ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಐಎಫ್ಎಫ್ ಐನಲ್ಲಿ 'ಎಸ್ ದುರ್ಗಾ'ಗೆ ಸಿಗಲಿಲ್ಲ ಪ್ರದರ್ಶನ ಭಾಗ್ಯ, Xsಗೆ ಸೆನ್ಸಾರ್ ಮಂಡಳಿ ಆಕ್ಷೇಪ

ಕೇರಳ ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಗೋವಾದಲ್ಲಿ ಇಂದು ತೆರೆಕಂಡ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ...

ಪಣಜಿ: ಕೇರಳ ಹೈಕೋರ್ಟ್ ಆದೇಶವನ್ನೂ ಧಿಕ್ಕರಿಸಿ ಗೋವಾದಲ್ಲಿ ಇಂದು ತೆರೆಕಂಡ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್‌ಎಫ್‌ಐ)ದಲ್ಲಿ ಮಲಯಾಳಂನ ವಿವಾದಾತ್ಮಕ ಚಿತ್ರ 'ಎಸ್‌ ದುರ್ಗಾ' (ಸೆಕ್ಸಿ ದುರ್ಗಾ) ಪ್ರದರ್ಶಿಸಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ(ಸಿಬಿಎಫ್ ಸಿ) ಅನುಮತಿ ನೀಡಿಲ್ಲ. 
ಸನಲ್ ಕುಮಾರ್ ಸಸಿಧರನ್ ನಿರ್ದೇಶನ ಎಸ್ ದುರ್ಗಾ ಚಿತ್ರವನ್ನು ಮರು ಪರಿಶೀಲಿಸುವಂತೆ ಸಿಬಿಎಫ್ ಸಿ ಆದೇಶಿಸಿದೆ. ಅಲ್ಲದೆ ಮುಂದಿನ ನೋಟಿಸ್ ವರೆಗೆ ಚಿತ್ರ ಪ್ರದರ್ಶಿಸದಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ. 
ಎಸ್ ದುರ್ಗಾ ಚಿತ್ರದ ನಿರ್ಮಾಪಕರು ನಿಯಮಗಳನ್ನು ಉಲ್ಲಂಘಿಸಿದ್ದು, ಚಿತ್ರದ ಅವನ ಬದಲಾದ ಶೀರ್ಷಿಕೆಯಲ್ಲಿ ಬಳಸಿದ 'ಬಾಕ್ಸ್ ಗಳಿಂದ' ಬೇರೆ ಬೇರೆ ಪರಿಣಾಮ ಬೀರುತ್ತದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ.
ಸೆನ್ಸಾರ್ ಮಂಡಳಿ ನಿರ್ದೇಶನದಂತೆ ಚಿತ್ರದ ಮೂಲ ಟೈಟಲ್ ಸೆಕ್ಸಿ ದುರ್ಗಾದಿಂದ ಎಸ್ ದುರ್ಗಾ ಎಂದು ಬದಲಾಯಿಸಿದ್ದರೂ, ಬದಲಾದ ಟೈಟಲ್ ನಲ್ಲಿರುವ ಎಕ್ಸ್ ಎಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಗೋವಾ ಚಿತ್ರೋತ್ಸವದಿಂದ 'ಎಸ್ ದುರ್ಗಾ'(ಸೆಕ್ಸಿ ದುರ್ಗಾ) ಚಿತ್ರವನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿ ನಿರ್ದೇಶಕ ಸನಲ್ ಕುಮಾರ್ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಐಎಫ್‌ಎಫ್‌ಐ ಅಧಿಕಾರಿಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಈ ಹಿಂದೆ ದೂರು ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಚಿತ್ರವನ್ನು ಐಎಫ್‌ಎಫ್‌ಐನಲ್ಲಿ ಪ್ರದರ್ಶಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿತ್ತು. ಚಿತ್ರೋತ್ಸವದ ಕೊನೆಯ ದಿನವಾದ ಇಂದು ಚಿತ್ರ ಪ್ರದರ್ಶನ ನಿಗದಿಯಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ಐಎಫ್ಎಫ್ ಕೆ ನಲ್ಲಿ 'ಎಸ್ ದುರ್ಗಾ'ಗೆ ಪ್ರದರ್ಶನ ಭಾಗ್ಯ
ಐಎಫ್ಎಫ್ ಐನಲ್ಲಿ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾರ್ಥವಾಗಿ ಮುಂಬರುವ ಕೇರಳ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ(ಐಎಫ್ಎಫ್ ಕೆ)ದಲ್ಲಿ 'ಎಸ್ ದುರ್ಗಾ' ಪ್ರದರ್ಶಿಸಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT