ವೇದಿಕಾ 
ಸಿನಿಮಾ ಸುದ್ದಿ

ನನ್ನ ಸ್ವಭಾವಕ್ಕೆ ತಕ್ಕಂತೆ ಚಿತ್ರತಂಡ ನೋಡಿಕೊಂಡು ಸಿನಿಮಾ ಆಯ್ಕೆ ಮಾಡುತ್ತೇನೆ: ವೇದಿಕಾ

ಚಿತ್ರವೊಂದರಲ್ಲಿ ಕೆಲಸ ಮಾಡುವವರನ್ನು ಅವಲಂಬಿಸಿಕೊಂಡು ಆ ಚಿತ್ರದ ಸೋಲು, ಗೆಲುವು ನಿರ್ಧಾರವಾಗುತ್ತದೆ....

ಚಿತ್ರವೊಂದರಲ್ಲಿ ಕೆಲಸ ಮಾಡುವವರನ್ನು ಅವಲಂಬಿಸಿಕೊಂಡು ಆ ಚಿತ್ರದ ಸೋಲು, ಗೆಲುವು ನಿರ್ಧಾರವಾಗುತ್ತದೆ ಎಂದು ವೇದಿಕಾ ಹೇಳುತ್ತಾರೆ. ಹೀಗಾಗಿ ತಾವು ಚಿತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಅದರಲ್ಲಿ ಯಾರ್ಯಾರು ಇದ್ದಾರೆ ಎಂದು ನೋಡುತ್ತಾರಂತೆ. ಚಿತ್ರತಂಡವನ್ನು ನೋಡಿಕೊಂಡು ಗೌಡ್ರು ಹೊಟೇಲ್ ಸಿನಿಮಾವನ್ನು ಒಪ್ಪಿಕೊಂಡೆ ಎನ್ನುತ್ತಾರೆ.
ನಾಳೆ ಬಿಡುಗಡೆಯಾಗುತ್ತಿರುವ ಗೌಡ್ರು ಹೊಟೇಲ್ ಸಿನಿಮಾ ಮಲಯಾಳಂನ ಉಸ್ತಾದ್ ಹೊಟೇಲ್ ಸಿನಿಮಾದ ರಿಮೇಕ್. ನಾನು ನನ್ನ ಸ್ವಭಾವಕ್ಕನುಗುಣವಾಗಿ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ, ಗೌಡ್ರು ಹೊಟೇಲ್ ಸಿನಿಮಾದ ತಂಡ ಚೆನ್ನಾಗಿದೆ. ಪ್ರಕಾಶ್ ರೈ, ಅನಂತ್ ನಾಗ್ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಯುವನ್ ಶಂಕರ್ ರಾಜ್ ಅವರ ಸಂಗೀತ, ಪೊನ್ ಕುಮಾರ್ ಅವರ ನಿರ್ದೇಶನವಿದೆ. 
ಚಿತ್ರ ರಿಮೇಕ್ ಎಂಬುದು ದೊಡ್ಡ ವಿಷಯವಲ್ಲ ಎಂದು ಹೇಳುವ ವೇದಿಕಾಗೆ ಚಿತ್ರ ತಯಾರಿಸುವುದರ ಬಗ್ಗೆ ಕಲಿತುಕೊಳ್ಳಲು ಆಸಕ್ತಿಯಂತೆ. ಚಿತ್ರತಂಡ ಉತ್ತಮವಾಗಿದ್ದರೆ ಖಂಡಿತಾ ಉತ್ತಮ ಚಿತ್ರ ಮೂಡಿ ಬರುತ್ತದೆ, ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು ಎನ್ನುತ್ತಾರೆ ವೇದಿಕಾ.
ಮೂಲ ಚಿತ್ರದ ಯಥಾವತ್ತು ಇಲ್ಲಿಲ್ಲವಂತೆ. ಚಿತ್ರದಲ್ಲಿ ನಿರ್ದೇಶಕರು ಹಲವು ಬದಲಾವಣೆಗಳನ್ನು ಮಾಡಿದ್ದಾರಂತೆ. ಕರ್ನಾಟಕದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರದಲ್ಲಿ ಬದಲಾವಣೆ ಮಾಡಿದ್ದಾರೆ. ಗೌಡ್ರು ಹೊಟೇಲ್ ಎಂಬ ಶೀರ್ಷಿಕೆಯೇ ಕನ್ನಡದ್ದು ಎಂದು ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಹೊಸ ಚಿತ್ರದಂತೆ ಮೂಡಿಬಂದಿದೆ. ಆಹಾರದ ಸುತ್ತ ಹೆಣೆದಿರುವ ಚಿತ್ರವಿದು. ಹಾಸ್ಯ ಪ್ರಧಾನವಾಗಿ ಚಿತ್ರ ಬಂದಿದೆ ಎಂದು ಚಿತ್ರದ ಬಗ್ಗೆ ವೇದಿಕಾ ವಿವರಿಸುತ್ತಾರೆ.
ಗೌಡ್ರು ಹೊಟೇಲ್ ನಲ್ಲಿ ರಾಗಿ ಮುದ್ದೆ ಪ್ರಧಾನ ಆಹಾರ. ಅದನ್ನು ಮಾಡಲು ನಾನು ಪ್ರಯತ್ನಿಸಿದೆ.ಅದನ್ನು ಚಿತ್ರದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ರಾಗಿ ಮುದ್ದೆ ಮಾಡುವ ಬಗ್ಗೆ ಕೂಡ ಚಿತ್ರದಲ್ಲಿ ವಿವರಿಸಲಾಗಿದೆಯಂತೆ ಎನ್ನುವ ವೇದಿಕಾ ತಮ್ಮ ಮುಂದಿನ ತಮಿಳು ಚಿತ್ರದಲ್ಲಿ, ನಂತರ ಮತ್ತೊಂದು ಕನ್ನಡ ಚಿತ್ರ ಉಪೇಂದ್ರ ಜೊತೆಗೆ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: 56 ಸಾವಿರ ಹುದ್ದೆ ನೇಮಕಕ್ಕೆ ಸಚಿವ ಸಂಪುಟ ಅಸ್ತು

ದಲಿತ ಸಚಿವರ ನಿಯೋಗ ಭೇಟಿ ಬೆನ್ನಲ್ಲೇ SC ಒಳ ಮೀಸಲಾತಿ ಮಸೂದೆಗೆ ರಾಜ್ಯಪಾಲರ ಅಂಕಿತ

T20 World Cup 2026: ಅಭಿಷೇಕ್, ಹಾರ್ದಿಕ್ ಅಬ್ಬರ; ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಭರ್ಜರಿ ಗೆಲುವು

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

SCROLL FOR NEXT