ರಾಣಾ ದಗ್ಗುಬಾಟಿ 
ಸಿನಿಮಾ ಸುದ್ದಿ

ಎಎಂಆರ್ ರಮೇಶ್ ನಿರ್ದೇಶನದ 'ಆಸ್ಫೋಟ' ವೆಬ್ ಸಿರೀಸ್‌ನಲ್ಲಿ ರಾಣಾ ದಗ್ಗುಬಾಟಿ?

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಕುರಿತಾದ ಎಎಂಆರ್ ರಮೇಶ್ ನಿರ್ದೇಶನದ ಆಸ್ಫೋಟ ವೆಬ್ ಸಿರೀಸ್ ನಲ್ಲಿ ಟಾಲಿವುಡ್ ನ ಖ್ಯಾತ ನಟ ರಾಣಾ ದಗ್ಗುಬಾಟಿ...

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಕುರಿತಾದ ಎಎಂಆರ್ ರಮೇಶ್ ನಿರ್ದೇಶನದ ಆಸ್ಫೋಟ ವೆಬ್ ಸಿರೀಸ್ ನಲ್ಲಿ ಟಾಲಿವುಡ್ ನ ಖ್ಯಾತ ನಟ ರಾಣಾ ದಗ್ಗುಬಾಟಿ ಅಭಿನಯಿಸುತ್ತಿದ್ದಾರೆ. 
ಈ ಹಿಂದೆ ರಾಣಾ ದಗ್ಗುಬಾಟಿ ಅವರು ಎಎಂಆರ್ ರಮೇಶ್ ಜತೆ ಸಿನಿಮಾ ಅಥವಾ ಮಿನಿ ಸಿರೀಸ್ ಮಾಡುವುದಾಗಿ ಹೇಳಿದ್ದರು. ಇದೀಗ ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಆಸ್ಫೋಟವನ್ನು ವೆಬ್ ಸಿರೀಸ್ ನಲ್ಲಿ ತೆಗೆಯಲು ತೀರ್ಮಾನಿಸಿದ್ದಾರೆ. 
ರಾಣಾ ದಗ್ಗುಬಾಟಿ ಚಿತ್ರವನ್ನು ನಿರ್ದೇಶಿಸುವುದಾಗಿ ನಿರ್ದೇಶಕ ರಮೇಶ್ ಅವರು ಇನ್ನಷ್ಟೇ ಘೋಷಿಸಬೇಕಿದೆ. ಆದರೆ ಬಲ್ಲ ಮೂಲಗಳ ಪ್ರಕಾರ ರಾಣಾ ಅವರು ರಮೇಶ್ ಜತೆ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ತಿಳಿದುಬಂದಿದೆ. ವಿಜೇತ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ನೆಟ್ ಫ್ಲಿಕ್ಸ್ ಜತೆ ಒಪ್ಪಂದ ಮಾಡಿಕೊಂಡು ವೆಬ್ ಸಿರೀಸ್ ತಯಾರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 
ಆಸ್ಫೋಟ ವೆಬ್ ಸಿರೀಸ್ ನಲ್ಲಿ ತಯಾರಿಯಾದರೆ ತಮಿಳು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ತಯಾರಾಗಲಿವೆ. ವೆಬ್ ಸಿರೀಸ್ ಗೆ ಆಸ್ಫೋಟದ ಶೀರ್ಷಿಕೆಯನ್ನು ಇಡುವ ಬದಲು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುವಂತಾ ಶೀರ್ಷಿಕೆ ಇಡಬಹುದು. ಸದ್ಯ ರಮೇಶ್ ಅವರು ಚಿತ್ರಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ತೆಲುಗು ನಟ ವೆಂಕಟೇಶ್ ಅವರು ಕಾರ್ತಿಕೇಯನ್ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ ಆದರೆ ಇನ್ನು ದೃಢವಾಗಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel