ಬಾಲಿವುಡ್ ಶಹನ್ ಷಾ ಗೆ ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ
ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನ ಬಾದ್ ಷಾ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಅ.11, 1942 ರಂದು ಹರಿವಂಶ್ ರಾಯ್ ಬಚ್ಚನ್ ಮತ್ತು ತೇಜಿ ಬಚ್ಚನ್ ದಂಪತಿಗೆ ಜನಿಸಿದ ಬಾಲಿವುಡ್ ನ ಶೆಹನ್ ಷಾ ಗೆ ಇಂದು 75 ವರ್ಷ.
"ಜನುಮದಿನದ ಶುಭಾಶಯ@SrBachchan! ಅವರ ಸಿನಿಮೀಯ ಪ್ರತಿಭೆ ಮತ್ತು ಸಾಮಾಜಿಕ ಕಾರ್ಯಗಳಿಗೆ ಅವರ ಬೆಂಬಲದ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ, ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ." ಎಂದು ಪ್ರಧಾನಿ ಮೋದಿ ಇಂದು ಟ್ವೀಟ್ ಮಾಡಿದ್ದಾರೆ.
1970 ರ ದಶಕದ 'ಜಂಜೀರ್' ಮತ್ತು 'ದೀವಾರ್' ಚಿತ್ರಗಳಲ್ಲಿ ಅವರ 'ಆಂಗ್ರಿ ಯಂಗ್ ಮ್ಯಾನ್' ಪಾತ್ರಕ್ಕಾಗಿ ಜನಪ್ರಿಯತೆಯ ಉತ್ತುಂಗಕ್ಕೇರಿದ್ದರು.
ಬಿಗ್ ಬಿ ತನ್ನ ವೃತ್ತಿಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಇದರಲ್ಲಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹದಿನೈದು ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದೆ. ಅಲ್ಲದೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳು ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಅನೇಕ ಪ್ರಶಸ್ತಿಗಳು ಇವರಿಗೆ ಒಲಿದು ಬಂದಿದೆ.