ಬೆಂಗಳೂರು: ಕಲರ್ಸ್ ಸೂಪರ್ ಚಾನೆಲ್' ನಲ್ಲಿ ಇದೇ ಭಾನುವಾರದಿಂದ (ಅ.15) ಬಿಗ್ ಬಾಸ್ ಕನ್ನಡ ಸೀಸನ್ 5 ಅದ್ದೂರಿ ಪ್ರಾರಂಭ ಕಾಣಲಿದೆ. ಈ ವೇಳೆ ಬಿಗ್ ಬಾಸ್ ರಿಯಾಲಿಟಿ ಶೋ ಕುರಿತು ವಿವರಿಸಲು ಪತ್ರಿಕಾಗೋಷ್ಠಿ ಕರೆದಿದ್ದ ಸುದೀಪ್ '"ಬಿಗ್ ಬಾಸ್ ಬಗ್ಗೆ ದಿನದಿಂದ ದಿನಕ್ಕೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ, ಇದು ನನಗೆ ಖುಷಿ ಕೊಟ್ಟಿದೆ'" ಎಂದರು.
"ಸಾಮಾನ್ಯವಾಗಿ ಎಲ್ಲಾ ಟಿವಿ ಶೋ ಗಳು ವರ್ಷದಿಂದ ವರ್ಷಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿವೆ. ಆದರೆ ಬಿಗ್ ಬಾಸ್ ಮಾತ್ರ ಪ್ರತಿ ಸೀಸನ್ ಗೆ ತನ್ನ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ" ಎಂದು ಕಿಚ್ಚ ಸುದೀಪ್ ಸಂತಸ ಹಂಚಿಕೊಂದರು.
"ವರ್ಷದ ಹಿಂದೆ ಪ್ರಾರಂಬವಾದ ಕಲರ್ಸ್ ಸೂಪರ್ ಚಾನಲ್ ನಲ್ಲಿ ಈ ಬಾರಿ ಬಿಗ್ ಬಾಸ್ ಪ್ರಸಾರ ಕಾಣುತ್ತಿರುಉವುದು ಚಾನೆಲ್ ನ ಜನಪ್ರಿಯತೆ ಹೆಚ್ಚಿಸಲು ಸಹಕಾರಿಯಾಗಲಿದೆ " ಎಂದು 'ವಯಾಕಾಂ 18'ನ ಪ್ರಾದೇಶಿಕ ಮನರಂಜನಾ ವಿಭಾಗದ ಮುಖ್ಯಸ್ಥ ರವೀಶ್ ಕುಮಾರ್ ಹೇಳಿದ್ದಾರೆ.
ಬಿಗ್ ಬಾಸ್ ಗಾಗಿ ಈ ಬಾರಿ ಸಹ ಹೊಸ ಮನೆ ನಿರ್ಮಾಣ ಮಾದಲಾಗಿದ್ದು ಸುದೀಪ್ ಭಾನುವಾರ ಈ ಮನೆಯನ್ನು ವೀಕ್ಷಕರಿಗೆ ಪರಿಚಯಿಸಲಿದ್ದಾರೆ. ಈ ಬಾರಿ ಒಟ್ಟು 17 ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಲಿದ್ದು ಅವರಲ್ಲಿ 6 ಮಂದಿ ಸಾಮಾನ್ಯ ನಾಗರಿಕರೂ ಸೇರಿದ್ದಾರೆ.
"ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಅವಕಾಶ ಕೋರಿ 'ವೂಟ್' ಆ್ಯಪ್ ಮೂಲಕ 40 ಸಾವಿರಕ್ಕೆ ಮಿಕ್ಕಿ ವೀಡಿಯೋ ಗಳು ಬಂದಿದ್ದವು. ಅವುಗಳಲ್ಲಿ ಅಂತಿಮವಾಗಿ 6 ಜನರನ್ನು ಆಯ್ಕೆ ಮಾದಲಾಗಿದೆ" ಎಂದು ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್‍ನ ಬ್ಯುಸಿನೆಸ್ ಹೆಡ್, ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದರು.