂ ಶಿಕ್ಷಕರಂತಿದ್ದಾರೆ. ಏಕೆಂದರೆ ಅವರು ಹಲವಾರು ವಿಷಯಗಳ ಬಗ್ಗೆ ನಮಗೆ ತಿಳಿಸಿ ಕೊಡುತ್ತಾರೆ. ಮಾಧ್ಯಮವು ಯುವಕರ ಜೀವನವನ್ನು, ಮನಸ್ಸನ್ನು ಪ್ರಭಾವಿಸುತ್ತದೆ. ನಾನು 'ಅತಿರಥ' ಚಿತ್ರದಲ್ಲಿ ಟಿವಿ ಆಂಕರ್ ಪಾತ್ರ ಮಾಡುತ್ತಿದ್ದೇನೆ."
ಮಹೇಶ್ ಬಾಬು ನಿರ್ದೇಶನದ 'ಅತಿರಥ' ಚಿತ್ರ ಈ ವಾರ ತೆರೆ ಕಾಣುತ್ತಿದ್ದು ಚೇತನ್ ಜತೆಗೆ ಲತಾ ಹೆಗಡೆ  ನಾಯಕಿಯಾಗಿ ಕಾಣಿಸಲಿದ್ದಾರೆ. ಚಿತ್ರವು ಸ್ಯಾಂಡಲ್ ವುಡ್ ನಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT