ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ 
ಸಿನಿಮಾ ಸುದ್ದಿ

ಕಂಗನಾ-ಹೃತಿಕ್ ಕಾನೂನು ಸಮರ: ಶೀಘ್ರದಲ್ಲೇ ಸತ್ಯ ಬಹಿರಂಗಗೊಳ್ಳಲಿದೆ- ಮೌನ ಮುರಿದ ರಾಕೇಶ್ ರೋಷನ್

ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ ನಡುವಿನ ಕಾನೂನು ಸಮರ ಕುರಿತಂತೆ ಇಷ್ಟು ದಿನ ಮೌನ ತಾಳಿದ್ದ ಹೃತಿಕ್ ತಂದೆ ರಾಕೇಶ್ ರೋಷನ್ ಅವರು, ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಶೀಘ್ರದಲ್ಲಿಯೇ ಸತ್ಯ ಬಹಿರಂಗಗೊಳ್ಳಲಿದೆ...

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಹಾಗೂ ಹೃತಿಕ್ ರೋಷನ್ ನಡುವಿನ ಕಾನೂನು ಸಮರ ಕುರಿತಂತೆ ಇಷ್ಟು ದಿನ ಮೌನ ತಾಳಿದ್ದ ಹೃತಿಕ್ ತಂದೆ ರಾಕೇಶ್ ರೋಷನ್ ಅವರು, ಕೊನೆಗೂ ತಮ್ಮ ಮೌನವನ್ನು ಮುರಿದಿದ್ದು, ಶೀಘ್ರದಲ್ಲಿಯೇ ಸತ್ಯ ಬಹಿರಂಗಗೊಳ್ಳಲಿದೆ ಎಂದು ಬುಧವಾರ ಹೇಳಿದ್ದಾರೆ. 
ಸುಖಾಸುಮ್ಮನೆ ಮಾತನಾಡಿರುವ ವ್ಯಕ್ತಿಗಳು ನಾವಲ್ಲ. ಸಾಬೀತು ಪಡಿಸದೆಯೇ ಆರೋಪಗಳನ್ನು ಮಾಡುವುದರ ಮೇಲೆ ನಮಗೆ ನಂಬಿಕೆಯಿಲ್ಲ. ನಮ್ಮ ಬಳಿಯಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದ್ದೇನೆ. ನಾವು ನೀಡಿರುವ ದೂರಿನ ಪ್ರತಿ ಬೇಕಿದ್ದರೆ, ನಮ್ಮ ಪರ ವಾದ ಮಂಡಿಸುತ್ತಿರುವ ವಕೀಲ ಮಹೇಶ್ ಜೇಠ್ಮಲಾನಿಯವರ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದ್ದಾರೆ. 
ಹೃತಿಕ್ ನೀಡಿರುವ ದೂರಿನ ಪ್ರತಿಯನ್ನು ಓದಿದರೆ ಅದರಲ್ಲಿರುವ ಸತ್ಯಾಗಳನ್ನು ನೋಡಿದರೆ ನಿಜಕ್ಕೂ ಆಘಾತವಾಗುತ್ತದೆ. ನಮ್ಮ ಬಳಿಯಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು 2017 ಏ.8 ರಂದು ಸೈಬರ್ ಕ್ರೈಂ ಅಧಿಕಾರಿಗಳಿಗೆ ನೀಡಿದ್ದೇವೆ. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಅಧಿಕಾರಿಗಳೇ ಸತ್ಯ ಏನೆಂಬುದನ್ನು ಬಹಿರಂಗಪಡಿಸಬೇಕಿದೆ. 
ಸತ್ಯಕ್ಕಿರುವ ಶಕ್ತಿಯ ಮೇಲೆ ನಾವು ಹೆಚ್ಚು ನಂಬಿಕೆಯನ್ನು ಇಟ್ಟಿದ್ದೇವೆ. ನನ್ನ ತಂದೆ ನನಗೆ ಪ್ರಾಮಾಣಿಕತೆ, ಸತ್ಯತೆಯನ್ನು ಹೇಳಿಕೊಂಡಿದ್ದರು. ಇದನ್ನೇ ನಾನೂ ನನ್ನ ಮಗ ಹೃತಿಕ್'ಗೆ ಹೇಳಿಕೊಟ್ಟಿದ್ದೇನೆ. ಶೀಘ್ರದಲ್ಲಿಯೇ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದು ತಿಳಿಸಿದ್ದಾರೆ. 
ತಮ್ಮ ವಿರುದ್ಧ ನಟಿ ಕಂಗನಾ ಅವರು ಸಾಕಷ್ಟು ಆರೋಪಗಳನ್ನು ಮಾಡುತ್ತಿದ್ದರೂ ಇಷ್ಟೂ ದಿನ ಮೌನ ವಹಿಸಿದ್ದ ನಟ ಹೃತಿಕ್ ರೋಷನ್ ಅವರು ಒಮ್ಮೆಲೆ ಸ್ಫೋಟಗೊಂಡಿದ್ದರು. ನಟಿ ಕಂಗನಾ ತಮ್ಮ ಬೆನ್ನು ಬಿಡದಂತೆ ಹಿಂಸಿಸುತ್ತಿದ್ದಾರೆಂದು ಆರೋಪಿಸಿ 29 ಪುಟಗಳ ದೂರು ನೀಡಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

SIR ಗೆ ಆಕ್ಷೇಪ; ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಥಾಣೆ ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿ - ವ್ಯಾನ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ 11 ಮಂದಿ ಸಾವು

'ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ ಮಾಡುವ ಉದ್ದೇಶ ನನಗಿಲ್ಲ': ಪೋಪ್ ಲಿಯೋ XIV

SCROLL FOR NEXT